ಬುಧವಾರ, ಜುಲೈ 29, 2015

☀ಗಡಿರೇಖೆಗಳು =ದೇಶಗಳು


☀ಗಡಿರೇಖೆಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈•☀ದೇಶಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━

●.ರಾಡ್ ಕ್ಲಿಫ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಪಾಕಿಸ್ತಾನ

●.ಮ್ಯಾಕ್ ಮೋಹನ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಚೀನಾ

●.ಡ್ಯುರಾಂಡ್ ರೇಖೆ:•┈┈┈┈┈┈• ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ

●.ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ):•┈┈┈┈┈┈• ಫ್ರಾನ್ಸ್ ಮತ್ತು ಜರ್ಮನಿ

●.38 ನೇ ಸಮಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ಕೊರಿಯಾ

●.17 ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ

●.49 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಅಮೇರಿಕಾ ಮತ್ತು ಕೆನಡಾ

●.ಹಿಂಡೆನ್ ಬರ್ಗ್ ರೇಖೆ:•┈┈┈┈┈┈• ಜರ್ಮನಿ ಮತ್ತು ಪೋಲೆಂಡ್

●.ಓಡೆರ್ ನೀಸ್ ರೇಖೆ:•┈┈┈┈┈┈• ಪೂರ್ವ ಜರ್ಮನಿ ಮತ್ತು ಪೋಲೆಂಡ್

●.ಸಿಗ್ ಫ್ರೈಡ್ ರೇಖೆ:•┈┈┈┈┈┈• ಜರ್ಮನಿ ಮತ್ತು ಫ್ರಾನ್ಸ್.

●.24 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಭಾರತ ಮತ್ತು ಮಯನ್ಮಾರ್

*ದಯಾನಂದ.ಎಮ್.ಡೋಣಗಾಪುರೆ

★ ಸುಜಲ-3 ಯೋಜನೆ (SUJAL-3):

★ ಸುಜಲ-3 ಯೋಜನೆ (SUJAL-3): ಜಲಾನಯನ ಪ್ರದೇಶಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕ ರಾಜ್ಯದ 7 ಜಿಲ್ಲೆಗಳಲ್ಲಿ (ದಾವಣಗೆರೆ, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ಗದಗ, ಬೀದರ್, ಚಾಮರಾಜನಗರ) ಜಾರಿ ಮಾಡಲಾಗಿದೆ. ತಂತ್ರಜ್ಞಾನಗಳಪರಿಣಾಮಕಾರಿ ಬಳಕೆಯತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ , ಮಾರ್ಗದರ್ಶನ ನೀಡುವ ಉದ್ದೇಶ ಈ ಯೋಜನೆ ಹೊಂದಿದೆ. ಈ ಯೋಜನೆಯ ಅನುಷ್ಠಾನಕ್ಕೆ 2013ನೇ ಸಾಲಿನಿಂದ 6 ವರ್ಷಗಳ ಕಾಲವನ್ನು ನಿಗದಿ ಪಡಿಸಲಾಗಿದೆ.

★ ಮೇಘ ಸ್ಫೋಟ (Cloud Burst) : -

★ ಮೇಘ ಸ್ಫೋಟ (Cloud Burst) : -

ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ.
ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ ಇರುತ್ತದೆ.

★ ಸಂಪೂರ್ಣ ಕ್ರಾಂತಿ(Total Revolution): --

★ ಸಂಪೂರ್ಣ ಕ್ರಾಂತಿ(Total Revolution): --

ಇಂದಿರಾಗಾಂಧಿರವರ ವಿರುದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಲೋಕನಾಯಕ ಜಯಪ್ರಕಾಶ ನಾರಾಯಣ ರವರು ಒತ್ತಾಯಿಸುವುದರೊಂದಿಗೆ ಈ ಕ್ರಾಂತಿಗೆ ಮುನ್ನುಡಿ ಹಾಕಿದರು. ಜಯಪ್ರಕಾಶ ನಾರಾಯಣ ರವರೊಂದಿಗೆ ವಿ.ಎಂ. ತಾರಕುಂಡೆರವರೂ ಕೂಡಾ ಕ್ರಾಂತಿಗೆ ಕರೆ ನೀಡಿದರು. ಈ ಕ್ರಾಂತಿಯ ಮುಖ್ಯ ಉದ್ದೇಶ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯಕ್ರಮ ಕೈಗೊಳ್ಳುವುದಾಗಿತ್ತು, ಆ ಮೂಲಕ ಸಂಪೂರ್ಣ ಕ್ರಾಂತಿಯನ್ನು ಮಾಡಬೇಕೇಂದು ಜಯಪ್ರಕಾಶ ನಾರಾಯಣ ರವರು ಒತ್ತಾಯಿಸಿ ಸಂಪೂರ್ಣ ಕ್ರಾಂತಿಗೆ(Total Revolution) ಕರೆ ನೀಡಿದರು.

★ ನ್ಯೂಕ್ಲಿಯರ್ ವಿಂಟರ್ (Nuclear Winter)

★ ನ್ಯೂಕ್ಲಿಯರ್ ವಿಂಟರ್ (Nuclear Winter) : --ಈ ಭೂಮಿಯ ಮೇಲೆ ಅಣುಯುದ್ಧವು ಸಂಭವಿಸಿದರೆ ವಾತಾವರಣದಲ್ಲಿ ಆಗುವ ಪರಿವರ್ತನೆಗಳನ್ನು ವಿವರಿಸಲು ಉಪಯೋಗಿಸುವ ಪದ.ಅಣುಯುದ್ಧದ ನಂತರ ಧೂಳು, ಹೊಗೆ, ರಸಾಯನಿಕ ಆಮ್ಲಗಳಿಂದ ದಟ್ಟವಾಗಿ ಆವೃತ್ತವಾಗಿ ನಭೋಮಂಡಲವನ್ನು ಸುತ್ತುಗಟ್ಟುತ್ತವೆ. ಅಣುಯುದ್ಧ ಮುಗಿದ ಸಾವಿರ ವರ್ಷಗಳ ನಂತರವೂ ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತೆ, ಈ ಧೂಳು ಹೊಗೆ, ಕಾರ್ಮೋಡವಾಗಿ ಭೂಮಿಯನ್ನು ಆವರಿಸುತ್ತದೆ. ಇದರಿಂದ ಭೂಮಿಯ ಮೇಲಿನ ಉಷ್ಣಾಂಶ ಕ್ರಮೇಣ ಕಡಿಮೆಯಾಗಿ 60 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಭೂಮಂಡಲದ ಮೇಲಿನ ಜೀವ ಸಂಕುಲಗಳು ಬದುಕಿ ಉಳಿದು ಜೀವನ ಸಾಗಿಸುವುದು ಅಸಾಧ್ಯ. ಅದನ್ನೇ 'ನ್ಯೂಕ್ಲಿಯರ್ ವಿಂಟರ್ (Nuclear Winter)' ಎಂದು ಕರೆಯುವರು.

★ ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): --

★ ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): --1915ರಲ್ಲಿ ಮೈಸೂರಿನ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಏರ್ಪಡಿಸಿದ ಸಮ್ಮೇಳನದ ಫಲವಾಗಿ ಸ್ಥಾಪನೆಯಾಯಿತು. ಇದರ ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. H.V.ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಏಳಿಗೆಗೆ ನಿರಂತರವಾಗಿ ಶ್ರಮಿಸುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡ ಸ್ಥಾನಮಾನ ಹಾಗೂ ಏಕೀಕರಣ, ಕನ್ನಡ ಜನಜಾಗೃತಿ ಮೊದಲಾದ ಮಹತ್ಕಾರ್ಯಗಳನ್ನು ಕೈಗೊಂಡಿರುವ ಪ್ರಮುಖ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್. -- ಉದ್ದೇಶಗಳು: ಕನ್ನಡ ವ್ಯಾಕರಣ, ಭಾಷಾಚರೀತ್ರೆ, ನಿಘಂಟುಗಳು ಇವುಗಳ ರಚನೆ, ಕನ್ನಡಶಾಸ್ತ್ರ ಗ್ರಂಥಗಳ ವಿಷಯವಾಗಿ ಚರ್ಚೆ, ನಿರ್ಣಯಗಳ ಅಂಗೀಕಾರ ಉತ್ಕೃಷ್ಟ ಪ್ರಾಚೀನ ಗ್ರಂಥಗಳ ಪ್ರಕಟಣೆ, ಕನ್ನಡ ಸಂಸ್ಥಾನಗಳ ಚರಿತ್ರೆಗಳ ಸಂಗ್ರಹ ಇತ್ಯಾದಿ.

★ ಸುಗ್ರೀವಾಜ್ಞೆ (Ordinance) : --

★ ಸುಗ್ರೀವಾಜ್ಞೆ (Ordinance) : --

ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನ ಸಭೆಗೆ. ಅದು ಬಿಟ್ಟರೆ ತುರ್ತು ಸಂಧರ್ಭಗಳಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂಧರ್ಭದಲ್ಲಿ ಮಾತ್ರ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶಾಸನಸಭೆ ನಡೆಯುತ್ತಿದ್ದ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಅಧಿಕಾರವಿಲ್ಲ.