ಭಾನುವಾರ, ಫೆಬ್ರವರಿ 15, 2015

GOVERNORS OF INDIAN STATES-

GOVERNORS OF INDIAN STATES---------
-----------------
[1] Andhra Pradesh - E. S. L. Narasimhan
[2] Arunachal Pradesh - Nirbhay Sharma
[3] Assam - Janaki Ballabh Patnaik
[4] Bihar - kesari Nath Tripathi
[5] Chhattisgarh - Balramji Das Tandon
[6] Goa - Mridula Sinha
[7] Gujarat - Om Prakash Kohli
[8] Haryana - Kaptan Singh Solanki
[9] Himachal Pradesh - Kalyan Singh (additional
charge)
[10] Jammu and Kashmir - NarinderNath Vohra
[11] Jharkhand - Syed Ahmed
[12] Karnataka - Vajubhai Rudabhai Vala
[13] Kerala - p. sadashivam
[14] Madhya Pradesh - Ram NareshYadav
[15] Maharashtra - Ch. Vidyasagar Rao
[16] Manipur - vacant
[17] Meghalaya - kesari Nath Tripathi
[18] Mizoram - Aziz Qureshi
[19] Nagaland –Padmanabha Acharya
[20] Odisha - S. C. Jamir
[21] Punjab - Kaptan Singh Solanki
[22] Rajasthan – Kalyan Singh
[23] Sikkim - Shriniwas DadasahebPatil
[24] Tamil Nadu - K. Rosaiah
[25] Telangana - E. S. L. Narasimhan
[26] Tripura - Padmanabha Acharya
[27] Uttar Pradesh - Ram Naik
[28] Uttarakhand - K k Paul
[29] West Bengal- Keshari Nath Tripathi

Posted by:
Dayanand.m.donagapure

ಅಲೆಕ್ಸಾಂಡರ್

ಅಲೆಕ್ಸಾಂಡರ್

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು
Posted by:
Dayanand.m.donagapure

ಸೋಮವಾರ, ಜನವರಿ 26, 2015

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು (Democracy and Elections in India. The structure and the duties of the Electoral Commission) 

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು (Democracy and Elections in India. The structure and the duties of the Electoral Commission) 

★ ಭಾರತದ ಸಂವಿಧಾನ ★

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು
(Democracy and Elections in India. The structure and the duties of the Electoral Commission)

✧. ಆಧುನಿಕ ಯುಗ, ಪ್ರಜಾಪ್ರಭುತ್ವ ಯುಗ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರ ಅತ್ಯಂತ ಮಹತ್ತರವಾದುದು, ಆಧುನಿಕ ರಾಷ್ಟ್ರಗಳು ಹೆಚ್ಚು ಜನಸಂಖ್ಯೆ ಮತ್ತು ವಿಶಾಲವಾದ ಭೂ ಪ್ರದೇಶಗಳನ್ನು ಹೊಂದಿರುವುದರಿಂದ ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

✧. ಈ ವ್ಯವಸ್ಥೆಯಲ್ಲಿ ಪ್ರಜೆಗಳು ಚುನಾವಣೆಗಳಲ್ಲಿ ಮತದಾನದ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಚುನಾವಣೆಗಳ ಮೂಲಕ ಸರ್ಕಾರವನ್ನು ರಚಿಸುತ್ತಾರೆ. ಪ್ರಜೆಗಳಿಂದ ಚುನಾವಣೆಗಳ ಮೂಲಕ ಆಯ್ಕೆಯಾದ ಪಕ್ಷಗಳು ಜನರ ಆಶೋತ್ತರಗಳನ್ನು ಈಡೇರಿಸಲು ಕಾರ್ಯಕ್ರಮ ಗಳನ್ನು ರೂಪಿಸಬೇಕಾಗುತ್ತದೆ.

.ಚುನಾವಣಾ ವಿಧಾನ :

✧. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವವನ್ನು ಅರಿತು ಸಂವಿಧಾನ ರಚನಾಕಾರರು ಇವುಗಳನ್ನು ನಡೆಸಲು ಸ್ವತಂತ್ರ ಚುನಾವಣಾ ಆಯೋಗಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ.

✧. 15 ನೇ ಭಾಗದಲ್ಲಿರುವ 324 ರಿಂದ 329 ರವರೆಗಿನ ವಿಧಿಗಳು ಚುನಾವಣಾ ಆಯೋಗ ಹಾಗೂ ಚುನಾವಣೆಗಳ ಬಗ್ಗೆ ನಿಯಮಗಳನ್ನು ಒಳಗೊಂಡಿವೆ.

.ಚುನಾವಣಾ ಆಯೋಗದ ರಚನೆ :

✧. 324(2) ನೇ ವಿಧಿ ಪ್ರಕಾರ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಯನ್ನು ಮತ್ತು ಆಗಾಗ್ಗೆ ರಾಷ್ಟ್ರಪತಿಯಿಂದ ನೇಮಿಸಲ್ಪಡುವ ಇತರೆ ಚುನಾವಣಾಧಿಕಾರಿಗಳನ್ನು ಒಳಗೊಂಡಿರುತ್ತದೆ.

✧. ಮೊದಲ ಬಾರಿಗೆ 16-10-1989 ರಂದು ಎಸ್. ಎಸ್. ಧನೋವಾ ಮತ್ತು ವಿ. ಎಸ್. ಸೀಗೆಲ್ ಅವರನ್ನು ಚುನಾವಣಾಧಿಕಾರಿಗಳಾಗಿ ಕೇಂದ್ರ ಸರ್ಕಾರ ನೇಮಿಸಿತು.

.ಚುನಾವಣಾ ಆಯೋಗದ ಅಧಿಕಾರ ಮತ್ತು ಕರ್ತವ್ಯಗಳು :

✧. ಸಂವಿಧಾನದ 324(1) ನೇ ವಿಧಿಯಲ್ಲಿ ಚುನಾವಣಾ ಆಯೋಗದ ಎರಡು ಮುಖ್ಯ ಕರ್ತವ್ಯಗಳನ್ನು ನಮೂದಿಸಲಾಗಿದೆ.

1. ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿ ಅವುಗಳ ಪರೀಷ್ಕರಣವನ್ನು ವೀಕ್ಷಿಸಿ ನಿರ್ದೇಶನ ನೀಡುವುದು.

2. ಸಂಸತ್ತಿಗೆ, ರಾಜ್ಯ ಶಾಸಕಾಂಗಳಿಗೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಥಳೀಯ ಸರ್ಕಾರಗಳಿಗೆ ಚುನಾವಣೆಗಳನ್ನು ನಡೆಸುವುದು, ಅಲ್ಲದೆ 1950 ಮತ್ತು 1951 ರ ಪ್ರಜಾಪ್ರತಿನಿಧಿ ಕಾಯ್ದೆಗಳ ಪ್ರಕಾರ ಇನ್ನೂ ಕೆಲವು ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತದೆ.

.ಚುನಾವಣಾ ಆಯೋಗದ ಇತರೇ ಕಾರ್ಯಗಳು :

✧. ಅಧಿಕಾರಕ್ಕೆ ದಾರಿ ತೋರುವ ಚುನಾವಣೆ ಹಣಬಲ, ತೋಳ್ಬಲಗಳ ಬೆದರಿಕೆ ಹಾಗೂ ಅಪರಾಧ ಹಿನ್ನೆಲೆಯುಳ್ಳ ಭ್ರಷ್ಟ್ರರ ಪ್ರವೇಶದಂತಹ ಸವಾಲುಗಳನ್ನು ಎದುರಿಸುತ್ತಿದೆ.

✧. ಇತ್ತೀಚಿನ ದಿನಗಳಲ್ಲಿ ಅಧಿಕಾರ ವರ್ಗ ಆಡಳಿತ ಯಂತ್ರವನ್ನು ದುರುಪಯೋಗ ಮಾಡುವುದಕ್ಕೆ ಚುನಾವಣಾ ಆಯೋಗ ನೀತಿ ಸಂಹಿತೆಯ ಚಾಟಿ ಹಿಡಿದು ನಿಯಂತ್ರಣಕ್ಕೆ ತರುತ್ತಿದೆ.

1.ಚುನಾವಣಾ ಆಯೋಗ ಕೈಗೊಂಡಿರುವ ಕೆಲ ರಚನಾತ್ಮಕ ಕ್ರಮಗಳಿಂದಾಗಿ ಹಣದ ಹೊಳೆ ಹರಿಯುವುದಕ್ಕೆ ಕೂಡ ಕಡಿವಾಣ ಬಿದ್ದಿದೆ.

2.ಚುನಾವಣಾ ಆಯೋಗ ಚುನಾವಣಾ ಅವಧಿಯಲ್ಲಿ ಸ್ಪರ್ಧಿಗಳು ಹಾಗೂ ರಾಜಕೀಯ ಪಕ್ಷಗಳು ಮಾಡುವ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲು ವಿವಿಧ ಸೇವೆಗಳಿಂದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನಿಯೋಜಿಸುತ್ತದೆ. ತನ್ಮೂಲಕ ಖರ್ಚಿನ ಮೇಲೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದೆ.

3.ಚುನಾವಣಾ ಆಯೋಗದ ನಿರ್ದೇಶನಗಳಡಿಯಲ್ಲಿ ಮತ್ತು ಸಲಹೆ ಸೂಚನೆ ಮೇರೆಗೆ ರಾಜಕೀಯ ಪಕ್ಷಗಳ ಕ್ರಮ ಕೈಗೊಂಡಿದೆ. ಚುನಾವಣಾ ಆಯೋಗದ ನಿರ್ದೇಶನಗಳಡಿಯಲ್ಲಿ ಮತ್ತು ಸಲಹೆ ಸೂಚನೆ ಮೇರೆಗೆ ರಾಜಕೀಯ ಪಕ್ಷಗಳ ಹಾಗೂ ಸ್ಪರ್ಧಿಗಳು ಮಾಡುವ ದುಂದು ವೆಚ್ಚ ಅಂದರೆ ಕಟೌಟ್‌ಗಳು, ಬ್ಯಾನರ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸುವುದು. ಸ್ಲೋಗನ್‌ಗಳ ಬರಹ ಮುಂತಾದವುಗಳ ನಿಷೇಧ ಹೇರಲಾಗಿದೆ.

—ಆದರೆ ಚುನಾವಣಾ ಸಮಯದಲ್ಲಿ ನಡೆಯುವ ಚುನಾವಣಾ ಅಕ್ರಮಗಳಿಗೆ ತೋಳ್ಬಲದ ದುರುಪಯೋಗ ಕೇವಲ ಚುನಾವಣಾ ಆಯೋಗಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಕಳವಳದ ವಿಷಯವಾಗಿದೆ. ಮತದಾರರು ಮತ್ತು ಸಾರ್ವಜನಿಕರಿಗೆ ಒಟ್ಟಾರೆಯಾಗಿ ಹೆಚ್ಚುತ್ತಿರುವ ಈ ರಾಜಕೀಯ ಅಪರಾಧೀಕರಣ ನಿಜಕ್ಕೂ ಗಂಭೀರ ಚಿಂತೆಯ ವಿಷಯವೆನಿಸಿದೆ.

.ಪ್ರಸ್ತುತ ಜಾರಿಗೆ ಬಂದ ಚುನಾವಣಾ ಸುಧಾರಣಾ ಕ್ರಮಗಳು:

✧. ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

1. ದಿನೇಶ್ ಗೋಸ್ವಾಮಿ ಸಮಿತಿ ರಚನೆ,ಕೆಲವು ಶಿಫಾರಸ್ಸುಗಳ ಜಾರಿ.

2. ಪಕ್ಷಾಂತರ ವಿರೋಧಿ ಕಾಯ್ದೆ ಜಾರಿ.

3. ಎರಡು ಕ್ಷೇತ್ರಗಳಿಗಿಂತ ಹೆಚ್ಚು ಕಡೆ ಸ್ಪರ್ಧೆಗೆ ನಿಷೇಧ.

4. ನಾಮಪತ್ರ ಸಲ್ಲಿಕೆ ಜೊತೆಯಲ್ಲಿಯೇ ಅಭ್ಯರ್ಥಿಯ ಅಪರಾಧಗಳ ಹಿನ್ನೆಲೆ ಮತ್ತು ಆಸ್ತಿಪಾಸ್ತಿ ಘೋಷಣೆ ಕಡ್ಡಾಯ.

5. ನಾಮಪತ್ರ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿಕೆಯಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವುದು.

6. ಪಕ್ಷಗಳಿಗೆ ಉದ್ಯಮಿಗಳು ಮತ್ತು ಖಾಸಗಿ ಸಂಸ್ಥೆಗಳು ನೀಡುವ ದೇಣಿಗೆ ವಿವರ.

7. ಪಕ್ಷಗಳು ಚುನಾವಣಾ ವೆಚ್ಚ ಮತ್ತು ದೇಣಿಗೆ ಸಂಗ್ರಹ ಮಾಹಿತಿ ದಾಖಲೆಯನ್ನು ಇಡುವುದು ಮತ್ತು ವಾರ್ಷಿಕ ಲೆಕ್ಕ ಪರಿಶೋಧನೆಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವುದು.

8. ಅಭ್ಯರ್ಥಿಯ ಪರ ಅವರ ಪ್ರತಿನಿಧಿಯಾಗಿ ಪತ್ರಿಕೆಗಾಗಿ ಜಾಹೀರಾತು ನೀಡಿಕೆ ನಿರ್ಬಂಧ.

9. ಮತದಾನದ ವಯಸ್ಸು ೨೧ ರಿಂದ ೧೮ಕ್ಕೆ ಇಳಿಕೆ.

10. ವಿದ್ಯುನ್ಮಾನ ಮತಯಂತ್ರ ಬಳಕೆ.

11. ಭಾವಚಿತ್ರ ಸಹಿತ ಮತದಾರರ ಪಟ್ಟಿ ಮತಪತ್ರ ಚೀಟಿ ಜಾರಿಗೆ.

.ಉಳಿದ ಪ್ರಮುಖ ಶಿಫಾರಸ್ಸುಗಳು :

1. ಮತ ನಿರಾಕರಣೆ ಅಥವಾ ತಟಸ್ಥವಾಗಿರುವುದಕ್ಕೆ ಕಾನೂನು ಮಾನ್ಯತೆ.

2. ಚುನಾವಣೆಯಲ್ಲಿ ಶೇ. ೨೦ಕ್ಕಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಗಳನ್ನು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವಂತೆ ಅನರ್ಹ ಗೊಳಿಸುವುದು.

3. ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವುದು.

4. ಚುನಾವಣಾ ವೆಚ್ಚದಲ್ಲಿ ಸ್ವಲ್ಪ ಭಾಗವನ್ನು ಸರ್ಕಾರವೇ ಭರಿಸುವುದು.

5. ರಾಜಕೀಯ ಪಕ್ಷಗಳ ಸಂಖ್ಯೆಯನ್ನು ಎರಡು ಅಥವಾ ಮೂರಕ್ಕೆ ಮಿತಿಗೊಳಿಸುವುದು.

Posted by :
Dayanand.m.donagapure

ಅಶೋಕ ಚಕ್ರ : --

ಅಶೋಕ  ಚಕ್ರ  : --

ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು,ಭಾರತದ ಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಶೋಕಚಕ್ರದಲ್ಲಿ ವೃತ್ತಾಕಾರದ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ,ಚಕ್ರದಲ್ಲಿನ ೨೪ ಕಂಬಗಳು ಬೌದ್ಧಧರ್ಮದ ಆಚರಣೆಯನ್ನು ಸೂಚಿಸುತ್ತವೆ.

ಪ್ರಾಚ್ಯ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ಈ ಚಕ್ರ ಅಶೋಕ ಮಹಾರಾಜನಿಂದ ಸಾರಾನಾಥದಲ್ಲಿ ನಿರ್ಮಾಣವಾದ ಸ್ಮಾರಕಸ್ತಂಭದ ಸಿಂಹಶೀರ್ಷಿಕೆಯಲ್ಲಿದೆ. ಅಶೋಕ ಸಾರಾನಾಥದ ಸ್ತಂಭವನ್ನು ಚೂನಾರ್ ಪರ್ವತಗಳ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕಡೆಸಿ ಸಾರಾನಾಥದಲ್ಲಿ ಸ್ಥಾಪಿಸಿ, ಅದರ ತುದಿಯನ್ನು ಧರ್ಮ ಚಕ್ರವನ್ನೊಳಗೊಂಡ ಸಿಂಹ ಶೀರ್ಷಿಕೆಯಿಂದಲಂಕರಿಸಿದ. ಅವನ ಆಳ್ವಿಕೆಯ ಅನಂತರ ಶತಮಾನಗಳ ಮೇಲೆ ಭಾರತವನ್ನು ಸಂದರ್ಶಿಸಿದ ಚೀನ ದೇಶದ ಬೌದ್ಧಯಾತ್ರಿಕ ರಾದ ಫಾಹಿಯಾನ್, ಯುವಾನ್ಚಾಂಗ್ ಮತ್ತು ಇತ್ಸಿಂಗ್-ಇವರು ಸಾರಾನಾಥದ ಸ್ತಂಭವನ್ನು ನೋಡಿ ವಿಸ್ಮಿತರಾಗಿ, ಈ ಕೃತಿ ದೇವ ಶಿಲ್ಪಿಗಳಿಂದ ನಿರ್ಮಾಣ ವಾಗಿರಬೇ ಕೆಂದು ಅಭಿಪ್ರಾಯ ಪಟ್ಟರು. ಪಾಶ್ಚಾತ್ಯ ವಿದ್ವಾಂಸ ವಿನ್ಸೆಂಟ್ ಸ್ಮಿತ್ ಈ ಸ್ಮಾರಕವನ್ನು ವಿವರಿಸುತ್ತ ಶಿಲ್ಪಕಲೆ ಮೌರ್ಯರ ಕಾಲದಲ್ಲಿ ಸರ್ವೋತ್ಕೃಷ್ಟ ಮಟ್ಟವನ್ನು ಮುಟ್ಟಿತೆಂದೂ ಇಪ್ಪತ್ತನೆಯ ಶತಮಾನದಲ್ಲೂ ಎಣೆಯಿಲ್ಲದ ಶಿಲ್ಪಕಲಾಕೃತಿಯಾಗಿ ಉಳಿದಿದೆ ಯೆಂದೂ ಅಭಿಪ್ರಾಯ ಪಟ್ಟಿದ್ದಾನೆ. ಪ್ರಾಕ್ತನಶಾಖೆಯ ನಿರ್ದೇಶಕ ಮಾರ್ಷಲ್, ಸಾರಾನಾಥ ಸ್ಮಾರಕ ಪ್ರಾಚೀನ ಭಾರತದ ಶಿಲ್ಪಕಲೆಯ ಅತ್ಯಂತ ಶ್ರೇಷ್ಠವಾದ ಕೃತಿಯೆಂದು ಅಭಿಪ್ರಾಯಪಟ್ಟಿದ್ದಾನೆ. ಬೌದ್ಧಧರ್ಮ ಭಾರತದಲ್ಲಿ ಕ್ಷೀಣಿಸಿದ ಅನಂತರ ಸಾರಾನಾಥ ಪಟ್ಟಣ ಹಾಳಾಯಿತು; ಅಶೋಕನ ಸ್ತಂಭ ಮುರಿದು ಬಿತ್ತು. 18 ಮತ್ತು 19ನೆಯ ಶತಮಾನಗಳಲ್ಲಿ ನಡೆದ ಪ್ರಾಚ್ಯ ಸಂಶೋಧನೆಯ ಕಾಲದಲ್ಲಿ ಸಾರಾನಾಥದ ಅವಶೇಷಗಳು ಬೆಳಕಿಗೆ ಬಂದವು. ಕಂಬ ಮುರಿದು ಬಿದ್ದಾಗ ಚಕ್ರವನ್ನೊಳಗೊಂಡ ಸಿಂಹಶೀರ್ಷ ಸ್ವಲ್ಪಮಟ್ಟಿಗೆ ಹಾನಿಗೊಳಗಾದರೂ ತೀರ ಭಿನ್ನವಾಗದೆ ತನ್ನ ಸೌಂದರ್ಯ ವನ್ನುಳಿಸಿಕೊಂಡಿದೆ. ಸ್ತಂಭ ಸು. 50 ಅಡಿ ಎತ್ತರವಾಗಿದ್ದಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಸಿಂಹಶೀರ್ಷದ ಕೆಳಭಾಗದಲ್ಲಿ ಗಂಟೆಯಾಕಾರದ ಒಂದು ಕಮಲಪುಷ್ಪವನ್ನು ಕೆತ್ತಲಾಗಿದೆ. ಇದು 2'ಗಳಷ್ಟು ಎತ್ತರವಾಗಿದೆ. ಅರಳಿದ ಕಮಲ ಹದಿನಾರು ದಳಗಳನ್ನು ಕೆಳಭಾಗಕ್ಕೆ ಒತ್ತಿಹಿಡಿದಂತೆ ಕೆತ್ತಲಾಗಿದೆ. ಗಂಟೆಯ ಆಕಾರದಲ್ಲಿ ಕೆತ್ತಲಾಗಿರುವ ಈ ಕಮಲದ ಮೇಲೆ ಚಕ್ರಾಕಾರವಾಗಿರುವ ಒಂದು ಪೀಠವಿದೆ. ಈ ಪೀಠ ಸುಮಾರು ಒಂದು ಅಡಿ ಎತ್ತರವಾಗಿಯೂ 2 ಅಡಿ 10 ಅಂಗುಲ ಸುತ್ತಳತೆಯಿಂದಲೂ ಕೂಡಿದೆ. ಈ ಪೀಠದಲ್ಲಿ ನಾಲ್ಕು ದಿಕ್ಕಿಗೂ ನಾಲ್ಕು ಚಕ್ರಗಳು ಮತ್ತು ಪ್ರತಿ ಎರಡು ಚಕ್ರಗಳ ಮಧ್ಯೆ ಒಂದೊಂದರಂತೆ ಆನೆ, ವೃಷಭ, ಕುದುರೆ, ಸಿಂಹ-ಈ ನಾಲ್ಕು ಪ್ರಾಣಿಗಳನ್ನು ಕೆತ್ತಲಾಗಿದೆ. ಈ ಪೀಠದ ಮೇಲ್ಭಾಗದಲ್ಲಿ ಒಂದೊಂದು ಚಕ್ರದ ಮೇಲೂ ಒಂದೊಂದು ಸಿಂಹದಂತೆ ನಾಲ್ಕು ದಿಕ್ಕುಗಳಿಗೂ ಮುಖ ಮಾಡಿ, ಬಾಯಿತೆರೆದಿರುವ ನಾಲ್ಕು ಸಿಂಹಗಳು ಬೆನ್ನಿಗೆ ಬೆನ್ನುಕೊಟ್ಟು ನಿಂತಿವೆ. ಪ್ರತಿಯೊಂದು ಸಿಂಹವೂ 3 ಅಡಿ 9 ಅಂಗುಲ ಎತ್ತರವಾಗಿದೆ. ಅಲ್ಲಿ ದೊರಕಿರುವ ಇನ್ನೂ ಕೆಲವು ಅವಶೇಷಗಳ ಆಧಾರದ ಮೇಲೆ ಸಿಂಹಶೀರ್ಷಕ್ಕೆ ಶಿಖರವಾಗಿ ಇನ್ನೊಂದು ದೊಡ್ಡ ಶಿಲಾಚಕ್ರವನ್ನು ನಾಲ್ಕು ಸಿಂಹಗಳ ನಡುವೆ ನೇರವಾಗಿ ನಿಲ್ಲಿಸಲಾಗಿತ್ತೆಂದು ವಿದ್ವಾಂಸರು ನಂಬಿದ್ದಾರೆ. ಪೀಠದಲ್ಲಿ ಕಡೆದಿರುವ ಪ್ರತಿಯೊಂದು ಚಕ್ರದಲ್ಲೂ 24 ಅರಗಳು ಇವೆ. ಮೇಲಿನ ಚಕ್ರದಲ್ಲಿ 32 ಅರಗಳಿದ್ದುವೆಂದು ತಿಳಿದು ಬಂದಿವೆ. ಚಕ್ರ ಸಂಕೇತಸೂಚಕವೆಂದೂ ಅದಕ್ಕೆ ವಿಶಿಷ್ಟವಾದ ಅರ್ಥವಿದೆಯೆಂದೂ ವಿದ್ವಾಂಸರು ನಂಬಿದ್ದಾರೆ. ಮೇಲಿನ ಮಹಾಚಕ್ರದ 32 ಅರಗಳು ಮಹಾಪುರುಷರಾದವರ 32 ಪುರುಷಲಕ್ಷಣಸೂಚಕವೆಂದೂ ಸಿಂಹಪೀಠದಲ್ಲಿನ ಚಕ್ರಗಳ 24 ಅರಗಳು ಕಾಲಗಣನೆಗೆ ಮಾನವಾದ ಸಂವತ್ಸರದ 24 ಪಕ್ಷಗಳನ್ನು ಸೂಚಿಸುವುದೆಂದೂ ಜ್ಞಾನಿಯಾದವ ಸದಾ ಕಾಲದಲ್ಲೂ ಎಚ್ಚರವಾಗಿರಬೇಕೆಂದೂ ಈ ಧರ್ಮಚಕ್ರ ಸದಾ ಜ್ಞಾಪಿಸುತ್ತಿರುತ್ತದೆ ಎಂದೂ ನಂಬಲಾಗಿದೆ. ಧರ್ಮಚಕ್ರಗಳನ್ನೊಳಗೊಂಡ ಪೀಠದ ಮೇಲಿರುವ ಪ್ರಾಣಿಗಳು ಬುದ್ಧದೇವನ ಹಿಂದಿನ ಜನ್ಮಗಳ ಸಂಕೇತವೆಂದು ಬೌದ್ಧಜಾತಕಗಳಿಂದ ತಿಳಿದುಬರುತ್ತದೆ. ಅಲ್ಲದೆ ಭಾರತೀಯ ಸಂಪ್ರದಾಯದಲ್ಲಿ ಚಕ್ರಕ್ಕೆ ಬ್ರಹ್ಮಾಂಡಚಕ್ರ, ಭವ ಚಕ್ರ, ಕಾಲಚಕ್ರ, ಧರ್ಮಚಕ್ರ, ಸುದರ್ಶನಚಕ್ರ ಮುಂತಾದ ಹಲವಾರು ಸಾಂಕೇತಿಕ ನಿರೂಪಣೆಗಳಿವೆ. ಬೌದ್ಧ ಪುರಾಣಗಳಲ್ಲಿ ಧರ್ಮಚಕ್ರಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳು ಹೇರಳವಾಗಿ ದೊರೆಯುತ್ತವೆ. ದಿವ್ಯಜ್ಞಾನವನ್ನು ಬುದ್ಧಗಯೆಯ ಬಳಿಯಲ್ಲಿ ಪಡೆದ ಅನಂತರ ಬುದ್ಧ ಧರ್ಮಚಕ್ರವನ್ನು ಪ್ರವರ್ತಿಸುವುದಕ್ಕಾಗಿ ಕಾಶೀನಗರಕ್ಕೆ ಹೋಗುವುದಾಗಿ ಹೇಳಿದನಂತೆ. ಮತ್ತೊಂದು ಸಂದರ್ಭದಲ್ಲಿ ಬುದ್ಧ ಸ್ತ್ರೀಯಾಗಲಿ ಪುರುಷನಾಗಲಿ ಇಂಥ ಯಾನದಿಂದ ನಿರ್ವಾಣದ ಸಮೀಪಕ್ಕೆ ಹೋಗುವರು ಎಂಬುದಾಗಿ ಧರ್ಮಚಕ್ರದ ರೀತಿಯನ್ನು ಕುರಿತು ಹೇಳಿದನಂತೆ. ಕಳಿಂಗ ರಣರಂಗದ ಭೀಕರ ದೃಶ್ಯವನ್ನು ನೋಡಿದ ಸಾಮ್ರಾಟ್ ಅಶೋಕ ಬಹುವಾಗಿ ಮನನೊಂದ. ಇನ್ನು ಮುಂದೆ ಸಾಮ್ರಾಜ್ಯ ದಾಹಕ್ಕಾಗಿ ಯುದ್ಧ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ. ಸಾಮ್ರಾಜ್ಯವನ್ನು ಅಶೋಕದತ್ತ ಒಯ್ಯಲು ಅದಕ್ಕಾಗಿ ತನ್ನ ಭೋಗ ಭಾಗ್ಯ ಸಂಪತ್ತು ಸರ್ವಸ್ವವನ್ನೂ ತ್ಯಾಗ ಮಾಡಿದ. ಭಗವಾನ್ ಬುದ್ಧನಿಂದ ಪ್ರಸಾರವಾದ ಧರ್ಮಕ್ಕೆ ಶರಣಾದ. ಅದರ ಪ್ರಸಾರಕ್ಕಾಗಿ ಇನ್ನೂ ಅನೇಕ ಕಾರ್ಯಕ್ರಮಗಳ ಜೊತೆಗೆ ಶಿಲಾಶಿಲ್ಪವನ್ನೂ ಧರ್ಮಲಿಪಿಯನ್ನೂ (ಶಾಸನ) ಆಚರಣೆಗೆ ತಂದ.

ಸಾರಾನಾಥ ಸ್ಮಾರಕದ ಶಿಲಾಶಿಲ್ಪದಲ್ಲಿರುವ ಧರ್ಮಚಕ್ರವನ್ನು ಭಾರತದ ರಾಷ್ಟ್ರೀಯ ಬಾವುಟಕ್ಕೆ ಅಳವಡಿಸಿಕೊಳ್ಳಲಾಗಿದೆ. ಪಂಡಿತ್ ಜವಹರಲಾಲ್ ನೆಹರು ಭಾರತ ರಾಜ್ಯಾಂಗ ಸಭೆಯ ಧ್ವಜ ವಿಚಾರವನ್ನು ಮಂಡಿಸುತ್ತ ಭಾರತದ ರಾಷ್ಟ್ರಧ್ವಜ ಅಡ್ಡಗಲವಾಗಿದ್ದು, ಕೇಸರಿ, ಬಿಳುಪು, ಹಸುರು ಬಣ್ಣಗಳಿಂದ ಕೂಡಿದ್ದು, ನಡುವಣ ಬಿಳಿಯ ಪಟ್ಟಿಯ ಮಧ್ಯಭಾಗದಲ್ಲಿ ಚರಕದ ಪ್ರತಿನಿಧಿಯಾಗಿ ಒಂದು ಚಕ್ರ ಸಾಗರನೀಲವರ್ಣದಲ್ಲಿ ಇರತಕ್ಕದ್ದು; ಈ ಚಕ್ರದ ರಚನೆ ಸಾರಾನಾಥದ ಅಶೋಕ ಸ್ತಂಭದ ಸಿಂಹಶೀರ್ಷದ ಪೀಠದಲ್ಲಿ ಕಾಣುವ ಚಕ್ರದ ಮಾದರಿಯಾಗಿರತಕ್ಕದ್ದು; ಚಕ್ರದ ಅಡ್ಡಳತೆ ಬಿಳಿಪಟ್ಟಿಯ ಅಗಲದಷ್ಟಿರತಕ್ಕದ್ದು; ಬಾವುಟದ ಅಗಲ ಕ್ಕೂ ಉದ್ದಕ್ಕೂ 2:3 ಪ್ರಮಾಣ ಇರತಕ್ಕದ್ದು ಎಂಬುದಾಗಿ 1947ರ ಜುಲೈ 22 ರಂದು ಘೋಷಿಸಿದರು.

ಅಶೋಕನ ಕಾಲದಲ್ಲಿ ಭಾರತದಲ್ಲಿ ಮೂಡಿದ್ದ ಐಕ್ಯ, ಶಾಂತಿ, ಸಮೃದ್ಧಿ-ಇವುಗಳು ಅವನ ಆಳ್ವಿಕೆಯ ಮೊದಲಾಗಲೀ ಅನಂತರವಾಗಲೀ ನಮ್ಮ ನಾಡಿನಲ್ಲಿ ಕಾಣಬಂದಿಲ್ಲ. ಸಕಲ ಜೀವಿಗಳ ಕಲ್ಯಾಣವೇ ತನ್ನ ಕರ್ತವ್ಯವೆಂದು ಬಗೆದಿದ್ದವನೆಂದರೆ ಪ್ರಾಚೀನ ಭಾರತದ ಯುಗಪುರುಷ ಅಶೋಕ. ಆಧುನಿಕ ಯುಗದ ಅಹಿಂಸಾ ಅಧ್ವರ್ಯು ಮಹಾತ್ಮ ಗಾಂಧೀಜಿ ಯವರ ನೇತೃತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆದ ಭಾರತ ಅಶೋಕ ಚಕ್ರವನ್ನು ತನ್ನ ಧ್ವಜಚಿಹ್ನೆಯನ್ನಾಗಿ ಆರಿಸಿಕೊಂಡಿರುವುದು ಅತ್ಯಂತ ಉಚಿತವಾಗಿದೆಯಲ್ಲದೆ ಭಾರತದ ಧ್ಯೇಯ ಸದ್ಧರ್ಮಸ್ಥಾಪನೆ ಎಂಬುದನ್ನು ಈ ಚಿಹ್ನೆ ಸೂಚಿಸುತ್ತದೆ.

Posted by:
Dayanand.m.donagapure

ಭಾನುವಾರ, ಜನವರಿ 25, 2015

☀.ನೀತಿ ಆಯೋಗ ಹಾಗೂ ಯೋಜನಾ ಆಯೋಗದ ನಡುವಿನ ವ್ಯತ್ಯಾಸಗಳು : (Differences between NITI Commission and Planning Commission)

☀.ನೀತಿ ಆಯೋಗ ಹಾಗೂ ಯೋಜನಾ ಆಯೋಗದ ನಡುವಿನ ವ್ಯತ್ಯಾಸಗಳು :
(Differences between NITI Commission and Planning Commission)

♦.ನೀತಿ ಆಯೋಗ (ಭಾರತೀಯ ನೀತಿ ನಿರೂಪಣಾ ಸಂಸ್ಥೆ (NITI))
(ನ್ಯಾಷನಲ್‌ ಇನ್ಸ್‌ಟಿಟ್ಯೂಷನ್‌ ಆಫ್‌ ಟ್ರಾನ್ಸ್‌­ಫಾರ್ಮಿಂಗ್‌ ಇಂಡಿಯಾ – NITI)

* ಅಧ್ಯಕ್ಷ:   ಪ್ರಧಾನ ಮಂತ್ರಿ

* ಉಪಾಧ್ಯಕ್ಷ:   ಪ್ರಧಾನಿಯಿಂದ ನೇಮಕ

* ಆಡಳಿತ ಮಂಡಳಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು

* ಪದನಿಮಿತ್ತ ಸದಸ್ಯರು:   ಕೇಂದ್ರ ಸಂಪುಟ ದರ್ಜೆಯ ಸಚಿವರು

* ಪ್ರಾದೇಶಿಕ ಮಂಡಳಿ:   ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು

* ಸಿಇಒ:   ಪ್ರಧಾನಿಯಿಂದ ನೇಮಕ

♦.ಯೋಜನಾ ಆಯೋಗ (Planning Commission):

* ಅಧ್ಯಕ್ಷ:   ಪ್ರಧಾನ ಮಂತ್ರಿ

* ಉಪಾಧ್ಯಕ್ಷ:   ಪ್ರಧಾನಿಯಿಂದ ನೇಮಕ

* ರಾಷ್ಟ್ರೀಯ ಅಭಿವೃದ್ಧಿ ಮಂಡಳಿ:   ಪ್ರಧಾನಿ, ಸಚಿವ ಸಂಪುಟ ಸದಸ್ಯರು, ಮುಖ್ಯಮಂತ್ರಿಗಳು ಹಾಗೂ ರಾಜ್ಯಗಳ ಹಣಕಾಸು ಸಚಿವರು

* ಪದ ನಿಮಿತ್ತ ಸದಸ್ಯರು:   ಕೇಂದ್ರ ಯೋಜನಾ ಸಚಿವ

* ಕಾರ್ಯದರ್ಶಿ:   ಪ್ರಧಾನಿಯಿಂದ ನೇಮಕ

ಪೋಸ್ಟ್ ಮಾಡಿದವರು :
Dayanand.m.donagapure

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ದೇಶದ ಆಡಳಿತ ವ್ಯವಸ್ಥೆ ಬದಲಿಸುವ ಸಾಮರ್ಥ್ಯ ಈ ಮತಕ್ಕಿದೆ. ಚುನಾವಣೆಗೆ ಸ್ಪರ್ಧಿಸಿರುವ ಯಾವೊಬ್ಬ ಅಭ್ಯರ್ಥಿ ತನಗೆ ಸೂಕ್ತ ಎನಿಸದಿದ್ದಲ್ಲಿ ಮತದಾರ ಈ 'ನೋಟಾ ' ಬಳಕೆ ಮಾಡಬಹುದು.

★ ನೋಟಾ (NOTA) ಎಂದರೇನು?
-What do you mean by NOTA ?

*. ನೋಟಾ ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದರ್ಥ.

*. (NOTA- None Of The Above) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸುಧಾರಣೆಯ ಪ್ರಮುಖ ಅಂಗವಾಗಿ ನೋಟಾ ಜಾರಿಗೆ ನಿರ್ಧರಿಸಿ 2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು.

★ ಸಂಘಟನೆ ಒತ್ತಾ,ಸೆ:
*. 'Peoples Union for Civic Liberties' ಎಂಬ ಸರ್ಕಾರೇತರ ಸಂಸ್ಥೆ ನೋಟಾ ಜಾರಿಗೆ ಬೆಂಬಲಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.

*. ಈ ಬಗ್ಗೆ ಸುಧೀರ್ಘವಾದ ಪ್ರತಿವಾದ ನಡೆದ ಬಳಿಕ ಅಂತಿಮವಾಗಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ 'ನೋಟಾ ' ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.

*. ಜೊತೆಗೆ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಕೆಲವು ಬದಲಾವಣೆ ಅನಿವಾರ್ಯ ಮತ್ತು ರಾಜಕೀಯ ಶುದ್ಧೀಕರಣಕ್ಕೆ ಸಚ್ಚಾರಿತ್ರ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಂಬ ಪರೋಕ್ಷ ಸೂಚನೆಯನ್ನು ಕೊಟ್ಟಿತು.

*. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಆಯ್ಕೆ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿತ್ತು.

★ 'ನೋಟಾ'ದ ಮೊದಲ ಬಳಕೆ ಎಲ್ಲಿ?
- (Where the NOTA was used first time?)

*. ಮುಂಬೈ ಮಹಾನಗರ ಪಾಲಿಕೆಯ 48ನೇ ವಾರ್ಡ್ ಗೆ (ವಿಶಾ) ನಡೆದ ಉಪಚುನಾವಣೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನೋಟಾ ಬಳಸಲಾಯಿತು.

*. 2548 ಮತಗಳಲ್ಲಿ 48 ಮತಗಳು ನೋಟಾದಡಿ ದಾಖಲಾಗಿದ್ದವು. ಕೆಲವು ವಿದ್ಯಾವಂತ ಮತದಾರರು ತಾವು ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾ ಬಳಸಿದ್ದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ನೋಟಾಗೆ ಚೊಚ್ಚಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆ ಸಿಕ್ಕಿತ್ತು.

*. ಮತದಾನ ತಿರಸ್ಕರಿಸುವ ಹಕ್ಕು ಜಗತ್ತಿನ 13 ದೇಶಗಳಲ್ಲಿ ಜಾರಿಯಲ್ಲಿದೆ.

★ 'ನೋಟಾ'ದ ಬಳಕೆ ಹೇಗೆ?
- How NOTA to be Used?

*. ವಿದ್ಯುನ್ಮಾನ ಮತಯಂತ್ರದಲ್ಲಿ (EVM - Electronic Voter Machine) ನಮೂದಾಗಿರುವ ಅಭ್ಯರ್ಥಿಗಳ ಸಾಲಿನಲ್ಲಿ ಅತ್ಯಂತ ಕೆಳಭಾಗದಲ್ಲಿ ಈ ನೋಟಾ ಬಟನ್ ಇರುತ್ತದೆ.

*. ಉದಾ: 15 ಮಂದಿ ಅಭ್ಯರ್ಥಿಗಳಿದ್ದಲ್ಲಿ 16ನೇ ಸಂಖ್ಯೆಯಲ್ಲಿ ನೋಟಾ ಇರುತ್ತದೆ. ಪಟ್ಟಿಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ತನ್ನ ಮತಕ್ಕೆ ಅನರ್ಹ ಎನಿಸಿದರೆ 'ನೋಟಾ'ಮೂಲಕವೇ ನಮ್ಮ ಮತದಾನದ ಹಕ್ಕು ಚಲಾಯಿಸಬಹುದು. ಇದು ಅಧಿಕೃತವಾಗಿ ದಾಖಲಾಗುತ್ತದೆ. ಜೊತೆಗೆ ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಸಂದೇಶ ರವಾನೆಯಾಗುತ್ತದೆ.

★ ಮತದಾನ ಪ್ರಕ್ರಿಯೆಯಲ್ಲಿ 'ನೋಟಾ' ಪರಿಣಾಮಕಾರಿ ಯಾಗಬಲ್ಲುದೇ?
- Can NOTA be affected in Election Procedure?

*. ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕುಮತದಾನ ಪ್ರಕ್ರಿಯೆಯ ಮೇಲೆ ಯಾವುದೇ ಗಾಢವಾದ ಪರಿಣಾಮ ವೇನೂ ಬೀರುವುದಿಲ್ಲ. ಏಕೆಂದರೆ ತಿರಸ್ಕೃತ ಮತಗಳನ್ನು ರದ್ದಾದ ಮತಗಳೆಂದು ಚುನಾವಣಾ ಆಯೋಗವು ಪರಿಗಣಿಸಲ್ಪಡುವುದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

*. ಬಹುಮತದ ಜನರು ಇದನ್ನು ಬಳಸಿದರೂ ಅಥವಾ ಯಾವುದೇ ಒಬ್ಬ ವಿಜೇತ ಅಭ್ಯರ್ಥಿ ಗಳಿಸುವ ಮತಕ್ಕಿಂತಲೂ 'ನೋಟಾ'ದಡಿ ಹೆಚ್ಚು ದಾಖಲಾಗಿದ್ದರೂ ಒಟ್ಟಾರೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ಇದರಲ್ಲಿಲ್ಲ. ವಿಶೇಷವೆಂದರೆ ನೋಟಾ'ದಡಿ ದಾಖಲಾದ ಮತಗಳ ಸನಿಹದಲ್ಲಿರುವ ಅಭ್ಯರ್ಥಿಯು ಜಯಶಾಲಿ ಎಂದು ಘೋಷಿಸಲಾಗುತ್ತದೆ.

*. ಈ ಮೂಲಕ ಕೇವಲ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದಂತಾಗಿದೆ. * ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಮತದಾರನಿಂದ ಅಭ್ಯರ್ಥಿ ತಿರಸ್ಕರಗೊಳ್ಳುವ ಮೂಲಕ ಆತನ ನೈತಿಕ ಸ್ಥೈರ್ಯ ಕುಗ್ಗಿಸಿದ ತೃಪ್ತಿ ಮಾತ್ರ ಮತದಾರನದು.
Posted by:
Dayanand.m.donagapure

★ ಸುಗ್ರೀವಾಜ್ಞೆ (Ordinance) : -

★ ಸುಗ್ರೀವಾಜ್ಞೆ (Ordinance) : --

ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನ ಸಭೆಗೆ. ಅದು ಬಿಟ್ಟರೆ ತುರ್ತು ಸಂಧರ್ಭಗಳಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂಧರ್ಭದಲ್ಲಿ ಮಾತ್ರ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶಾಸನಸಭೆ ನಡೆಯುತ್ತಿದ್ದ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಅಧಿಕಾರವಿಲ್ಲ.

Posted by:
Dayanand.m.donagapur