ಬುಧವಾರ, ಜುಲೈ 29, 2015

☀ಗಡಿರೇಖೆಗಳು =ದೇಶಗಳು


☀ಗಡಿರೇಖೆಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈•☀ದೇಶಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━

●.ರಾಡ್ ಕ್ಲಿಫ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಪಾಕಿಸ್ತಾನ

●.ಮ್ಯಾಕ್ ಮೋಹನ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಚೀನಾ

●.ಡ್ಯುರಾಂಡ್ ರೇಖೆ:•┈┈┈┈┈┈• ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ

●.ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ):•┈┈┈┈┈┈• ಫ್ರಾನ್ಸ್ ಮತ್ತು ಜರ್ಮನಿ

●.38 ನೇ ಸಮಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ಕೊರಿಯಾ

●.17 ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ

●.49 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಅಮೇರಿಕಾ ಮತ್ತು ಕೆನಡಾ

●.ಹಿಂಡೆನ್ ಬರ್ಗ್ ರೇಖೆ:•┈┈┈┈┈┈• ಜರ್ಮನಿ ಮತ್ತು ಪೋಲೆಂಡ್

●.ಓಡೆರ್ ನೀಸ್ ರೇಖೆ:•┈┈┈┈┈┈• ಪೂರ್ವ ಜರ್ಮನಿ ಮತ್ತು ಪೋಲೆಂಡ್

●.ಸಿಗ್ ಫ್ರೈಡ್ ರೇಖೆ:•┈┈┈┈┈┈• ಜರ್ಮನಿ ಮತ್ತು ಫ್ರಾನ್ಸ್.

●.24 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಭಾರತ ಮತ್ತು ಮಯನ್ಮಾರ್

*ದಯಾನಂದ.ಎಮ್.ಡೋಣಗಾಪುರೆ

★ ಸುಜಲ-3 ಯೋಜನೆ (SUJAL-3):

★ ಸುಜಲ-3 ಯೋಜನೆ (SUJAL-3): ಜಲಾನಯನ ಪ್ರದೇಶಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕ ರಾಜ್ಯದ 7 ಜಿಲ್ಲೆಗಳಲ್ಲಿ (ದಾವಣಗೆರೆ, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ಗದಗ, ಬೀದರ್, ಚಾಮರಾಜನಗರ) ಜಾರಿ ಮಾಡಲಾಗಿದೆ. ತಂತ್ರಜ್ಞಾನಗಳಪರಿಣಾಮಕಾರಿ ಬಳಕೆಯತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ , ಮಾರ್ಗದರ್ಶನ ನೀಡುವ ಉದ್ದೇಶ ಈ ಯೋಜನೆ ಹೊಂದಿದೆ. ಈ ಯೋಜನೆಯ ಅನುಷ್ಠಾನಕ್ಕೆ 2013ನೇ ಸಾಲಿನಿಂದ 6 ವರ್ಷಗಳ ಕಾಲವನ್ನು ನಿಗದಿ ಪಡಿಸಲಾಗಿದೆ.

★ ಮೇಘ ಸ್ಫೋಟ (Cloud Burst) : -

★ ಮೇಘ ಸ್ಫೋಟ (Cloud Burst) : -

ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ.
ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ ಇರುತ್ತದೆ.

★ ಸಂಪೂರ್ಣ ಕ್ರಾಂತಿ(Total Revolution): --

★ ಸಂಪೂರ್ಣ ಕ್ರಾಂತಿ(Total Revolution): --

ಇಂದಿರಾಗಾಂಧಿರವರ ವಿರುದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಲೋಕನಾಯಕ ಜಯಪ್ರಕಾಶ ನಾರಾಯಣ ರವರು ಒತ್ತಾಯಿಸುವುದರೊಂದಿಗೆ ಈ ಕ್ರಾಂತಿಗೆ ಮುನ್ನುಡಿ ಹಾಕಿದರು. ಜಯಪ್ರಕಾಶ ನಾರಾಯಣ ರವರೊಂದಿಗೆ ವಿ.ಎಂ. ತಾರಕುಂಡೆರವರೂ ಕೂಡಾ ಕ್ರಾಂತಿಗೆ ಕರೆ ನೀಡಿದರು. ಈ ಕ್ರಾಂತಿಯ ಮುಖ್ಯ ಉದ್ದೇಶ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯಕ್ರಮ ಕೈಗೊಳ್ಳುವುದಾಗಿತ್ತು, ಆ ಮೂಲಕ ಸಂಪೂರ್ಣ ಕ್ರಾಂತಿಯನ್ನು ಮಾಡಬೇಕೇಂದು ಜಯಪ್ರಕಾಶ ನಾರಾಯಣ ರವರು ಒತ್ತಾಯಿಸಿ ಸಂಪೂರ್ಣ ಕ್ರಾಂತಿಗೆ(Total Revolution) ಕರೆ ನೀಡಿದರು.

★ ನ್ಯೂಕ್ಲಿಯರ್ ವಿಂಟರ್ (Nuclear Winter)

★ ನ್ಯೂಕ್ಲಿಯರ್ ವಿಂಟರ್ (Nuclear Winter) : --ಈ ಭೂಮಿಯ ಮೇಲೆ ಅಣುಯುದ್ಧವು ಸಂಭವಿಸಿದರೆ ವಾತಾವರಣದಲ್ಲಿ ಆಗುವ ಪರಿವರ್ತನೆಗಳನ್ನು ವಿವರಿಸಲು ಉಪಯೋಗಿಸುವ ಪದ.ಅಣುಯುದ್ಧದ ನಂತರ ಧೂಳು, ಹೊಗೆ, ರಸಾಯನಿಕ ಆಮ್ಲಗಳಿಂದ ದಟ್ಟವಾಗಿ ಆವೃತ್ತವಾಗಿ ನಭೋಮಂಡಲವನ್ನು ಸುತ್ತುಗಟ್ಟುತ್ತವೆ. ಅಣುಯುದ್ಧ ಮುಗಿದ ಸಾವಿರ ವರ್ಷಗಳ ನಂತರವೂ ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತೆ, ಈ ಧೂಳು ಹೊಗೆ, ಕಾರ್ಮೋಡವಾಗಿ ಭೂಮಿಯನ್ನು ಆವರಿಸುತ್ತದೆ. ಇದರಿಂದ ಭೂಮಿಯ ಮೇಲಿನ ಉಷ್ಣಾಂಶ ಕ್ರಮೇಣ ಕಡಿಮೆಯಾಗಿ 60 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಭೂಮಂಡಲದ ಮೇಲಿನ ಜೀವ ಸಂಕುಲಗಳು ಬದುಕಿ ಉಳಿದು ಜೀವನ ಸಾಗಿಸುವುದು ಅಸಾಧ್ಯ. ಅದನ್ನೇ 'ನ್ಯೂಕ್ಲಿಯರ್ ವಿಂಟರ್ (Nuclear Winter)' ಎಂದು ಕರೆಯುವರು.

★ ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): --

★ ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): --1915ರಲ್ಲಿ ಮೈಸೂರಿನ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಏರ್ಪಡಿಸಿದ ಸಮ್ಮೇಳನದ ಫಲವಾಗಿ ಸ್ಥಾಪನೆಯಾಯಿತು. ಇದರ ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. H.V.ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಏಳಿಗೆಗೆ ನಿರಂತರವಾಗಿ ಶ್ರಮಿಸುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡ ಸ್ಥಾನಮಾನ ಹಾಗೂ ಏಕೀಕರಣ, ಕನ್ನಡ ಜನಜಾಗೃತಿ ಮೊದಲಾದ ಮಹತ್ಕಾರ್ಯಗಳನ್ನು ಕೈಗೊಂಡಿರುವ ಪ್ರಮುಖ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್. -- ಉದ್ದೇಶಗಳು: ಕನ್ನಡ ವ್ಯಾಕರಣ, ಭಾಷಾಚರೀತ್ರೆ, ನಿಘಂಟುಗಳು ಇವುಗಳ ರಚನೆ, ಕನ್ನಡಶಾಸ್ತ್ರ ಗ್ರಂಥಗಳ ವಿಷಯವಾಗಿ ಚರ್ಚೆ, ನಿರ್ಣಯಗಳ ಅಂಗೀಕಾರ ಉತ್ಕೃಷ್ಟ ಪ್ರಾಚೀನ ಗ್ರಂಥಗಳ ಪ್ರಕಟಣೆ, ಕನ್ನಡ ಸಂಸ್ಥಾನಗಳ ಚರಿತ್ರೆಗಳ ಸಂಗ್ರಹ ಇತ್ಯಾದಿ.

★ ಸುಗ್ರೀವಾಜ್ಞೆ (Ordinance) : --

★ ಸುಗ್ರೀವಾಜ್ಞೆ (Ordinance) : --

ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನ ಸಭೆಗೆ. ಅದು ಬಿಟ್ಟರೆ ತುರ್ತು ಸಂಧರ್ಭಗಳಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂಧರ್ಭದಲ್ಲಿ ಮಾತ್ರ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶಾಸನಸಭೆ ನಡೆಯುತ್ತಿದ್ದ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಅಧಿಕಾರವಿಲ್ಲ.

★ ಭಾರತದ 14ನೇ ಹಣಕಾಸು ಆಯೋಗ: -

★ ಭಾರತದ 14ನೇ ಹಣಕಾಸು ಆಯೋಗ: -

2014 ಅ.31ರ ನಿಗದಿತ ಅವಧಿಯವರೆಗೆ ರಚನೆಗೊಂಡಿರುವ 14ನೇ ಹಣಕಾಸು ಆಯೋಗವನ್ನು ರಿಸರ್ವ್ ಬ್ಯಾಂಕಿನ ನಿವೃತ್ತ ಗವರ್ನರ್ ಡಾ. Y.V.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 2013 ಜ.2 ರಂದು ರಚಿಸಲಾಯಿತು. ಅಜಯ್ ನಾರಾಯಣ್ ಝಾ ರವರು ಈ ಆಯೋಗದ ಕಾರ್ಯದರ್ಶಿ ಗಳಾಗಿರುವರು.

--ಆಯೋಗದ ಕಾರ್ಯಗಳು:
* ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳ ಅಧ್ಯಯನ.
* ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ.
* ಸಹಾಯ ಧನ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ.
* 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸುಗಳ ಅನುಷ್ಟಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ, 2015ರ ಏಪ್ರೀಲ್ನಿಂದ 2020ರವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸುಗಳನ್ನು ಸಿದ್ಧ ಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಪ್ರಮುಖ ಕಾರ್ಯ.

★ ಸಾಮಾನ್ಯ ಜ್ಞಾನ(General Knowledge):

★ ಸಾಮಾನ್ಯ ಜ್ಞಾನ(General Knowledge):

1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.

4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.

9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.

24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.

25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.

27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.

33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .

35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ?
★ 1.

40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.

ಮಂಗಳವಾರ, ಜುಲೈ 28, 2015

ಅಬ್ದುಲ್ ಕಲಾಂ ಜೀವನಪಥ

*******ಅಬ್ದುಲ್ ಕಲಾಂ******
ದೇಶಕಂಡ ಅತ್ಯದ್ಬುತ ಮನುಷ್ಯ, ವಿಜ್ಞಾನಿ, ಯಶಸ್ವಿ ಮಾಜಿ ರಾಷ್ಟ್ರಪತಿ, ಸರಳ ಜೀವಿಯಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರು ಇಂದು ನಮ್ಮ ಜೊತೆಗೆ ಇಲ್ಲದಿರಬಹುದು. ಆದರೆ ಅವರು ಎಂದೆಂದಿಗೂ ಭಾರತೀಯರ ಮನಸ್ಸಿನಲ್ಲಿ, ಹೃದಯದಲ್ಲಿ ಎಂದೆಂದಿಗೂ ಅಜರಾಮರವಾಗಿರುತ್ತಾರೆ. ಅಂತಹ ಮತ್ತೊಬ್ಬ ಕಲಾಂ ರನ್ನು ನಾವು ಕಾಣಲಾರೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೊಮ್ಮೆ ಅವರು ನಮ್ಮ ದೇಶದಲ್ಲಿ ಜನಿಸಲಿ ಎಂದು ಹಾರೈಸೋಣ. ಅವರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

*ಜೀವನಪಥ :- 
1931ಅಕ್ಟೋಬರ್ 15: ತಮಿಳು ನಾಡಿನ ರಾಮೇಶ್ವರಂನಲ್ಲಿ ಜನನ.
1954: ತಿರುಚಿನಾಪಳ್ಳಿ ಸೇಂಟ್ ಜೋಸೆಫ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಪದವಿ.
1960: ಮದ್ರಾಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ.
1960: ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಗೆ ವಿಜ್ಞಾನಿಯಾಗಿ ಸೇರ್ಪಡೆ.
1969: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ವರ್ಗಾವಣೆ.
1980: ರೋಹಿಣಿ ಉಪಗ್ರಹವನ್ನು ಭಾರತದ ಪ್ರಪ್ರಥಮ ಸ್ವದೇಶಿ ನಿರ್ವಿುತ ಎಸ್​ಎಲ್​ವಿ ಉಡಾವಣಾ ವಾಹನ ಮೂಲಕ ಕಕ್ಷೆಗೆ ಸೇರಿಸಿದ ಕೀರ್ತಿ.
1992 ಜುಲೈ: ಪ್ರಧಾನಮಂತ್ರಿ ಅವರಿಗೆ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕ.
1998: ಹೃದಯತಜ್ಞ ಸೋಮರಾಜು ಅವರೊಂದಿಗೆ ಸೇರಿ ‘ಕೊರೊನರಿ ಸ್ಟೆಂಟ್’ ಎಂಬ ಉಪಕರಣದ ಅಭಿವೃದ್ಧಿ.
25 ಜುಲೈ 2002: ಭಾರತದ 11ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ.
2012: ಹೃದಯತಜ್ಞ ಸೋಮ ರಾಜು ಅವರೊಂದಿಗೆ ಸೇರಿ ಗ್ರಾಮೀಣ ಆರೋಗ್ಯ ಸೇವೆಗಾಗಿ ವಿಶೇಷ ಟ್ಯಾಬ್ಲೆಟ್ ನಿರ್ವಣ.
2015 ಜುಲೈ 27: ಶಿಲ್ಲಾಂಗ್​ನಲ್ಲಿ ನಿಧನ.

*ಪ್ರಮುಖ ಕೃತಿಗಳು ವರ್ಷ:-
ಇಂಡಿಯಾ 2020- 1998
ವಿಂಗ್ಸ್ ಆಫ್ ಫೈರ್ 1999
ಇಗ್​ನೈಟೆಟ್ ಮೈಂಡ್ 2002
ಗೈಡಿಂಗ್ ಸೋಲ್ 2005
ಟಾರ್ಗೆಟ್ 3 ಬಿಲಿಯನ್ 2011
ಟರ್ನಿಂಗ್ ಪಾಯಿಂಟ್ಸ್ 2012
ಮೈ ಜರ್ನಿ 2013

*ಪ್ರಶಸ್ತಿಗಳು :-
1.ಪದ್ಮಭೂಷಣ - 1981
2.ಪದ್ಮವಿಭೂಷಣ - 1990
3.ಭಾರತ ರತ್ನ -1997
4.ಇಂದಿರಾ ಗಾಂಧಿ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ - 1998

ಬುಧವಾರ, ಜುಲೈ 15, 2015

ಭಾರತ ಈಗ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರ.

ಭಾರತ ಈಗ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರ.

ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತದ ಜಿಡಿಪಿ 2014ರಲ್ಲಿ ಇದ್ದ 2 ಟ್ರಿಲಿಯನ್ ಡಾಲರ್ ಗಡಿಯಿಂದ ಈಗ 2.067 ಟ್ರಿಲಿಯನ್ (2,067,000,000,000) ಡಾಲರ್​ಗಳಿಗೆ ನೆಗೆದಿದೆ.

ಕೇವಲ 7 ವರ್ಷಗಳಲ್ಲಿ ಭಾರತ ತನ್ನ ಆರ್ಥಿಕತೆಗೆ ಒಂದು ಟ್ರಿಲಿಯನ್​ನ್ನು ಸೇರ್ಪಡೆ ಮಾಡಿದೆ.

ಆದಾಯದ ಆಧಾರದಲ್ಲಿ ಲೆಕ್ಕ ಹಾಕಿದರೆ ಭಾರತ ಇನ್ನೂ ಕೆಳ ಮಧ್ಯಮ ಆದಾಯದ ವರ್ಗದಲ್ಲಿಯೇ ಇದೆ.

ಭಾರತದ ಒಬ್ಬ ವ್ಯಕ್ತಿಯ ಮೇಲಿನ ಒಟ್ಟು ರಾಷ್ಟ್ರೀಯ ಆದಾಯ 1,610 ಡಾಲರ್​ಗೆ ಏರಿದೆ. ಹಾಲಿ ವಿನಿಮಯ ದರದ ಪ್ರಕಾರ ಇದು 1,01,430 ರೂಪಾಯಿಗಳಾಗುತ್ತದೆ.

ಭಾರತವು ಈ ವರ್ಷ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಒಂದು ಎನಿಸಿದೆ.

ಭಾರತದ ಆರ್ಥಿಕತೆ ಚೇತರಿಕೆಯ ಹಂತದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್​ರಾಜನ್ ಗುರುವಾರ ಹೇಳಿದ್ದರು.

‘ಬಂಡವಾಳ ಹೂಡಿಕೆಗಳು ಹೆಚ್ಚುವ ಸಂಕೇತಗಳು ಕಾಣುತ್ತಿವೆ’ ಎಂದು ಅವರು ಹೇಳಿದ್ದರು.

ಭಾರತದ ಜಿಡಿಪಿ ಬೆಳವಣಿಗೆಯ ನೋಟ ಈ ಕೆಳಗಿನಂತಿದೆ.

2010ರಲ್ಲಿ 1.708 ಟ್ರಿಲಿಯನ್ ಡಾಲರ್.

2011ರಲ್ಲಿ 1.835 ಟ್ರಿಲಿಯನ್ ಡಾಲರ್.

2012ರಲ್ಲಿ 1.831 ಟ್ರಿಲಿಯನ್ ಡಾಲರ್.

2013ರಲ್ಲಿ 1.861 ಟ್ರಿಲಿಯನ್ ಡಾಲರ್.

2014ರಲ್ಲಿ 2.066 ಟ್ರಿಲಿಯನ್ ಡಾಲರ್.

ಈಗ 2.067 ಟ್ರಿಲಿಯನ್ ಡಾಲರ್

Posted by: --Dayanand.m.ddonagapure
At post -Gorta(B) Tq-Basavakalyan District-Bidar
if any doubt pls call me below no 8197695141.