ಪ್ರಾಚಿನ ಭಾರತದ ಇತಿಹಾಸ
ಕಿ.ಪೂ. 6 ನೇ ಶತಮಾನದಲ್ಲಿ ಮಗಧ ಪ್ರದೇಶದಲ್ಲಿದ್ದ 16 ಗಣರಾಜ್ಯಗಳನ್ನು ಸೋಲಿಸಿ ಹರ್ಯಂಕ ವಂಶದವರು ಉತ್ತರ ಭಾರತದಲ್ಲಿ ಒಂದು ಪ್ರಬಲ ಸಾಮ್ರಾಜ್ಯ ಕಟ್ಟಿದರು. ಬಿಂಬಸಾರ(ಶ್ರಣಿಕ) ಮತ್ತು ಅಜಾತಶತ್ರು ಹರ್ಯಂಕ ವಂಶದ ರಾಜರು. ಇವರು ಸುಮಾರು 60 ವರ್ಷದವರೆಗೆ ಆಳ್ವಿಕೆ ಮಾಡಿದರು.
ಹರ್ಯಂಕರ ನಂತರ ಮಗಧವು ನಂದ ವಂಶದವರ ಕೈ ಸೇರಿತು. ಮಹಾಪದ್ಮನಂದ ನಂದ ವಂಶದ ಸ್ಥಾಪಕ. ಇವರ ರಾಜಧಾನಿ ಪಾಟಲಿಪುತ್ರ. ನಂದರ ಕಾಲದಲ್ಲಿ ಮಗಧವು ದಕ್ಷಿಣದಲ್ಲಿ ಕಾವೇರಿ ನದಿಯವರೆಗೆ ಹರಡಿತು.
ಕಿ.ಪೂ. 323 ರಲ್ಲಿ ಮುರದೇವಿಯ ಪುತ್ರ ಚಂದ್ರಗುಪ್ತನು ಕೌಟಿಲ್ಯನೆಂಬ ಬ್ರಾಹ್ಮಣನ ಮಾರ್ಗದರ್ಶನದಲ್ಲಿ ಗ್ರೀಕ್ ಪ್ರಾಂತಧಿಕಾರಿ ಸೇಲುಕಾಸ್ ನ ಮೇಲೆ ದಾಳಿಮಾಡಿ ಅವರ ವಶದಲ್ಲಿದ್ದ ಪಂಜಾಬ್ ಮತ್ತು ವಾಯುವ್ಯ ಭಾರತದ ಭಾಗಗಳನ್ನು ವಶಪಡಿಸಿಕೊಂಡನು.
ಕಿ.ಪೂ. 321 ರಲ್ಲಿ ಚಂದ್ರಗುಪ್ತನು ಮಗಧದ ನಂದ ವಂಶದ ದೊರೆ ಧನ ನಂದನನ್ನು ಸೋಲಿಸಿ ಭಾರತದಲ್ಲಿ ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದನು.
ಕಿ.ಪೂ. 305 ರಲ್ಲಿ ಸೇಲುಕಾಸ್ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆಯಲು ಸಿಂಧು ನದಿಯವರೆಗೆ ಬರುವನು ಆದರೆ ಚಂದ್ರಗುಪ್ತನು ಮತ್ತೆ ಸೇಲುಕಾಸ್ ನನ್ನು ಸೋಲಿಸುವನು ಇದರಿಂದ ಚಂದ್ರಗುಪ್ತನಿಗೆ ಕಾಬುಲ್ , ಕಂದಹಾರ್ ಮತ್ತು ಹೇರತ್ ಪ್ರದೇಶಗಳು ದೊರೆತವು. ಇದರ ನಂತರ ಸ್ನೇಹ ಸಂಬಂಧ ಬೆಳೆಸಿದ ಸೇಲುಕಾಸ್ ಚಂದ್ರಗುಪ್ತನ ಆಸ್ಥಾನದಲ್ಲಿ ಮೆಗತನಿಸ್ ನೆಂಬ ಗ್ರೀಕ್ ರಾಯಭಾರಿಯನ್ನು ಕಳುಹಿಸಿದನು.
ಮೆಗತನಿಸ್ ಬರೆದ "ಇಂಡಿಕ" ಮತ್ತು ಕೌಟಿಲ್ಯ ಬರೆದ "ಅರ್ಥಶಾತ್ರ" ಕ್ರತಿಗಳು ಮೌರ್ಯರ ಆಡಳಿತ , ಅಂದಿನ ಸಾಮಾಜಿಕ ಪರಿಸರದ ಬಗ್ಗೆ ಮಾಹಿತಿ ಒಳಗೊಂಡಿವೆ. ಚಂದ್ರಗುಪ್ತನು ಉತ್ತಮ ಆಡಳಿತಕ್ಕಾಗಿ ನಂದರ ಮಂತ್ರಿಯಾಗಿದ್ದ "ಅಮ್ರಾತಾಮಹರ್ಷಿ" ಯನ್ನೇ ತನ್ನ ಮಂತ್ರಿಯನ್ನಾಗಿ ನೇಮಿಸಿದನು. ಇವನ ಪುಷ್ಯಗುಪ್ತ ಮಂತ್ರಿಯು ಗುಜರಾತನಲ್ಲಿ ನೀರಾವರಿಗಾಗಿ "ಸುದರ್ಶನ್" ಜಲಾಶಯ ನಿರ್ಮಿಸಿದನು.
Posted by:
Dayanand.m.donagapure
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ