ಭಾರತ ಈಗ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರ.
ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತದ ಜಿಡಿಪಿ 2014ರಲ್ಲಿ ಇದ್ದ 2 ಟ್ರಿಲಿಯನ್ ಡಾಲರ್ ಗಡಿಯಿಂದ ಈಗ 2.067 ಟ್ರಿಲಿಯನ್ (2,067,000,000,000) ಡಾಲರ್ಗಳಿಗೆ ನೆಗೆದಿದೆ.
ಕೇವಲ 7 ವರ್ಷಗಳಲ್ಲಿ ಭಾರತ ತನ್ನ ಆರ್ಥಿಕತೆಗೆ ಒಂದು ಟ್ರಿಲಿಯನ್ನ್ನು ಸೇರ್ಪಡೆ ಮಾಡಿದೆ.
ಆದಾಯದ ಆಧಾರದಲ್ಲಿ ಲೆಕ್ಕ ಹಾಕಿದರೆ ಭಾರತ ಇನ್ನೂ ಕೆಳ ಮಧ್ಯಮ ಆದಾಯದ ವರ್ಗದಲ್ಲಿಯೇ ಇದೆ.
ಭಾರತದ ಒಬ್ಬ ವ್ಯಕ್ತಿಯ ಮೇಲಿನ ಒಟ್ಟು ರಾಷ್ಟ್ರೀಯ ಆದಾಯ 1,610 ಡಾಲರ್ಗೆ ಏರಿದೆ. ಹಾಲಿ ವಿನಿಮಯ ದರದ ಪ್ರಕಾರ ಇದು 1,01,430 ರೂಪಾಯಿಗಳಾಗುತ್ತದೆ.
ಭಾರತವು ಈ ವರ್ಷ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಒಂದು ಎನಿಸಿದೆ.
ಭಾರತದ ಆರ್ಥಿಕತೆ ಚೇತರಿಕೆಯ ಹಂತದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ರಾಜನ್ ಗುರುವಾರ ಹೇಳಿದ್ದರು.
‘ಬಂಡವಾಳ ಹೂಡಿಕೆಗಳು ಹೆಚ್ಚುವ ಸಂಕೇತಗಳು ಕಾಣುತ್ತಿವೆ’ ಎಂದು ಅವರು ಹೇಳಿದ್ದರು.
ಭಾರತದ ಜಿಡಿಪಿ ಬೆಳವಣಿಗೆಯ ನೋಟ ಈ ಕೆಳಗಿನಂತಿದೆ.
2010ರಲ್ಲಿ 1.708 ಟ್ರಿಲಿಯನ್ ಡಾಲರ್.
2011ರಲ್ಲಿ 1.835 ಟ್ರಿಲಿಯನ್ ಡಾಲರ್.
2012ರಲ್ಲಿ 1.831 ಟ್ರಿಲಿಯನ್ ಡಾಲರ್.
2013ರಲ್ಲಿ 1.861 ಟ್ರಿಲಿಯನ್ ಡಾಲರ್.
2014ರಲ್ಲಿ 2.066 ಟ್ರಿಲಿಯನ್ ಡಾಲರ್.
ಈಗ 2.067 ಟ್ರಿಲಿಯನ್ ಡಾಲರ್
Posted by: --Dayanand.m.ddonagapure
At post -Gorta(B) Tq-Basavakalyan District-Bidar
if any doubt pls call me below no 8197695141.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ