ಬುಧವಾರ, ಜುಲೈ 29, 2015

★ ಸಾಮಾನ್ಯ ಜ್ಞಾನ(General Knowledge):

★ ಸಾಮಾನ್ಯ ಜ್ಞಾನ(General Knowledge):

1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.

4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.

9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.

24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.

25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.

27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.

33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .

35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ?
★ 1.

40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.

ಮಂಗಳವಾರ, ಜುಲೈ 28, 2015

ಅಬ್ದುಲ್ ಕಲಾಂ ಜೀವನಪಥ

*******ಅಬ್ದುಲ್ ಕಲಾಂ******
ದೇಶಕಂಡ ಅತ್ಯದ್ಬುತ ಮನುಷ್ಯ, ವಿಜ್ಞಾನಿ, ಯಶಸ್ವಿ ಮಾಜಿ ರಾಷ್ಟ್ರಪತಿ, ಸರಳ ಜೀವಿಯಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರು ಇಂದು ನಮ್ಮ ಜೊತೆಗೆ ಇಲ್ಲದಿರಬಹುದು. ಆದರೆ ಅವರು ಎಂದೆಂದಿಗೂ ಭಾರತೀಯರ ಮನಸ್ಸಿನಲ್ಲಿ, ಹೃದಯದಲ್ಲಿ ಎಂದೆಂದಿಗೂ ಅಜರಾಮರವಾಗಿರುತ್ತಾರೆ. ಅಂತಹ ಮತ್ತೊಬ್ಬ ಕಲಾಂ ರನ್ನು ನಾವು ಕಾಣಲಾರೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೊಮ್ಮೆ ಅವರು ನಮ್ಮ ದೇಶದಲ್ಲಿ ಜನಿಸಲಿ ಎಂದು ಹಾರೈಸೋಣ. ಅವರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

*ಜೀವನಪಥ :- 
1931ಅಕ್ಟೋಬರ್ 15: ತಮಿಳು ನಾಡಿನ ರಾಮೇಶ್ವರಂನಲ್ಲಿ ಜನನ.
1954: ತಿರುಚಿನಾಪಳ್ಳಿ ಸೇಂಟ್ ಜೋಸೆಫ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಪದವಿ.
1960: ಮದ್ರಾಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ.
1960: ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಗೆ ವಿಜ್ಞಾನಿಯಾಗಿ ಸೇರ್ಪಡೆ.
1969: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ವರ್ಗಾವಣೆ.
1980: ರೋಹಿಣಿ ಉಪಗ್ರಹವನ್ನು ಭಾರತದ ಪ್ರಪ್ರಥಮ ಸ್ವದೇಶಿ ನಿರ್ವಿುತ ಎಸ್​ಎಲ್​ವಿ ಉಡಾವಣಾ ವಾಹನ ಮೂಲಕ ಕಕ್ಷೆಗೆ ಸೇರಿಸಿದ ಕೀರ್ತಿ.
1992 ಜುಲೈ: ಪ್ರಧಾನಮಂತ್ರಿ ಅವರಿಗೆ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕ.
1998: ಹೃದಯತಜ್ಞ ಸೋಮರಾಜು ಅವರೊಂದಿಗೆ ಸೇರಿ ‘ಕೊರೊನರಿ ಸ್ಟೆಂಟ್’ ಎಂಬ ಉಪಕರಣದ ಅಭಿವೃದ್ಧಿ.
25 ಜುಲೈ 2002: ಭಾರತದ 11ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ.
2012: ಹೃದಯತಜ್ಞ ಸೋಮ ರಾಜು ಅವರೊಂದಿಗೆ ಸೇರಿ ಗ್ರಾಮೀಣ ಆರೋಗ್ಯ ಸೇವೆಗಾಗಿ ವಿಶೇಷ ಟ್ಯಾಬ್ಲೆಟ್ ನಿರ್ವಣ.
2015 ಜುಲೈ 27: ಶಿಲ್ಲಾಂಗ್​ನಲ್ಲಿ ನಿಧನ.

*ಪ್ರಮುಖ ಕೃತಿಗಳು ವರ್ಷ:-
ಇಂಡಿಯಾ 2020- 1998
ವಿಂಗ್ಸ್ ಆಫ್ ಫೈರ್ 1999
ಇಗ್​ನೈಟೆಟ್ ಮೈಂಡ್ 2002
ಗೈಡಿಂಗ್ ಸೋಲ್ 2005
ಟಾರ್ಗೆಟ್ 3 ಬಿಲಿಯನ್ 2011
ಟರ್ನಿಂಗ್ ಪಾಯಿಂಟ್ಸ್ 2012
ಮೈ ಜರ್ನಿ 2013

*ಪ್ರಶಸ್ತಿಗಳು :-
1.ಪದ್ಮಭೂಷಣ - 1981
2.ಪದ್ಮವಿಭೂಷಣ - 1990
3.ಭಾರತ ರತ್ನ -1997
4.ಇಂದಿರಾ ಗಾಂಧಿ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ - 1998

ಬುಧವಾರ, ಜುಲೈ 15, 2015

ಭಾರತ ಈಗ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರ.

ಭಾರತ ಈಗ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರ.

ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತದ ಜಿಡಿಪಿ 2014ರಲ್ಲಿ ಇದ್ದ 2 ಟ್ರಿಲಿಯನ್ ಡಾಲರ್ ಗಡಿಯಿಂದ ಈಗ 2.067 ಟ್ರಿಲಿಯನ್ (2,067,000,000,000) ಡಾಲರ್​ಗಳಿಗೆ ನೆಗೆದಿದೆ.

ಕೇವಲ 7 ವರ್ಷಗಳಲ್ಲಿ ಭಾರತ ತನ್ನ ಆರ್ಥಿಕತೆಗೆ ಒಂದು ಟ್ರಿಲಿಯನ್​ನ್ನು ಸೇರ್ಪಡೆ ಮಾಡಿದೆ.

ಆದಾಯದ ಆಧಾರದಲ್ಲಿ ಲೆಕ್ಕ ಹಾಕಿದರೆ ಭಾರತ ಇನ್ನೂ ಕೆಳ ಮಧ್ಯಮ ಆದಾಯದ ವರ್ಗದಲ್ಲಿಯೇ ಇದೆ.

ಭಾರತದ ಒಬ್ಬ ವ್ಯಕ್ತಿಯ ಮೇಲಿನ ಒಟ್ಟು ರಾಷ್ಟ್ರೀಯ ಆದಾಯ 1,610 ಡಾಲರ್​ಗೆ ಏರಿದೆ. ಹಾಲಿ ವಿನಿಮಯ ದರದ ಪ್ರಕಾರ ಇದು 1,01,430 ರೂಪಾಯಿಗಳಾಗುತ್ತದೆ.

ಭಾರತವು ಈ ವರ್ಷ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಒಂದು ಎನಿಸಿದೆ.

ಭಾರತದ ಆರ್ಥಿಕತೆ ಚೇತರಿಕೆಯ ಹಂತದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್​ರಾಜನ್ ಗುರುವಾರ ಹೇಳಿದ್ದರು.

‘ಬಂಡವಾಳ ಹೂಡಿಕೆಗಳು ಹೆಚ್ಚುವ ಸಂಕೇತಗಳು ಕಾಣುತ್ತಿವೆ’ ಎಂದು ಅವರು ಹೇಳಿದ್ದರು.

ಭಾರತದ ಜಿಡಿಪಿ ಬೆಳವಣಿಗೆಯ ನೋಟ ಈ ಕೆಳಗಿನಂತಿದೆ.

2010ರಲ್ಲಿ 1.708 ಟ್ರಿಲಿಯನ್ ಡಾಲರ್.

2011ರಲ್ಲಿ 1.835 ಟ್ರಿಲಿಯನ್ ಡಾಲರ್.

2012ರಲ್ಲಿ 1.831 ಟ್ರಿಲಿಯನ್ ಡಾಲರ್.

2013ರಲ್ಲಿ 1.861 ಟ್ರಿಲಿಯನ್ ಡಾಲರ್.

2014ರಲ್ಲಿ 2.066 ಟ್ರಿಲಿಯನ್ ಡಾಲರ್.

ಈಗ 2.067 ಟ್ರಿಲಿಯನ್ ಡಾಲರ್

Posted by: --Dayanand.m.ddonagapure
At post -Gorta(B) Tq-Basavakalyan District-Bidar
if any doubt pls call me below no 8197695141.

ಗುರುವಾರ, ಜೂನ್ 25, 2015

ದೇಶ ರಾಜಧಾನಿ

ದೇಶ ರಾಜಧಾನಿ
----------------------------------
1. ಅಫ್ಘಾನಿಸ್ತಾನ -ಕಾಬೂಲ್
2. ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ
ಕಂಟೋನ್ಮೆಂಟ್
3. ಅಲ್ಬೇನಿಯಾ -ಟಿರಾನಾ
4. ಅಲ್ಜೀರಿಯಾ -ಅಲ್ಜೀರಿಸ್
5. ಅಮೇರಿಕನ್ ಸಮೋವಾ ಪಾಗೋ- ಪಾಗೋ
6. ಅಂಡೋರಾ- ಅಂಡೋರಾ ಲಾ ವೆಲ್ಲಾ
7. ಅಂಗೋಲಾ- ಲುಆಂಡಾ
8. ಆಂಗ್ವಿಲಾ- ದಿ ವ್ಯಾಲ್ಲಿ
9. ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್
ಜಾನ್ಸ್
10. ಅರ್ಜೆಂಟೀನಾ- ಬ್ಯುನೋಸ್
ಏರ್ಸ್
11. ಅರ್ಮೇನಿಯಾ- ಯೆರೆವಾನ್
12. ಅರುಬಾ ಓರನ್- ಜೆಸ್ತಾದ್
13. ಆಸ್ಟ್ರೇಲಿಯಾ -ಕ್ಯಾನ್ಬೆರಾ
14. ಆಸ್ಟ್ರಿಯಾ- ವಿಯೆನ್ನಾ
15. ಅಝರ್ಬೆಜಾನ್- ಬಾಕು
16. ಬಹಾಮಾಸ್- ನಾಸ್ಸಾಉ
17. ಬಹ್ರೇನ್ -ಮನಾಮಾ
18. ಬಾಂಗ್ಲಾದೇಶ್ -ಢಾಕಾ
19. ಬಾರ್ಬಡೋಸ್ -ಬ್ರಿಡ್ಜಟೌನ್
20. ಬೆಲಾರೂಸ್ ಮಿನ್ಸ್ಕ್
21. ಬೆಲ್ಜಿಯಮ್-- ಬ್ರುಸ್ಸೆಲ್ಸ್
22. ಬೆಲಿಝ್ -ಬೆಲ್ಮೊಪಾನ್
23. ಬೆನಿನ್ ಪೊರ್ಟೋ-ನೋವೋ
24. ಬರ್ಮುಡಾ =ಹ್ಯಾಮಿಲ್ಟನ್
25. ಭೂತಾನ್= ಥಿಂಪು
26. ಬೊಲಿವಿಯಾ =ಸುಕ್ರೆ / ಲಾ ಪಾಝ್
27. ಬೋಸ್ನಿಯಾ ಮತ್ತು ಹರ್ಝೆಗೋವಿನಾ= ಸರಜೆವೋ
28. ಬೋಟ್ಸ್ವಾನಾ =ಗೆಬರೋನ್
29. ಬ್ರಾಝಿಲ್ =ಬ್ರಾಸಿಲಿಯಾ
30. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್= ರೋಡ್
ಟೌನ್
31. ಬ್ರುನಿ ಬಂದಾರ್ ಸೇರಿ =ಬೇಗವಾನ್
32. ಬಲ್ಗೇರಿಯಾ =ಸೋಫಿಯಾ
33. ಬರ್ಕಿನಾ ಫಾಸೋ= ಉಆಗಡೌಗು
(Ouagadougou)
34. ಬುರುಂಡಿ =ಬುಜುಂಬುರಾ
35. ಕಾಂಬೋಡಿಯಾ= ಫೆನೋಮ್ ಪೆನ್
36. ಕ್ಯಾಮರೂನ್ =ಯಾಂಡೇ (yaounde)
37. ಕೆನಡಾ= ಒಟ್ಟಾವಾ
38. ಕೇಪ್ ವರ್ಡ್= ಪ್ರೈಯಾ (praia)
39. ಕೇಮನ್ ಐಲ್ಯಾಂಡ್ಸ್ =ಜಾರ್ಜ್ ಟೌನ್
40. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್=
ಬಾಂಗೈ (Bangui)
41. ಚಾಡ್ ಎನ್ ’ =ಜಮೇನಾ (N’Djamena)
42. ಚಿಲಿ =ಸ್ಯಾಂಟಿಯಾಗೋ
43. ಕ್ರಿಸ್ ಮಸ್ ಐಲ್ಯಾಂಡ್
=ಫ್ಲಾಯಿಂಗ್ ಫಿಶ್ ಕೋವ್
44. ಕೊಕೋಸ್ ಐಲ್ಯಾಂಡ್ =ವೆಸ್ಟ್
ಐಲ್ಯಾಂಡ್
45. ಕೊಲಂಬಿಯಾ=
ಬೊಗೊಟಾ
46. ಕೊಮೊರೋಸ್-
ಮೊರೊನಿ
47. ಕುಕ್ ಐಲ್ಯಾಂಡ್ಸ್- ಅವರುಆ
(avarua)
48. ಕೋಸ್ಟಾ ರಿಕಾ- ಸ್ಯಾನ್ ಜೋಸ್
49. ಕ್ರೊಯೇಷಿಯಾ- ಝಾಗ್ರೇಬ್
50. ಕ್ಯೂಬಾ- ಹವಾನಾ
51. ಸಿಪ್ರಸ್- ನಿಕೋಸೊಯಾ
52. ಝೆಕ್ ಗಣರಾಜ್ಯ -ಪ್ರೇಗ್
53. ಕೋಟ್ ಡೆ ಐವರಿ -
ಯಾಮೊಸೊಕ್ರೋ
(Yamoussoukro)
54. ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ
55. ಡೆನ್ಮಾರ್ಕ್ -ಕೋಪನ್ ಹೇಗನ್
56. ಜಿಬೌತಿ (Djibouti) -ಜಿಬೌತಿ
57. ಡೊಮಿನಿಕಾ -ರೊಸ್ಯು
(Roseau)
58. ಡೊಮಿನಿಕಾ ಗಣರಾಜ್ಯ-
ಸ್ಯಾಂಟೋ ಡೊಮಿಂಗೋ
59. ಪೂರ್ವ ತಿಮೋರ್ -ಡಿಲಿ
60. ಇಕ್ವೆಡಾರ್- ಕ್ವಿಟೋ
61. ಈಜಿಪ್ಟ್ -ಕೈರೋ
62. ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್
63. ಎಕ್ವೆಟೋರಿಯಲ್ ಗಿನಿಯಾ -
ಮಲಬೊ
64. ಎರಿತ್ರಿಯಾ -ಅಸ್ಮಾರಾ
65. ಎಸ್ಟೋನಿಯಾ- ಟಾಲಿನ್
66. ಇಥಿಯೋಪಿಯಾ- ಆಡಿಸ್ ಅಬಾಬಾ
67. ಫಾಲ್ಕಲ್ಯಾಂಡ್ ದ್ವೀಪಗಳು -
ಸ್ಟ್ಯಾನ್ಲಿ
68. ಫೆರೋ ದ್ವೀಪಗಳು -ಟೋರ್ಶ್ವಾನ್
69. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ -
ಪಾಲಿಕಿರ್
70. ಫಿಜಿ -ಸುವಾ
71. ಫಿನ್ ಲ್ಯಾಂಡ್- ಹೆಲ್ಸಿಂಕಿ
72. ಫ್ರಾನ್ಸ್- ಪ್ಯಾರಿಸ್
73. ಫ್ರೆಂಚ್ ಪಾಲಿನೇಷಿಯಾ- ಪಪೆಟ
(papeete)
74. ಗಬೊನ್-ಲಿಬ್ರವಿಲ್ಲೆ
75. ಗಾಂಬಿಯಾ- ಬಂಜುಲ್
76. ಜಾರ್ಜಿಯಾ- ಬಿಲಿಸಿ (Tbilisi)
77. ಜರ್ಮನಿ -ಬರ್ಲಿನ್
78. ಘಾನಾ- ಆಕ್ರಾ (accra)
79. ಜಿಬ್ರಾಲ್ಟರ್- ಜಿಬ್ರಾಲ್ಟರ್
80. ಗ್ರೀಸ್- ಅಥೆನ್ಸ್
81. ಗ್ರೀನ್ ಲ್ಯಾಂಡ್ -ನೂಕ್
82. ಗ್ರೆನಾಡಾ -ಸೇಂಟ್ ಜಾರ್ಜ್
83. ಗ್ವಾಮ್ -ಹಗತ್ನಾ (hagatna)
84. ಗ್ವಾಟೆಮಾಲಾ -ಗ್ವಾಟೆಮಾಲಾ ನಗರ
85. ಗೆರ್ನ್ಸೆ (Guernsey) -ಸೇಂಟ್
ಪೀಟರ್ ಪೋರ್ಟ್
86. ಗಿನಿಯಾ- ಕೊನಾಕ್ರಿ
87. ಗಿನಿಯಾ-ಬಿಸಾಉ ಬಿಸಾಉ
88. ಗಯಾನಾ- ಜಾರ್ಜ್ ಟೌನ್
89. ಹೈಟಿ ಪೋರ್ಟ್--ಔ-ಪ್ರಿನ್ಸ್
90. ಹೊಂಡುರಾಸ್- ತೆಗುಸಿಗಲ್ಪಾ
91. ಹಂಗರಿ- ಬುಡಾಪೆಸ್ಟ್
92. ಐಸ್ ಲ್ಯಾಂಡ್ -ರೆಯ್ಕಜಾವಿಕ್
93. ಭಾರತ -ನವದೆಹಲಿ
94. ಇಂಡೋನೇಷಿಯಾ -ಜಕಾರ್ತಾ
95. ಇರಾನ್- ತೆಹರಾನ್
96. ಇರಾಕ್ -ಬಾಗ್ದಾದ್
97. ಐರ್ ಲ್ಯಾಂಡ್- ಡಬ್ಲಿನ್
98. ಐಲ್ ಆಫ್ ಮ್ಯಾನ್ -ಡಗ್ಲಾಸ್
99. ಇಸ್ರೇಲ್- ಜೆರುಸಲೇಮ್
100. ಇಟಲಿ- ರೋಮ್
101. ಜಮೈಕಾ -ಕಿಂಗಸ್ಟನ್
102. ಜಪಾನ್- ಟೊಕಿಯೋ
103. ಜರ್ಸಿ- ಸೇಂಟ್ ಹೀಲರ್
104. ಜೋರ್ಡಾನ್ -ಅಮ್ಮಾನ್
105. ಕಝಕಿಸ್ತಾನ್- ಅಸ್ತಾನಾ
106. ಕೀನ್ಯಾ- ನೈರೋಬಿ
107. ಕಿರಿಬಾತಿ -ದಕ್ಷಿಣ ತರಾವಾ
108. ಕೊಸೊವೋ- ಪ್ರಿಸ್ಟಿನಾ
109. ಕುವೈತ್- ಕುವೈತ್ ನಗರ
110. ಕಿರ್ಗಿಸ್ತಾನ್- ಬಿಶ್ಕೇಕ್
111. ಲಾವೊಸ್- ವಿಯೆನ್ಶಿಯೇನ್
(Vientiane)
112. ಲಾತ್ವಿಯಾ- ರಿಗಾ
113. ಲೆಬನಾನ್ -ಬೀರತ್
114. ಲೆಸೋತೊ- ಮಾಸೇರು
115. ಲೈಬೀರಿಯಾ -
ಮೊನ್ರೋವಿಯಾ
116. ಲಿಬಿಯಾ- ತ್ರಿಪೋಲಿ
117. ಲೀಶೆನ್ ಸ್ಟೈನ್
(Liechtenstein) -ವಾಡುಝ್ (Vaduz)
118. ಲಿಥುಯೇನಿಯಾ- ವಿಲ್ನಿಯಸ್
119. ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್
ನಗರ
120. ಮಸಿಡೋನಿಯಾ- ಸ್ಕೋಜೆ (Skopje)
121. ಮಡಗಾಸ್ಕರ್-
ಅಂಟಾನನರಿವೊ
122. ಮಾಲಾವಿ -ಲಿಲೊಂಗ್ವೆ
123. ಮಲೇಷಿಯಾ- ಕುವಾಲಾಲಂಪುರ /
ಪುತ್ರಾಜಯಾ
124. ಮಾಲ್ಡೀವ್ಸ್ -ಮಾಲೆ
125. ಮಾಲಿ- ಬಮಾಕೊ
126. ಮಾಲ್ಟಾ -ವೆಲೆಟ್ಟಾ
127. ಮಾರ್ಷಲ್ ದ್ವೀಪಗಳು -
ಮಜುರೊ
128. ಮಾರಿಷಿಯಾನಾ- ನೌಕ್ಚೋಟ್
129. ಮಾರಿಷಿಯಸ್ -ಪೋರ್ಟ್ ಲೂಯಿಸ್
130. ಮೇಯೊಟ್ -ಮಾಮೌಡ್ಝು
131. ಮೆಕ್ಸಿಕೋ -ಮೆಕ್ಸಿಕೋ ನಗರ
132. ಮಾಲ್ಡೋವಾ- ಚಿಸಿನಾಉ
133. ಮೊನಾಕೋ-
ಮೊನಾಕೊ
134. ಮಂಗೋಲಿಯಾ- ಉಲಾನ್ ಬತಾರ್
135. ಮಾಂಟೆನೆಗ್ರೋ- ಪೊಡ್ಗೋರಿಕಾ
136. ಮಾಂಟ್ಸೆರಾಟ್- ಪ್ಲೈಮೌಥ್
137. ಮೊರೊಕ್ಕೋ -ರಾಬಾತ್
138. ಮಾಝಾಂಬಿಕ್- ಮಾಪುಟೋ
139. ಮಯನ್ಮಾರ್- ನೇಪಿಡಾ
140. ನಮೀಬಿಯಾ -ವಿಂಢೋಕ್
141. ನೌರು- ಯಾರೆನ್
142. ನೇಪಾಳ -ಕಠ್ಮಂಡು
143. ನೆದರ್ ಲ್ಯಾಂಡ್ಸ್- ಆ್ಯಮ್
ಸ್ಟರಡಾಮ್
144. ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್-
ವಿಲ್ಲೆಮಸ್ಟಾಡ್
145. ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146. ನ್ಯೂಝೀಲ್ಯಾಂಡ್-
ವೆಲಿಂಗ್ಟನ್
147. ನಿಕಾರಾಗುಆ- ಮನಾಗುಆ
148. ನೈಗರ್- ನಿಯಾಮಿ
149. ನೈಜೀರಿಯಾ- ಅಬುಜಾ
150. ನ್ಯೂ (niue) -ಅಲೋಫಿ
15
1. ನೊರ್ಫೋಕ್ ದ್ವೀಪಗಳು-
ಕಿಂಗಸ್ಟನ್
152. ಉತ್ತರ ಕೊರಿಯಾ-
ಪ್ಯೋಂಗ್ ಯಾಂಗ್
153. ಉತ್ತರ ಸಿಪ್ರಸ್ -ನಿಕೋಸಿಯಾ
154. ಉತ್ತರ ಐರ್ ಲ್ಯಾಂಡ್ -ಬೆಲ್ಫಾಸ್ಟ್
155. ಉತ್ತರ ಮರಿಯಾನಾ ದ್ವೀಪಗಳು-
ಸೈಪಾನ್
156. ನಾರ್ವೆ- ಓಸ್ಲೋ
157. ಓಮನ್ -ಮಸ್ಕತ್
158. ಪಾಕಿಸ್ತಾನ್- ಇಸ್ಲಾಮಾಬಾದ್
159. ಪಲಾಉ ಗೆರುಲ್- ಮಡ್
160. ಪ್ಯಾಲೆಸ್ತೀನ್ -ಉತ್ತರ
ಜೆರುಸಲೇಮ್
161. ಪನಾಮಾ- ಪನಾಮಾ ನಗರ
162. ಪಪುವಾ ನ್ಯೂ ಗಿನಿಯಾ- ಪೋರ್ಟ್ ಮಾರ್ಸ್
ಬೀ
163. ಪೆರುಗ್ವೆ -ಅಸುನ್ಶಿಯಾನ್
164. ಚೀನಾ- ಬೀಜಿಂಗ್
165. ಪೆರು -ಲಿಮಾ
166. ಫಿಲಿಪ್ಪೀನ್ಸ್ -ಮಣಿಲಾ
167. ಪಿಟ್ ಕೇರ್ನ್ ದ್ವೀಪಗಳು -
ಆ್ಯಡಮ್ಸ್ ಟೌನ್
168. ಪೋಲಂಡ್- ವಾರ್ಸಾ
169. ಪೋರ್ತುಗಲ್ -ಲಿಸ್ಬನ್
170. ಪೋರ್ಟೋ ರಿಕೊ -ಸಾನ್ ಜುಆನ್
172. ಕತಾರ್- ದೋಹಾ
173. ತೈವಾನ್- ತೈಪೈ
174. ಕಾಂಗೋ -ಬ್ರಾಝಾವಿಲ್ಲೆ
175. ರೊಮಾನಿಯಾ -ಬುಕಾರೆಸ್ಟ್
176. ರಷಿಯಾ -ಮಾಸ್ಕೋ
177. Rwanda -ಕಿಗಾಲಿ
178. ಸೇಂಟ್ ಬಾರ್ಥೆಲೆಮಿ- ಗುಸ್ತಾವಿಯಾ
179. ಸೇಂಟ್ ಹೆಲೆನಾ -ಜೇಮ್ಸ್ ಟೌನ್
180. ಸೆಂಟ್ ಕೀಟ್ಸ್ ಮತ್ತು ನೆವಿಸ್
-ಬ್ಯಾಸ್ಸೆಟೆರೆ
181. ಸೇಂಟ್ ಲೂಯಿಸ್ -
ಕ್ಯಾಸ್ಟ್ರೀಸ್
182. ಸೇಂಟ್ ಮಾರ್ಟಿನ್ ಮಾರಿಗೋಟ್
183. ಸೇಂಟ್ ಪಿಯರೆ ಮತ್ತು ಮಿಕೆಲೋನ್-
ಸೇಂಟ್ ಪಿಯರೆ
184. ಸೇಂಟ್ ವಿನ್ಸೆಂಟ್ ಮತ್ತು ದಿ
ಗ್ರೆನೆಡೈನ್ಸ್- ಕಿಂಗ್ಸ್ ಟೌನ್
185. ಸಮೋವಾ -ಏಪಿಯಾ
186. ಸಾನ್ ಮರಿನೋ- ಸಾನ್ ಮರಿನೋ
187. ಸೌದಿ ಅರೇಬಿಯಾ- ರಿಯಾದ್
188. ಸ್ಕಾಟ್ ಲ್ಯಾಂಡ್ -ಎಡಿನ್ ಬರೋ
189. ಸೆನೆಗಲ್- ದಕಾರ್
190. ಸರ್ಬಿಯಾ -ಬೆಲ್ಗ್ರೇಡ್
191. ಸಿಶೆಲ್ಲಿಸ್ -ವಿಕ್ಟೋರಿಯಾ
192. ಸಿಯೆರಾ ಲಿಯೋನ್ -ಫ್ರೀ ಟೌನ್
193. ಸಿಂಗಾಪೂರ್- ಸಿಂಗಾಪುರ್
194. ಸ್ಲೋವಾಕಿಯಾ -ಬ್ರತಿಸ್ಲಾವಾ
195. ಸ್ಲೊವೇನಿಯಾ -ಜುಬ್ಲಜಾನಾ
196. ಸೊಲೊಮನ್
ದ್ವೀಪಗಳು- ಹೊನಿಯಾರಾ
197. ಸೊಮಾಲಿಯಾ -ಮಾಗಾದಿಶು
198. ಸೊಮಾಲಿಲ್ಯಾಂಡ್-
ಹರ್ಗೇಸಿಯಾ
199. ದಕ್ಷಿಣ ಆಫ್ರಿಕಾ- ಪ್ರೆಟೋರಿಯಾ
200. ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ
ಸ್ಯಾಂಡವಿಚ್ ದ್ವೀಪಗಳು -
ಗೃತ್ವಿಕೇನ್
201. ದಕ್ಷಿಣ ಕೊರಿಯಾ- ಸಿಯೋಲ್
202. ಸ್ಪೇನ್ -ಮ್ಯಾಡ್ರಿಡ್
203. ಶ್ರೀಲಂಕಾ -
ಶ್ರೀಜಯವರ್ಧನೆಪುರ
204. ಸುಡಾನ್- ಖಾರ್ತೂಮ್
205. ಸುರಿನಾಮಾ -ಪರಮರಿಬೊ
206. ಸ್ವಾಝಿಲ್ಯಾಂಡ್- ಬಬಾನೆ
207. ಸ್ವೀಡನ್- ಸ್ಟಾಕ್ ಹೋಮ್
208. ಸ್ವಿಟ್ಜರಲ್ಯಾಂಡ್- ಬರ್ನ್
209. ಸಿರಿಯಾ- ಡಮಾಸ್ಕಸ್
210. ಸಾಓ ತೋಮೆ ಮತ್ತು ಪ್ರಿನ್ಸಿಪ್ ಸಾಓ -ತೋಮೆ
211. ತಜಕಿಸ್ತಾನ್- ದುಶಾಂಬೆ
212. ತಾಂಝಾನಿಯಾ -
ಡೊಡೊಮೋ
213. ಥಾಯ್ ಲ್ಯಾಂಡ್ -ಬ್ಯಾಂಕಾಕ್
214. ಟೋಗೋ- ಲೋಮೆ
215. ಟೋಂಗಾ- ನುಕುಅಲೋಫಾ
216. ಟ್ರಾನ್ಸಿಸ್ಟ್ರಿಯಾ- ತಿರಾಸ್ಪೋಲ್
217. ಟ್ರಿನಿಡಾಡ್ ಮತ್ತು ಟೊಬಾಗೋ -
ಪೋರ್ಟ್ ಆಫ್ ಸ್ಪೇನ್
218. ಟುನಿಸಿಯಾ- ಟ್ಯುನಿಸ್
219. ಟರ್ಕಿ- ಅಂಕಾರಾ
220. ತುರ್ಕಮೆನಿಸ್ತಾನ್ -ಅಶ್ಗಬಾತ್
221. ಟರ್ಕ್ ಮತ್ತು ಕೈಕೋಸ್ ದ್ವೀಪಗಳು-
ಕಾಕ್ ಬರ್ನ್ ಟೌನ್
222. ತುವಾಲು- ಫುನಾಫುಟಿ
223. ಉಗಾಂಡಾ- ಕಂಪಾಲಾ
224. ಉಕ್ರೇನ್- ಕೀವ್
225. ಅರಬ್ ಸಂಯುಕ್ತ ಸಂಸ್ಥಾನ-
ಅಬು ಧಾಬಿ
226. ಇಂಗ್ಲೆಂಡ್ -ಲಂಡನ್
227. ಅಮೆರಿಕಾ ಸಂಯುಕ್ತ ಸಂಸ್ಥಾನ -
ವಾಷಿಂಗ್ಟನ್
228. ಯುನೈಟೆಡ್ ಸ್ಟೇಟ್ಸ್ ವರ್ಜಿನ್
ದ್ವೀಪಗಳು -ಚಾರ್ಲೋಟ್ ಅಮೇಲೀ
229. ಉರುಗ್ವೆ -ಮಾಂಟೇವಿಡಿಯೋ
230. ಉಜ್ಬೇಕಿಸ್ತಾನ್ -ತಾಶ್ಕೆಂಟ್
231. ವನೌತು ಪೋರ್ಟ್ -ವಿಲಾ
232. ವ್ಯಾಟಿಕನ್ ನಗರ -ವ್ಯಾಟಿಕನ್ ನಗರ
233. ವೆನೆಝುಎಲಾ- ಕಾರ್ಕಾಸ್
234. ವಿಯೆತ್ನಾಂ- ಹನೋಯ್
235. ವೇಲ್ಸ್ -ಕಾರ್ಡಿಫ್
236. ವಾಲಿಸ್ ಮತ್ತು ಫ್ಯುಚುನಾ ಮಾಟಾ-ಉಟು
237. ದಕ್ಷಿಣ ಸಹಾರಾ- ಲಾಯೋನ್
238. ಯೆಮೆನ್- ಸನಾ
239. ಝಾಂಬಿಯಾ- ಲುಸಾಕಾ
240. ಝಿಂಬಾಬ್ವೆ- ಹರಾರ

ಪ್ರಕಟಿಸಿದವರು: ದಯಾನಂದ.ಎಮ್.ಡೋಣಗಾಪುರೆ ೮೧೯೭೬೯೫೧೪೧

ಸೋಮವಾರ, ಜೂನ್ 22, 2015

ಕರ್ನಾಟಕದ ಬಗ್ಗೆ ಏಷ್ಟು ಗೊತ್ತು ತಮಗೆ ?

*ಕರ್ನಾಟಕದ ಬಗ್ಗೆ ಏಷ್ಟು ಗೊತ್ತು ತಮಗೆ ?
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?- ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?- ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?- ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?- ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?- ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?- ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?- ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?- ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?- ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?-
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?- "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿಯಾರು ಆಯ್ಕೆಯಾಗಿದ್ದರು?- ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?- ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?- ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?- ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?- ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?- ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?- ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?- ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?- ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?- ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?- ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?- ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?- ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?- ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?- ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?- ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?- ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯಯಾವುದು?- ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?- ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?- ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?- ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?- ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?- ಮೂರು ಜಲಪಾತಗಳು.(೧) ಚುಂಚನ ಕಟ್ಟೆ ಜಲಪಾತ,(೨) ಶಿವನ ಸಮುದ್ರ(೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ.ಇದು ಯಾವ ಊರು?- ಗದಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?- ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?- ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?- ಕುವೆಂಪು...
Posted by:...............ದಯಾನಂದ.ಎಮ್.ಡೋಣಗಾಪುರೆ. ಮೋ.ನಂ..೮೧೯೭೬೯೫೧೪೧

ಭಾನುವಾರ, ಫೆಬ್ರವರಿ 15, 2015

GOVERNORS OF INDIAN STATES-

GOVERNORS OF INDIAN STATES---------
-----------------
[1] Andhra Pradesh - E. S. L. Narasimhan
[2] Arunachal Pradesh - Nirbhay Sharma
[3] Assam - Janaki Ballabh Patnaik
[4] Bihar - kesari Nath Tripathi
[5] Chhattisgarh - Balramji Das Tandon
[6] Goa - Mridula Sinha
[7] Gujarat - Om Prakash Kohli
[8] Haryana - Kaptan Singh Solanki
[9] Himachal Pradesh - Kalyan Singh (additional
charge)
[10] Jammu and Kashmir - NarinderNath Vohra
[11] Jharkhand - Syed Ahmed
[12] Karnataka - Vajubhai Rudabhai Vala
[13] Kerala - p. sadashivam
[14] Madhya Pradesh - Ram NareshYadav
[15] Maharashtra - Ch. Vidyasagar Rao
[16] Manipur - vacant
[17] Meghalaya - kesari Nath Tripathi
[18] Mizoram - Aziz Qureshi
[19] Nagaland –Padmanabha Acharya
[20] Odisha - S. C. Jamir
[21] Punjab - Kaptan Singh Solanki
[22] Rajasthan – Kalyan Singh
[23] Sikkim - Shriniwas DadasahebPatil
[24] Tamil Nadu - K. Rosaiah
[25] Telangana - E. S. L. Narasimhan
[26] Tripura - Padmanabha Acharya
[27] Uttar Pradesh - Ram Naik
[28] Uttarakhand - K k Paul
[29] West Bengal- Keshari Nath Tripathi

Posted by:
Dayanand.m.donagapure

ಅಲೆಕ್ಸಾಂಡರ್

ಅಲೆಕ್ಸಾಂಡರ್

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು
Posted by:
Dayanand.m.donagapure