ಬುಧವಾರ, ಜುಲೈ 20, 2016

#ಸಾಮಾನ್ಯಜ್ಞಾನ 1 to 51

#ಸಾಮಾನ್ಯಜ್ಞಾನ

1) "Poverty and the unbritish rule in india" ಎಂಬ ಕೃತಿಯನ್ನು ರಚಿಸಿದವರು ಯಾರು?
 * ದಾದಾಭಾಯಿನವರೋಜಿ.

2) "ಫಾಯಿಯಾನ್" ಯಾವ ದೇಶದ ಯಾತ್ರಿಕ?
 * ಚೀನಿ.

3) "ಭಾರತ ನಿರ್ಮಾಣ ಯೋಜನೆ"ಯನ್ನು ಆರಂಭಿಸಲಾದ ವರ್ಷ ಯಾವುದು?
 * 2005.

4) "ಸುಂದರಬನ ಉದ್ಯಾನವನ" ಯಾವ ರಾಜ್ಯದಲ್ಲಿದೆ?
 * ಪಶ್ಚಿಮಬಂಗಾಳ.

5) "The Discovery of India" ಕೃತಿಯನ್ನು ರಚಿಸಿದವರು ಯಾರು?
 * ಜವಾಹರ್ ಲಾಲ್ ನೆಹರು.

6) ಆರ್ಕ್ಟಿಕ್ ಪ್ರದೇಶದಲ್ಲಿರುವ ಭಾರತೀಯ ತಾಣ ಯಾವುದು?
 RBS: * ಹಿಮಾದ್ರಿ.

7) ವಿದ್ಯುತ್ ಪ್ರವಾಹದ ಏಕಮಾನ ಯಾವುದು?
 * ಆಂಪಿಯರ್.

8) ಅಲೆಕ್ಸಾಂಡರ್ ದಾಳಿಯನ್ನು ಭಾರತದಲ್ಲಿ ಪ್ರತಿರೋಧಿಸಿದ ಅರಸ ಯಾರು?
 * ಪೋರಸ್.

9) "ನಾಥುಲಾಪಾಸ್" ಯಾವ ವಾಣಿಜ್ಯ ಮಾರ್ಗದಲ್ಲಿದೆ?
 * ಭಾರತ-ಚೀನಾ ವಾಣಿಜ್ಯ ಮಾರ್ಗ.

10) WWW ನ ಚಿಹ್ನೆ ಏನು?
 * ದೈತ್ಯಪಾಂಡಾ.

11) "The Insider" ಕೃತಿಯನ್ನು ರಚಿಸಿದವರು ಯಾರು?
 * ಪಿ.ವಿ.ನರಸಿಂಹರಾವ್.

12) "ವಿಶ್ವ ಜನಸಂಖ್ಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
 * ಜುಲೈ 11 (1987 ರಿಂದ).

13) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ & ದಿನ ಯಾವುದು?
 * 1935, ಏಪ್ರಿಲ್ 1.

14) ವಿಶ್ವ ಸಂಸ್ಥೆಯು ಯಾವ ವರ್ಷವನ್ನು "ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷ" ಎಂದು ಘೋಷಿಸಿದೆ?
 * 2008.

15) "ಆಂಕಾಲಜಿ" ಎನ್ನುವುದು ಯಾವುದರ ವೈಜ್ಞಾನಿಕ ಅಧ್ಯಯನ?
 * ಕ್ಯಾನ್ಸರ್ ರೋಗದ.

16) ಜಗತ್ತಿನ ಅತ್ಯಂತ ದೊಡ್ಡ ನದಿ ಯಾವುದು?
 * ಅಮೇಜಾನ್.

17) "ಮಲ್ಹೋತ್ರ ಆಯೋಗ" ಯಾವುದಕ್ಕೆ ಸಂಬಂಧಿಸಿದೆ?
 * ವಿಮಾ ಕ್ಷೇತ್ರದಲ್ಲಿ ಸುಧಾರಣೆಗೆ.

18) "ಹಿಂದ್ ಸ್ವರಾಜ್" ಕೃತಿಯನ್ನು ರಚಿಸಿದವರು ಯಾರು?
 * ಮಹಾತ್ಮ ಗಾಂಧಿ.

19) ದಲೈಲಾಮಾ ಅವರಿಗೆ ನೋಬೆಲ್ ಶಾಂತಿ ಬಹುಮಾನ ಲಭಿಸಿದ ವರ್ಷ ಯಾವುದು?
 RBS: * 1989.

20) ಸೌರಶಕ್ತಿಯನ್ನು ಯಾವುದರಿಂದ ಮಾಡಿರುತ್ತದೆ?
 * ಸಿಲಿಕಾನ್.

21) ಮನುಷ್ಯನ ಶರೀರದಲ್ಲಿರುವ ಅತ್ಯಂತ ದೊಡ್ಡ ಗ್ರಂಥಿ ಯಾವುದು?
 * ಲಿವರ್(ಯಕೃತ).

22) "ಬ್ಲಾಕ್ ರೆವಲ್ಯೂಶನ್" ಸಂಬಂಧಿಸಿರುವುದು ಯಾವುದಕ್ಕೆ?
 * ಕಲ್ಲಿದ್ದಲು.

23) ಪ್ರಕಾಶ ವರ್ಷವು (ಜ್ಯೋತಿರ್ ವರ್ಷವು) ಯಾವುದನ್ನು ಅಳೆಯಲು ಬಳಕೆಯಾಗುತ್ತದೆ?
 * ದೂರ.

24) ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷರು ಯಾರು?
 RBS: * ಅನಿಬೆಸೆಂಟ್.

25) ಶಿವಾಜಿ ರಚಿಸಿದ ಮಂತ್ರಿ ಮಂಡಲವನ್ನು ಏನೆಂದು ಕರೆಯುತ್ತಿದ್ದರು?
 * ಅಷ್ಟ ಪ್ರಧಾನ.

26) ಬಾಂಗ್ಲಾದೇಶದ ರಾಜಧಾನಿ & ಕರೆನ್ಸಿ ತಿಳಿಸಿ?
 * ಡಾಕಾ, ಟಾಕಾ.

27) "ಆಲಿಘರ್ ವಿಶ್ವ ವಿದ್ಯಾಲಯ"ವನ್ನು ಸ್ಥಾಪಿಸಿದವರು ಯಾರು?
 * ಸರ್ ಸಯ್ಯದ್ ಅಹಮದ್ ಖಾನ್.

28) ಪಶ್ಚಿಮ ಆಸ್ಟ್ರೇಲಿಯನ್ ಪ್ರವಾಹವು ಯಾವ ಸಾಗರದೊಳಗೆ ಹರಿಯುತ್ತದೆ?
 * ಹಿಂದೂ ಮಹಾಸಾಗರ.

29) "Gerontology" ಎಂದರೆ?
 * ವೃದ್ಧಾಪ್ಯಕ್ಕೆ ಸಂಬಂಧಿಸಿದ ಅಧ್ಯಯನ.

30) "ಭಾರತದ ಹಸಿರು ಕ್ರಾಂತಿಯ ಪಿತಾಮಹ" ಯಾರು?
 * ಎಂ.ಎಸ್.ಸ್ವಾಮಿನಾಥನ್.

31) ಕೊನೆಯ ವೇದ ಯಾವುದು?
 * ಅರ್ಥವಣವೇದ.

32) ಅಲಕಾನಂದ ಮತ್ತು ಭಗೀರಥಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
 RBS: * ದೇವ ಪ್ರಯಾಗ.

33) "ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ" ಎಂಬುದನ್ನು ಕಂಡು ಹಿಡಿದ ವಿಜ್ಞಾನಿ ಯಾರು?
 * ನಿಕೋಲಸ್ ಕೋಪರ್ ನಿಕಸ್.

34) ಯಾವ ಹೊದಿಕೆಯು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ?
 * ಓಜೋನ್.

35) ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಯಾರು?
 * ವಿ.ಎಸ್.ನೈಪಾಲ್.

36) ಜಗತ್ತಿನಲ್ಲಿ ಅತ್ಯಧಿಕ ಸಕ್ಕರೆ ಬಳಸುವ ದೇಶ ಯಾವುದು?
 * ಯು.ಎಸ್.ಎ.

37) ಯು ಪಿ ಎಸ್ ಸಿ ಅಧ್ಯಕ್ಷರನ್ನು ಯಾರು ನೇಮಕ ಮಾಡುತ್ತಾರೆ?
 * ರಾಷ್ಟ್ರಪತಿ.

38) ಭಾರತೀಯ ರಪ್ತು-ಆಮದು ಬ್ಯಾಂಕ್ ಸ್ಥಾಪಿತವಾದ ವರ್ಷ ಯಾವುದು?
 * 1982.

39) "ರಾಜತರಂಗಿಣಿ"ಯನ್ನು ರಚಿಸಿದವರು ಯಾರು?
 * ಕಲ್ಹಣ.

40) "ಖೈಬರ್ ಕಣಿವೆ" ಇರುವುದು?
 * ವಾಯುವ್ಯ ಭಾರತದಲ್ಲಿ.

41) ಅತ್ಯಧಿಕ ಪ್ರದೇಶದಲ್ಲಿ "ಗೋಡಂಬಿ" ಬೆಳೆಯುವ ಕರ್ನಾಟಕದ ಜಿಲ್ಲೆ ಯಾವುದು?
 * ಕೊಡಗು.

42) ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು?
 * ಕ್ಷ-ಕಿರಣಗಳು

43) ಪ್ಲಾನಿಮೀಟರ್ ನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ?
 * ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ.

44) ಸೂರ್ಯನು ಭೂಮಿಯ ಸಮಭಾಜಕ ವೃತ್ತರೇಖೆಯ ನೇರ ಲಂಭದಲ್ಲಿದ್ದಾಗ ಅಂತಹ ಸ್ಥಿತಿಯನ್ನು ---- ಎನ್ನುತ್ತಾರೆ.
 RBS: * ವಿಷವತ್ಸಂಕ್ರಾಂತಿ.

45) ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಮುಖ್ಯವಾಗಿ ಯಾವುದರಲ್ಲಿ ದೊರೆಯುತ್ತವೆ?
 * ಜಲಜ ಶಿಲೆಗಳಲ್ಲಿ.

46) "ಹೇಬಿಯಸ್ ಕಾರ್ಪಸ್" ಎನ್ನುವದೊಂದು....
 * ರೀಟ್.

47) 7ನೇ ಡಬ್ಯ್ಲೂ ಟಿ ಒ ಸಚಿವ ಮಟ್ಟದ ಸಮಾವೇಶವನ್ನು 2008 ರಲ್ಲಿ ಎಲ್ಲಿ ನಡೆಸಲಾಯಿತು?
 RBS: * ಜಿನೇವಾ.

48) ಭಾರತ ಸಂವಿಧಾನದ 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
 * ಪಂಚಾಯತ್ ವ್ಯವಸ್ಥೆಗೆ.

49) ಕಂಪ್ಯೂಟರ್ ಗಳ ಅನ್ವೇಷಣೆಗೆ ಸಂಬಂಧಿಸಿದ ಹೆಸರು ಯಾರದು?
 * ಚಾರ್ಲಸ್ ಬಾಬೇಜ್.

50) NASA ವಿಸ್ತರಿಸಿರಿ?
 * National Aeronautics and Space Administration.

51) ವಿಧಾನ ಸಭೆಯ ಸ್ಪೀಕರ್ ಯಾರಿಗೆ ರಾಜೀನಾಮೆ ಪತ್ರ ಸಲ್ಲಿಸುವರು?
 * ಡೆಪ್ಯುಟಿ ಸ್ಪೀಕರ್ ಅವರಿಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ