ಶನಿವಾರ, ಜನವರಿ 17, 2015

General knowledge

ಹಿಡಕಲ್ ಅಣೆಕಟ್ಟು ಬೆಳಗಾಂ ಜಿಲ್ಲೆಯಲ್ಲಿ, ಕೆ.ಆರ್.ಎಸ್. ಅಣೆಕಟ್ಟು ಮಂಡ್ಯ ಜಿಲ್ಲೆಯಲ್ಲಿ, ಮಾಣಿ ಜಲಾಶಯ ಶಿವಮೊಗ್ಗ ಜಿಲ್ಲೆಯಲ್ಲಿ, ವರಾಹಿ ಜಲಾಶಯ ಉಡುಪಿ ಜಿಲ್ಲೆಯಲ್ಲಿ,  ಕೊಡಸಳ್ಳಿ, ಕದ್ರ, ಸೂಪ ಜಲಾಶಯ ಉತ್ತರ ಕನ್ನಡ ಜಿಲ್ಲೆಯಲ್ಲಿ, ಬಸವಸಾಗರ (ನಾರಾಯಣಪುರ) ಜಲಾಶಯ ಗುಲ್ಬರ್ಗ ಜಿಲ್ಲೆಯಲ್ಲಿ,     ಲಿಂಗನಮಕ್ಕಿ ಜಲಾಶಯ ಶಿವಮೊಗ್ಗ ಜಿಲ್ಲೆಯಲ್ಲಿ,     ಹಾರಂಗಿ ಜಲಾಶಯ ಕೊಡಗು ಜಿಲ್ಲೆಯಲ್ಲಿ,     ಸುವರ್ಣವತಿ ಜಲಾಶಯ ಚಾಮರಾಜನಗರ ಜಿಲ್ಲೆಯಲ್ಲಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ,      ಪಶು ವಿ.ವಿ. ಬೀದರ್ ಜಿಲ್ಲೆಯಲ್ಲಿ, ಕಾನೂನು ವಿ.ವಿ. ಹುಬ್ಬಳ್ಳಯಲ್ಲಿದೆ

ಪ್ರಸ್ತುತ ಗುರುಗ್ರಹ 62 ಉಪಗ್ರಹ ಮತ್ತು ಶನಿಗ್ರಹ 61 ಉಪಗ್ರಹ ಹೊಂದೆವೆ

ಭಾರತದ ಅಣುಶಕ್ತಿ ಇಲಾಖೆಯು ನೇರವಾಗಿ ಪ್ರಧಾನಮಂತ್ರಿಯವರ ಕಾರ್ಯಾಲಯದ ಅಡಿಯಲ್ಲಿ ಬರುತ್ತದೆ

ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ವೈಷ್ಣವ ಜನತೋ ತೆನೆ ಕಹಿಯೇ ಗೀತೆಯ ರಚನಕಾರರು ಪಿ.ಡಿ.ನರಸಿಂಹ ಮೆಹತ

2011ರ ವಿಶ್ವಕಪ್ ಕ್ರಿಕೇಟಿನಲ್ಲಿ ಭಾಗವಹಿಸಲು ಆಯ್ಕೆಯಾದ ಹೊಸ ರಾಷ್ಟ್ರಗಳು ಐರ್ಲೆಂಡ್, ಕೆನಡಾ, ನೆದರ್ ಲ್ಯಾಂಡ್, ಕೀನ್ಯಾ.

ಕನ್ನಡ ಶಾರ್ಟ್ ಹ್ಯಾಂಡ್ ಕಂಡುಹಿಡಿದವರು ರೆವೆರೆಂಡ್.ಬಿ.ಲೂಠಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ನೇಮಕವಾದ ಆಯೋಗ ಲ್ಹಿಬರಾನ್ ಆಯೊಗ ಇದು ತನ್ನ ವರದಿ ಸಲ್ಲಿಸಲು ತೆಗೆದುಕೊಂಡ ಅವಧಿ 17 ವರ್ಷ

ಪ್ಲಾಸ್ಮಾ T.V. ಯಲ್ಲಿ ನಿಯಾನ್(neon) ಮತ್ತು ಗ್ಸೆನಾನ್ (xenon) ಅನಿಲಗಳು ಬೆಳಕನ್ನು RGB ಬಣ್ಣಗಳಾಗಿ ಪರಿವರ್ತಿಸುತ್ತದೆ

ಮಾನವನ ಶ್ರವ್ಯ ಅಲೆಯ ಮಿತಿ 20 ಹರ್ಟ್ಸ್ ನಿಂದಿ 20000 ಹರ್ಟ್ಸ್ ವರೆಗೆ

ನಂದಿತಾದಾಸ್ ಇಂಡಿಯನ್ ಚಿಲ್ಡ್ರನ್ ಫಿಲಂ ಇನ್ಸ್ಟಿಟ್ಯೂಟ್ ಅಧ್ಯಕ್ಷೆ

ಇತ್ತೀಚೆಗೆ Where are you ಎಂಬ ವಾಕ್ಯವು Anti Doping Agency Agreement (WADA) ಗೆ ಸಂಬಂಧಿಸಿದೆ

ಸಂವಿಧಾನದ ಕಲಂ 243D ಭಾರತದ ಪಂಚಾಯತಿಗಳಲ್ಲಿ ಮಹಿಳೆಯರಿಗೆ 50% ಸ್ಥಾನ ಕಲ್ಪಿಸುವುದಾಗಿದೆ

STPF ಎಂದರೆ Special Tiger Protection Force, ಭಾರತವು ಫೆಬ್ರವರಿ 14ನ್ನು ಹುಲಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ

INS ವಿರಾಟ್ ಜೆಟ್ ವಿಮಾನ ಚಲಿಸಲನುಕೂಲವಾಗಿರುವ ಭಾರತದ ಯುಧ್ಧನೌಕೆ

ಜನವರಿ 24 ರಾಷ್ಟ್ರೀಯ ಹೆಣ್ಣುಮಗುವಿನ ದಿನ

CDMA ಎಂದರೆ Code Division Multiple Access

ಭಾರತದ ಪ್ರಧಮ ಮಹಿಳಾ ಸೀಮಾ ಸುರಕ್ಷದಳ ಪಂಜಾಬಿನ ರೋರನ್ ವಾಲಾ ಚೆಕ್ ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದೆ
ಹಿಂದೂ ಮಹಾಸಾಗರದಲ್ಲಿರುವ ಡಿಯೋಗ್ರೇಷಿಯಾ ದ್ವೀಪವು ಯು.ಎಸ್. ನೌಕಾದಳಕ್ಕೆ ಸಂಬಂಧಿಸಿದೆ
Posted by:
Dayanand.m.donagapure
Gorta[B]

ವಾಸ್ಕೋ ಡ ಗಾಮ or ಪೋರ್ಚುಗೀಸ್ ನಾವಿಕ

ವಾಸ್ಕೋ ಡ ಗಾಮ or ಪೋರ್ಚುಗೀಸ್ ನಾವಿಕ.
ಭಾರತಕ್ಕೆ ಪ್ರಥಮಬಾರಿಗೆ
ನೇರವಾಗಿ ಯುರೋಪಿನಿಂದ ಬಂದ ಹಡಗಿನ ಮುಖ್ಯ
ನಾವಿಕನಾಗಿದ್ದನು.
ಅಲ್ಪಕಾಲ ಭಾರತದಲ್ಲಿ ಪೋರ್ಚುಗೀಸ್
ವಸಾಹತಿನ ವೈಸರಾಯ್ ಆಗಿದ್ದನು.
ವಾಸ್ಕೊ ಡ ಗಾಮನ ಪ್ರಥಮ ಯಾನದ ಪಥ
(೧೪೯೭-೧೪೯೯)
ವಾಸ್ಕೋ ಡ ಗಾಮ ಕಲ್ಲಿಕೋಟೆಯಲ್ಲಿ ಬಂದಿಳಿದ ಕ್ಷಣ
ಕಲ್ಲಿಕೋಟೆ,ಮೇ ೨೦, ೧೪೯೮.
ಜನನ, ಆಲೇಂತೇಜೂ ಪ್ರಾಂತದ ಸ್ಪೆನ್ಸನಲ್ಲಿ. ಗಾಮನ
ಬಾಲ್ಯದ ಬಗ್ಗೆ ವಿವರಗಳು ತಿಳಿದುಬಂದಿಲ್ಲ. 1492ರಲ್ಲಿ
ಕೆಲವು ಫ್ರೆಂಚ್ ಹಡಗುಗಳನ್ನು ವಶಪಡಿಸಿಕೊಳ್ಳುವ
ಸೈನ್ಯಕಾರ್ಯಾಚರಣೆಯಲ್ಲಿ ಈತ ಪಾತ್ರವಹಿಸಿದ್ದ. ಗುಡ್ಹೋಪ್
ಭೂಶಿರವನ್ನು ಕಂಡುಹಿಡಿದ ಬಾರ್ತಲೋಮ್ಯು ಡೀಯಷನ
ಕಾರ್ಯವನ್ನು ಮುಂದುವರಿಸಿ ಭಾರತಕ್ಕೆ ಸಮುದ್ರ
ಮಾರ್ಗವನ್ನು ಕಂಡುಹಿಡಿಯುವ ಕಾರ್ಯದಲ್ಲಿ ಪೋರ್ಚುಗಲ್
ದೊರೆ ಎರಡನೆಯ ಜಾನನಿಂದ ನಿಯುಕ್ತನಾದ. ಈ
ಅನ್ವೇಷಣ ಯಾತ್ರೆ 1497ರ ಜುಲೈ 8 ರಂದು ಲಿಸ್ಬನಿನಿಂದ
ಹೊರಟಿತು.
ಗಾಮನ ವಶದಲ್ಲಿ ನಾಲ್ಕು ಹಡಗುಗಳಿದ್ದವು.
ಇವನ ಯಾತ್ರೆ
ಕ್ಯಾನರೀ ದ್ವೀಪಗಳನ್ನು ತಲುಪಿದ್ದು ಜುಲೈ 15
ರಂದು. ನಾವಿಕರ ತಂಡ ಆ ತಿಂಗಳ
26ರಂದು ಕೇಪ್ವರ್ಡ್ ದ್ವೀಪಗಳನ್ನು ತಲುಪಿತು. ಆಗಸ್ಟ್
3 ರವರೆಗೂ ಅಲ್ಲೇ ತಂಗಿದ್ದು,
ಗಿನೀ ಕೊಲ್ಲಿಯ ಪ್ರವಾಹಕ್ಕೆ
ಸಿಲುಕದಂತೆ ದಕ್ಷಿಣ ಅಟ್ಲಾಂಟಿಕ್ ಮೂಲಕ
ಬಳಸು ದಾರಿಯಲ್ಲಿ, ಗುಡ್ಹೋಪ್ ಭೂಶಿರದ ಕಡೆಗೆ ಸಾಗಿ, ನವೆಂಬರ್ 7
ರಂದು ಸೇಂಟ್ ಹೆಲೀನಾ ಕೊಲ್ಲಿ
ಸೇರಿತು. ನವೆಂಬರ್ 16ರ ವರೆಗೂ ಅಲ್ಲೇ ಇದ್ದು ಅನಂತರ
ಮುಂದುವರಿದ ಪ್ರಯಾಣ ಪ್ರತಿಕೂಲ ಮಾರುತಗಳಿಂದಾಗಿ
ತಡವಾಗಿ ಗುಡ್ಹೋಪ್ ಭೂಶಿರವನ್ನು ಬಳಸಿ ಮಾಸೆಲ್ ಕೊಲ್ಲಿ
ತಲುಪಿ, ಡಿಸೆಂಬರ್ 8ರಂದು ಅಲ್ಲಿಂದ
ಹೊರಟು 25 ರಂದು ನಟ್ಯಾಲ್
ತೀರವನ್ನು ಸೇರಿತು. ಮರುವರ್ಷದ ಮಾರ್ಚ್
2ರಂದು ಮೋಂಬಿಕ್ ತಲುಪಿತು. ಗಾಮ ಮತ್ತು ಇವನ
ಸಹಪ್ರಯಾಣಿಕರು ಮುಸ್ಲಿಮರೆಂದು ನಂಬಿ ಅಲ್ಲಿನ ಸುಲ್ತಾನ
ಗಾಮನಿಗೆ ಇಬ್ಬರು ಚಾಲಕರ ನೆರವು ನೀಡಿದ.
ಪೋರ್ಚುಗೀಸರು ಕ್ರೈಸ್ತರೆಂಬುದನ್ನು ತಿಳಿದು ಆ
ಚಾಲಕರಲ್ಲೊಬ್ಬ ಇವರನ್ನು ತ್ಯಜಿಸಿದ. ಗಾಮ
ಮೊಂಬಾಸವನ್ನು ತಲುಪಿದ್ದು ಏಪ್ರಿಲ್
7ರಂದು. ಮಲಿಂಡಿಯಲ್ಲಿ ತಂಗಿ, ಕಲ್ಲಿಕೋಟೆಗೆ ಹಾದಿ
ಗೊತ್ತಿದ್ದ ಚಾಲಕನೊಬ್ಬನ
ನೆರವಿನಿಂದ ಈತ ಯಾನ ಮುಂದುವರಿಸಿದ. 23 ದಿನಗಳ ಕಾಲ
ಹಿಂದೂಸಾಗರದಲ್ಲಿ ಸಾಗಿದ ಮೇಲೆ ಘಟ್ಟಗಳು ಕಾಣಿಸಿದುವು.
ಮೇ 20ರಂದು ಗಾಮ ಕಲ್ಲಿಕೋಟೆ ತಲುಪಿದ.
ಭಾರತವನ್ನು ತಲುಪಿದ್ದರ ಕುರುಹಾಗಿ ಗಾಮ
ಅಲ್ಲೊಂದು ಶಿಲಾಸ್ತಂಭ ನೆಟ್ಟ. ಅಲ್ಲಿಯ
eóÁಮೊರಿನ್ ದೊರೆಯಿಂದ
ಗಾಮನಿಗೆ ಸ್ವಾಗತ ದೊರಕಿತು. ಆದರೆ ಅಲ್ಲಿಯ
ಕೆಲವು ಮುಸ್ಲಿಂ ವ್ಯಾಪಾರಿಗಳ ವಿರೋಧದಿಂದಾಗಿ
ದೊರೆಯೊಂದಿಗೆ ಯಾವ
ಒಪ್ಪಂದವನ್ನೂ ಇವನಿಗೆ ಮಾಡಿಕೊಳ್ಳಲಾಗಲಿಲ್ಲ.
ಆಗಸಸ್ಟ್ ತಿಂಗಳ ಕೊನೆಯಲ್ಲಿ ಗಾಮ
ಭಾರತದಿಂದ ಹಿಂದಕ್ಕೆ ಹೊರಟ.
ಅಂಜೆದಿವ ದ್ವೀಪಕ್ಕೆ ಹೋಗಿ ಅಲ್ಲಿಂದ
ಮಲಿಂಡಿಗೆ ಪ್ರಯಾಣ ಬೆಳೆಸಿದ. ಮಾರುತಗಳು ಅನುಕೂಲಪ್ರದವಾಗಿರ
ಲಿಲ್ಲವಾದ್ದರಿಂದ
ಅರಬ್ಬೀ ಸಮುದ್ರವನ್ನು ದಾಟಲು ಇವನಿಗೆ
ಮೂರು ತಿಂಗಳುಗಳ ಕಾಲ ಬೇಕಾಯಿತು. ನಾವಿಕರಲ್ಲಿ
ಅನೇಕರು ಕಾಯಿಲೆಯಿಂದ ಸತ್ತರು. ಮರುವರ್ಷ ಮಾರ್ಚ್
ತಿಂಗಳಲ್ಲಿ ಗುಡ್ಹೋಪ್ ಭೂಶಿರವನ್ನು ಬಳಸಿ ಮುಂದುವರಿಯುವಾಗ
ಬಿರುಗಾಳಿಯಿಂದ ತೊಂದರೆಯಾಯಿತು.
ಉಳಿದಿದ್ದ ಎರಡು ಹಡಗುಗಳೂ ಪರಸ್ಪರ ಬೇರ್ಪಟ್ಟವು. ಗಾಮ
ಟರ್ಸೇಯಿರ ದ್ವೀಪವನ್ನು ತಲುಪಿ ತನ್ನ
ಹಡಗನ್ನು ಲಿಸ್ಬನಿಗೆ ಮುಂದಾಗಿ ಕಳಿಸಿದ. ಅವನು ಲಿಸ್ಬನ್
ತಲಪಿದ್ದು ಸೆಪ್ಟೆಂಬರ್ 9ರಂದು. ಟರ್ಸೇಯಿರದಲ್ಲಿ
ತೀರಿಕೊಂಡಿದ್ದ ಸೋದರನಿಗಾಗಿ
ಶೋಕವನ್ನಾಚರಿಸಿ ಸೆಪ್ಟೆಂಬರ್ 18ರಂದು ಗಾಮ ವಿಜಯ
ಮೆರೆವಣಿಗೆಯಲ್ಲಿ ಲಿಸ್ಬನ್ ಪ್ರವೇಶಿಸಿದ. ದೊರೆ
1ನೆಯ ಮ್ಯಾನ್ಯುಯೆಲ್ ಇವನಿಗೆ ಡಾಂ ಎಂಬ
ಬಿರುದನ್ನೂ ವರ್ಷಾಶನವನ್ನೂ ನೆಲದ
ಉಂಬಳಿಯನ್ನೂ ಕೊಟ್ಟು ಗೌರವಿಸಿದ.
ಅನಂತರ ದೊರೆಯ ಆದೇಶದಂತೆ ಕವ್ರಾಲ್
ಎಂಬುವನು ಭಾರತಕ್ಕೆ ಬಂದು ಕಲ್ಲಿಕೋಟೆಯಲ್ಲಿ
ಕೋಠಿಯೊಂದನ್ನು ಸ್ಥಾಪಿಸಿದ. ಅಲ್ಲಿ ಉಳಿದಿದ್ದ
ಪೋರ್ಚುಗೀಸರು ಕವ್ರಾಲನ ನಿರ್ಗಮನಾನಂತರ
ಕೊಲೆಗೆ ಈಡಾದರು. ಇದಕ್ಕೆ ಪ್ರತೀಕಾರ
ಮಾಡಬೇಕೆಂಬ ಸೂಚನೆಯೊಂದಿಗೆ
ದೊರೆ ಗಾಮನನ್ನು ಮತ್ತೆ ಭಾರತಕ್ಕೆ ಕಳುಹಿಸಿದ. ಇವನಿಗೆ
ಭಾರತ ಸಮುದ್ರದ ಅಡ್ಮಿರಲ್ ಎಂಬ ಬಿರುದು ದತ್ತವಾಯಿತು.
ದೊರೆ ಇವನಿಗೆ ಹಲವಾರು ವ್ಯಾಪಾರ
ಸವಲತ್ತುಗಳನ್ನೂ ನೀಡಿದ. ಗಾಮ ಭಾರತವನ್ನು ತಲುಪಿ
ದೊಡನೆಯೇ ಕಲ್ಲಿಕೋಟೆಯನ್ನು ಉಡಾಯಿಸಿ, ಭಾರತದ
ಯುದ್ಧನೌಕೆಗಳನ್ನು ನಿರ್ನಾಮ ಮಾಡಿದ. ಅನಂತರ
ಕೊಚ್ಚಿಗೆ ಹೋಗಿ ಅಲ್ಲಿ ತನ್ನ ದೇಶಕ್ಕೆ ಅನುಕೂಲವಾದ
ವ್ಯಾಪಾರ ಒಪ್ಪಂದ
ಮಾಡಿಕೊಂಡು ಸ್ವದೇಶಕ್ಕೆ ಹಿಂದಿರುಗಿದ
(1503). ಇವನ ವ್ಯಾಪಾರದಿಂದಾಗಿ ಗಾಮ ಪೋರ್ಚುಗಲಿನಲ್ಲಿಯೇ
ಅತ್ಯಂತ ಶ್ರೀಮಂತನಾದ.
ಇವನು ಅನಂತರ ವಿಶ್ರಾಂತ ಜೀವನ
ನಡೆಸಿದರೂ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ
ದೊರೆಗೆ ಸಲಹೆ ನೀಡುತ್ತಿದ್ದ. 1519ರಲ್ಲಿ
ಇವನಿಗೆ ವಿಡಿಗೈರಿರದ ಕೌಂಟ್ ಪದವಿ ದೊರಕಿತು.
1524ರಲ್ಲಿ ಈತ ಭಾರತದ ವೈಸ್ರಾಯ್ ಆದ. ಇವನು ನಿಧನನಾದ
1524ರ ಡಿಸೆಂಬರ್ 24ರಂದು ಈತ ನಿಧನ
ಹೊಂದಿದ.
Posted by:
Dayanand.m.donagapure
Gorta (B)

ಭಾನುವಾರ, ಜನವರಿ 11, 2015

2.ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು:

೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು.

ಕಾರ್ನಾಡ ಸದಾಶಿವರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.

ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು.

ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು.

ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು.
ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.

1.ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು :

ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು

ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರೀಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ.
ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯ ದ ಆಳ್ವಿಕೆಗೆ ಒಳಪಡುವ ಮೊದಲು ನಂದ ಸಾಮ್ರಾಜ್ಯದ ಭಾಗವಾಗಿತ್ತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು.
ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗೂ ಅದರ ರಾಜಧಾನಿ ಬನವಾಸಿಯಾಗಿತ್ತು.ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ. ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯ ದಾತರಾಗಿದ್ದರು.
ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ.ಶ.೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗೂ ಪೂರ್ವ ಚಾಲುಕ್ಯರ ವಿರುದ್ಧ ನಿರಂತರ ಕಾಳಗದಲ್ಲಿರುತ್ತಿದ್ದರು.
ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯ ಸ್ಥಿತಿಯನ್ನು ತಲುಪಿದವು.ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು.ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು.ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.
೧೫೬೫ರಲ್ಲಿ, ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು.ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು, ದಖನ್ ಪ್ರದೇಶವನ್ನು ಆಳುತ್ತಿದ್ದರು. ೧೭ನೆಯ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲ್‌ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗೂ ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗೂ ಅನ್ಯ ರಾಜರು ಆಳುತ್ತಿದ್ದರು.
ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು.
ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು.

ಬ್ರಿಟಿಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು. ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು.

ಕರ್ನಾಟಕದ ಸಂಪೂರ್ಣ ಚಿತ್ರಣ ಓದ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.

"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಕರ್ನಾಟಕವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳು ನಾಡುವಿನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.
ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ ಮತ್ತು ರಾಜ್ಯದಲ್ಲಿ ಮೊದಲ ಬಾರಿಗೆ ಶಿವಲಿಂಗ ಕೂಡ್ಲಿ ಇವರು ರಾಯಚೂರು ಜಿಲ್ಲೆಯವರು ಇವರ ಸಾಧನೆ ತು‍೦ಬ ಅಪಾರ.

ರಾಜ್ಯದ ನೂತನ ರಾಜ್ಯಪಾಲರಾಗಿ ವಾಜುಭಾಯ್‌ ವಾಲಾ ರಾಜಭವನದಲ್ಲಿ ದಿ.1-9-2014 ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಪ್ರಮಾಣವಚನ ಬೋಧಿಸಿದರು.
Posted by:
Dayananand.m.donagapure
Gorta(B)

ಸೋಮವಾರ, ಜನವರಿ 5, 2015

* ಪ್ರಮುಖ ಹಣಕಾಸು ಸಂಸ್ಥೆಗಳು - ಸ್ಥಾಪನೆಯಾದ ವರ

* ಪ್ರಮುಖ ಹಣಕಾಸು ಸಂಸ್ಥೆಗಳು - ಸ್ಥಾಪನೆಯಾದ ವರ್ಷ

1.ಇಂಪೀರಿಯಲ ಬ್ಯಾಂಕ್ ಆಪ್ ಇಂಡಿಯಾ - 1921.

2.ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಎಪ್ರಿಲ್ 1, 1935 ( ಜನೆವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )

3.ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆ - 1948.

4.ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.

5.ಯೂನಿಟ್ ಟ್ರಸ್ಟ್ ಆಪ್ ಇಂಡಿಯಾ (ಯು .ಟಿ. ಐ ) - ಫೆಬ್ರವರಿ 1, 1964.

6.ಯು.ಟಿ. ಐ. ವಿಭಜನೆ - ಫೆಬ್ರವರಿ 2003 .

7.ಐ. ಡಿ . ಬಿ. ಐ. - ಜುಲೈ 1964.
ನಬಾರ್ಡ್ - ಜುಲೈ 12, 1982.

8.IRBI ( 1997 ಮಾರ್ಚ್ 6 ರಿಂದ IIBIAL ಎಂದು ಮರುನಾಮಕರಣ) - ಮಾರ್ಚ್ 20, 1985.

9.SIDBI - ಜನವರಿ 1, 1982.
ಜೀವ ವಿಮಾ ನಿಗಮ (LIC) - ಸೆಪ್ಟೆಂಬರ್ 1956.

10.ಸಾಮಾನ್ಯ ವಿಮಾ ನಿಗಮ ( GIC) - ನವೆಂಬೆರ್ 1972.

11.ರಿಜಿನಲ್ ರೂರಲ್ BYAANKS -ಅಕ್ಟೊಬರ್ 2, 1975.

12.ರಿಸ್ಕ್ ಕ್ಯಾಪಿಟಲ್ ಹಾಗು ಟೆಕ್ನಾಲಜಿ ಪೈನಾನ್ಸ್ ಕಾರ್ಪೋರೇಶನ್ ಲಿ. -1989

13.ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಗೂ ಪೈನಾನ್ಸಯಾಲ್ ಸರ್ವಿಸೆಸ್ ಲಿ. - 1988.

14.ಹೌಸಿಂಗ್ ಡೆವಲೆಪ್ಮೆಂಟ್ ಪೈನಾನ್ಸ್ ಕಾರ್ಪೋರೇಶನ್ ಲಿ. - 1977 .
Posted by:
Dayanand.m.donagapure
Gorta(B)

ಗುರುವಾರ, ಜನವರಿ 1, 2015

"ಸಾಮಾನ್ಯ ಜ್ಞಾನ " (1.1.2015)

1. 'ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

A. ಆಸಿಯಾನ.
B. ಜಿ-20.
C. ನ್ಯಾಟೋ.
D. ಬ್ರಿಕ್ಸ್.◆◇

2. 'ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ?

A. ಆನೆಗಳ ಅಧ್ಯಯನ.
B. ಶ್ವಾನ ವಿಜ್ಞಾನ.
C. ಮತ್ಸ್ಯ ವಿಜ್ಞಾನ.
D. ಇರುವೆ ವಿಜ್ಞಾನ.◆◇

3. 2018 ರ ಕಾಮನವೆಲ್ತ ಕ್ರೀಡೆಗಳು ಎಲ್ಲಿ ಜರುಗಲಿವೆ?

A. ಇಂಡೋನೇಷ್ಯಾ.
B. ಆಸ್ಟ್ರೇಲಿಯಾ.◆◇
C. ಬ್ರೆಜಿಲ್.
D. ಭಾರತ.

4. ವಲ್ಲಭಭಾಯಿ ಪಟೇಲರಿಗೆ 'ಸರ್ದಾರ್' ಬಿರುದು ನೀಡಿದ್ದು ಯಾರು?

A. ಸಿ.ರಾಜಗೋಪಾಲಾಚಾರಿ.
B. ಎಂ.ಕೆ.ಗಾಂಧಿ.◆◇
C. ಜೆ.ಎಲ್. ನೆಹರೂ.
D. ಎಂ.ಎ.ಜಿನ್ನಾ.

5. 'ಮೃತ ಸಮುದ್ರ' ಯಾವ ದೇಶದಲ್ಲಿದೆ?

A. ತೈವಾನ್.
B. ತಾಂಜೇನಿಯಾ.
C. ಜೋರ್ಡಾನ್.◆◇
D. ಮಂಗೋಲಿಯಾ.

6. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಚಿಟ್ಟೆ ಪಾರ್ಕ ಇದೆ?

A. ಉತ್ತರ ಕನ್ನಡ.
B. ಚಾಮರಾಜನಗರ.
C. ಮೈಸೂರು.
D. ಉಡುಪಿ.◆◇

7. 'ಗಂಗೋತ್ರಿ ರಾಷ್ಟ್ರೀಯ ಉದ್ಯಾನ' ಯಾವ ರಾಜ್ಯದಲ್ಲಿದೆ?

A. ಉತ್ತರಪ್ರದೇಶ.
B. ಗುಜರಾತ್.
C. ಹಿಮಾಚಲ ಪ್ರದೇಶ.
D. ಉತ್ತರಖಂಡ.◆◇

8. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಎಲ್ಲಿದೆ?

A. ಮುಂಬೈ.◆◇
B. ದೆಹಲಿ.
C. ಬೆಂಗಳೂರು .
D. ಕಲ್ಕತ್ತ.

9. 'ಭಿತ್ತಿ' ಇದು ಯಾರ ಆತ್ಮಕಥೆ?

A. ಬರಗೂರು ರಾಮಚಂದ್ರಪ್ಪ.
B. ಚಂದ್ರಶೇಖರ ಕಂಬಾರ.
C. ಕೆ.ಎಸ್.ನರಸಿಂಹಸ್ವಾಮಿ.
D. ಎಸ್.ಎಲ್. ಭೈರಪ್ಪ.◆◇

10. ಪ್ರಸ್ತುತ ಕ್ರೈಸ್ತರ ಪರಮೋಚ್ಚ ಧರ್ಮಗುರು ಯಾರು?

A. ಪೋಪ್ ಜಾನ್ ಪಾಲ್ II.
B. ಪೋಪ್ ಬೆನಡಿಕ್ಟ್ XVI.
C. ಪೋಪ್ ಫ್ರಾನ್ಸಿಸ್.◆◇
D. ಪೋಪ್ ಜಾನ್ XXIII.
Posted by:
Dayanand.m.donagapure
Gorta (B)