ಮಂಗಳವಾರ, ಡಿಸೆಂಬರ್ 30, 2014

ಸಾಮಾನ್ಯ ಜ್ಞಾನ (31.12.2014)

1) ಕರ್ನಾಟಕ ರಾಜ್ಯ ಯಾವ ವರ್ಷ ಏಕೀಕರಣಗೊಂಡಿತು?

ಅ. ನವೆಂಬರ್ 01, 1953
ಬ. ನವೆಂಬರ್ 01, 1954
ಕ. ನವೆಂಬರ್ 01, 1955
ಡ. ನವೆಂಬರ್ 01, 1956 ●

○●○●○●○●○●○●○●○

2) 'ಕರ್ನಾಟಕ ಏಕೀಕರಣ ಚಳುವಳಿ'ಯನ್ನು ಮೊದಲು ಪ್ರಾರಂಭಿಸಿದವರು ಯಾರು?

ಅ. ಅಂದಾನಪ್ಪ ದೊಡ್ಡಮೇಟಿ
ಬ. ಆಲೂರು ವೆಂಕಟರಾವ್ ●
ಕ. ಅನ್ನದಾನಯ್ಯ ಪುರಾಣಿಕ
ಡ. ಹುಯಿಲಗೋಳ ನಾರಾಯಣರಾಯ

○●○●○●○●○●○●○●○

3) ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್'ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆತದ್ದು ಎಲ್ಲಿ?

ಅ. ಮೈಸೂರು
ಬ. ಬೆಳಗಾವಿ ●
ಕ. ಧಾರವಾಡ
ಡ. ಗುಲ್ಬರ್ಗ

○●○●○●○●○●○●○●○

4) ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡಿದ್ದು ಯಾವಾಗ?

ಅ. ನವೆಂಬರ್ 01, 1973 ●
ಬ. ನವೆಂಬರ್ 01, 1974
ಕ. ನವೆಂಬರ್ 01, 1975
ಡ. ನವೆಂಬರ್ 01, 1976

○●○●○●○●○●○●○●○

5) "ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದವರು ಯಾರು?

ಅ. ರಾ.ಹ.ದೇಶಪಾಂಡೆ
ಬ. ಆಲೂರು ವೆಂಕಟರಾವ್ ●
ಕ. ಸಿದ್ದಪ್ಪ ಕಂಬಳಿ
ಡ. ಹುಯಿಲಗೋಳ ನಾರಾಯಣರಾಯ

○●○●○●○●○●○●○●○

6) ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಹಾಡಿದ್ದು ಯಾವಾಗ?

ಅ. ನವೆಂಬರ್ 01, 1922
ಬ. ನವೆಂಬರ್ 25, 1922
ಕ. ಡಿಸೆಂಬರ್ 01, 1924
ಡ. ಡಿಸೆಂಬರ್ 25, 1924 ●

○●○●○●○●○●○●○●○

7) ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲು 'ಎಸ್.ನಿಜಲಿಂಗಪ್ಪ'ನವರ ನೇತೃತ್ವದಲ್ಲಿ ಎಲ್ಲಿ ಸಭೆ ಸೇರಲಾಗಿತ್ತು?

ಅ. ಹುಬ್ಬಳ್ಳಿ ●
ಬ. ಬೆಳಗಾವಿ
ಕ. ಬೆಂಗಳೂರು
ಡ. ಮೈಸೂರು

○●○●○●○●○●○●○●○

8) ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಯಾರು?

ಅ. ದೊಡ್ಡಮೇಟಿ ಅಂದಾನಪ್ಪ
ಬ. ರೊದ್ದ ಶ್ರೀನಿವಾಸರಾವ್
ಕ. ರಾ.ಹ.ದೇಶಪಾಂಡೆ
ಡ. ಅನ್ನದಾನಯ್ಯ ಪುರಾಣಿಕ ●

○●○●○●○●○●○●○●○

9) ಕರ್ನಾಟಕ ಏಕೀಕರಣ ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಅಮರಣಾಂತ ಉಪವಾಸ ಕೈಗೊಂಡಿದ್ದವರು ಯಾರು?

ಅ. ರಾ.ಹ.ದೇಶಪಾಂಡೆ
ಬ. ಅನ್ನದಾನಯ್ಯ ಪುರಾಣಿಕ
ಕ. ಅದರಗುಚ್ಚಿ ಶಂಕರಗೌಡ ●
ಡ. ರೊದ್ದ ಶ್ರೀನಿವಾಸರಾವ್

○●○●○●○●○●○●○●○

10) ಅಂದಾನಪ್ಪ ದೊಡ್ಡಮೇಟಿ ಅವರು ಕರ್ನಾಟಕ ರಚನೆಗೆ ಒತ್ತಾಯಿಸಿ ಏಪ್ರಿಲ್ 01, 1947ರಂದು ಖಾಸಗಿ ಗೊತ್ತುವಳಿ ಮಂಡಿಸಿದರು. ಅಂದಹಾಗೆ ಈ ಗೊತ್ತುವಳಿ ಎಷ್ಟು ಪರ ಹಾಗೂ ವಿರೋಧ ಮತಗಳನ್ನು ಪಡೆಯಿತು?

ಅ. 51 - 15
ಬ. 54 - 12
ಕ. 67 - 09
ಡ. 60 - 06 ●

○●○●○●○●○●○●○●○

11) 'ಹೊತ್ತಿತೋ ಹೊತ್ತಿತು ಕನ್ನಡದ ದೀಪ....' ಎಂಬ ಭಾವಗೀತೆಯ ಮೂಲಕ ಕನ್ನಡದ ಜ್ಯೋತಿಯನ್ನು ಬೆಳಗಿದ ಸಾಹಿತಿ ಯಾರು?

ಅ. ಕೆ.ಎಸ್.ನರಸಿಂಹ ಸ್ವಾಮಿ
ಬ. ಚಂದ್ರಶೇಖರ ಕಂಬಾರ್
ಕ. ಸಿದ್ದಯ್ಯ ಪುರಾಣಿಕ ●
ಡ. ಕುವೆಂಪು

○●○●○●○●○●○●○●○

12) ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಯಾವಾಗ?

ಅ. 1911
ಬ. 1913
ಕ. 1915 ●
ಡ. 1918

○●○●○●○●○●○●○●○

13) ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಯಾರು?

ಅ. ಮುಮ್ಮಡಿ ಕೃಷ್ಣರಾಜ ಒಡೆಯರ್
ಬ. ನಾಲ್ವಡಿ ಕೃಷ್ಣರಾಜ ಒಡೆಯರ್ ●
ಕ. ಚಾಮರಾಜ ಒಡೆಯರ್
ಡ. ಜಯಚಾಮರಾಜ. ಒಡೆಯರ್

○●○●○●○●○●○●○●○

14) 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ಕೊಡಲು ಪ್ರಾರಂಭಿಸಿದ್ದು ಯಾವಾಗ?

ಅ. 1960
ಬ. 1962
ಕ. 1964
ಡ. 1966 ●

○●○●○●○●○●○●○●○

15) ಹೈದರಾಬಾದ್ ಕರ್ನಾಟಕದಲ್ಲಿ 1856ಕ್ಕಿಂತ ಮೊದಲೇ 'ಕನ್ನಡ ಮಾಧ್ಯಮ' ಶಿಕ್ಷಣಕ್ಕಾಗಿ ಚಳುವಳಿ ಪ್ರಾರಂಭಿಸಿದವರು ಯಾರು?

ಅ. ಚನ್ನಬಸಪ್ಪ ●
ಬ. ಮಂಗಳವೇಡ ಶ್ರೀನಿವಾಸರಾಯರು
ಕ. ಸಿದ್ದಪ್ಪ ಕಂಬಳಿ
ಡ. ಆರ್.ಆರ್.ದಿವಾಕರ್

○●○●○●○●○●○●○●○

16) 'ಕನ್ನಡ ಧ್ವಜ'ವನ್ನು ವಿನ್ಯಾಸಗೊಳಿಸಿದವರು ಯಾರು?

ಅ. ತ.ರಾ.ಸುಬ್ಬರಾಯರು
ಬ. ರಂ.ಶ್ರೀ.ಮುಗಳಿ
ಕ. ಮ.ರಾಮಮೂರ್ತಿ ●
ಡ. ಆಲೂರು ವೆಂಕಟರಾಯರು

○●○●○●○●○●○●○●○

17) ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ಎಷ್ಟು ಜಿಲ್ಲೆಗಳಿದ್ದವು?

ಅ. 18
ಬ. 19 ●
ಕ. 21
ಡ. 22

○●○●○●○●○●○●○●○

18) 1886ರಲ್ಲಿ ಕೊಡಗಿನ ಶಿಲಾಶಾಸನಗಳನೆಲ್ಲ ಸಂಗ್ರಹಿಸಿ 'ಎಪಿಗ್ರಾಫಿಯ ಕರ್ನಾಟಕ' ಎಂಬ ಹೆಸರಿನಲ್ಲಿ ಶಿಲಾಶಾಸನಗಳ ಮಾಲಿಕೆಗೆ ನಾಂದಿ ಹಾಡಿದ ಇತಿಹಾಸಕಾರ ಯಾರು?

ಅ. ಥಾಮಸ್ ಕಾರ್ಲೈಲ್
ಬ. ಕಾರ್ಲ್ ಮಾರ್ಕ್ಸ
ಕ. ರೋಬೇರ್ತ್ ಬ್ರೂಸ್ ಫೂಟೇ
ಡ. ಬಿ.ಎಲ್.ರೈಸ್ ●

○●○●○●○●○●○●○●○

19) 'ಮುಳ್ಳಯ್ಯನಗಿರಿ ಬೆಟ್ಟ'ವು ಕರ್ನಾಟಕದ ಅತ್ಯಂತ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪರ್ವತದ ಎತ್ತರ ಎಷ್ಟು?

ಅ. 6307 ಅಡಿಗಳು
ಬ. 6312 ಅಡಿಗಳು
ಕ. 6317 ಅಡಿಗಳು
ಡ. 6330 ಅಡಿಗಳು ●

○●○●○●○●○●○●○●○

20) ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?

ಅ. ಬೆಂಗಳೂರು ವಿ.ವಿ
ಬ. ಕುವೆಂಪು ವಿ.ವಿ
ಕ. ಕರ್ನಾಟಕ ವಿ.ವಿ
ಡ. ಮೈಸೂರು ವಿ.ವಿ ●

○●○●○●○●○●○●○●○

21. ಮೈಸೂರು ಅರಸರು ಶೇ. 100% ಶುದ್ದ ರೇಷ್ಮೆ ಹಾಗೂ ಶುದ್ದ ಚಿನ್ನದ ಜರಿ ಒಳಗೊಂಡಿರುವ ರೇಷ್ಮೆ ಸೀರೆ ತಯಾರಿಸುವ ಗಿರಣಿಗಳನ್ನು ಸ್ಥಾಪಿಸಿದ್ದು ಯಾವಾಗ?

ಅ. 1912 ●
ಬ. 1915
ಕ. 1918
ಡ. 1921

○●○●○●○●○●○●○●○

22) ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಗಂಧದ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದು ಯಾವಾಗ?

ಅ. 1906
ಬ. 1910
ಕ. 1916 ●
ಡ. 1920

○●○●○●○●○●○●○●○

23) 'ಭಾರತ ರತ್ನ ಪ್ರಶಸ್ತಿ'ಯು ಭಾರತದ ನಾಗರೀಕರಿಗೆ ನೀಡಬಹುದಾದ ಅತ್ಯುನ್ನತ ಪ್ರಶಸ್ತಿ. ಎಷ್ಟು ಜನ ಕನ್ನಡಿಗರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ?

ಅ. 2 ಜನ
ಬ. 3 ಜನ ●
ಕ. 4 ಜನ
ಡ. 5 ಜನ

○●○●○●○●○

24) 14ನೇ ಶತಮಾನದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ 'ಬಿದ್ರಿ ಕಲೆ'ಯು ದೇಶ-ವಿದೇಶದಲ್ಲಿ ಬಹಳ ಹೆಸರುವಾಸಿಯಾಗಿದೆ. ಇಂತಹ ಬಿದ್ರಿ ಕಲೆಯ ಉಡುಗೊರೆಯನ್ನು ಯಾವ ಆಟದಲ್ಲಿ ಗಣ್ಯರಿಗೆ ನೀಡಲಾಗುತ್ತದೆ?

ಅ.ಒಲಂಪಿಕ್ ಗೇಮ್ಸ್
ಬ. ವಿಂಬಲ್ಡನ್ ಗೇಮ್ಸ್
ಕ. ಕಾಮನ್ವೆಲ್ತ್ ಗೇಮ್ಸ್ ●
ಡ. ಏಶಿಯನ್ ಗೇಮ್ಸ್

○●○●○●○●○●○●○●○

25)ಡಾ.ಜಿ.ಎಸ್.ಶಿವರುದ್ರಪ್ಪನವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿದ್ದು ಯಾವಾಗ?

ಅ. 01 ನವೆಂಬರ್ 2003
ಬ. 01 ನವೆಂಬರ್ 2004
ಕ. 01 ನವೆಂಬರ್ 2005
ಡ. 01 ನವೆಂಬರ್ 2006 ●

○●○●○●○●○●○●○●○

26) ಡಾ.ರಾಜ್ ಕುಮಾರ್ ಅವರಿಗೆ ಎಷ್ಟು ಬಾರಿ 'ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ' ಲಭಿಸಿದೆ?

ಅ. 8
ಬ. 9
ಕ. 10 ●
ಡ. 11

○●○●○●○●○●○●○●○

27)ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆಕಂಡ ಚಲನಚಿತ್ರ ಯಾವುದು?

ಅ. ಭಕ್ತದೃವ
ಬ. ಸದಾರಮೆ
ಕ. ಸತಿ ಸುಲೋಚನ ●
ಡ. ಸಂಸಾರ ನೌಕೆ.

○●○●○●○●○●○●○●○

28)'ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು......' ಈ ಸುಮಧುರ ಗೀತೆ ಯಾವ ಚಿತ್ರದ್ದು?

ಅ. ವೀರಕೇಸರಿ
ಬ. ರಣಧೀರ ಕಂಠೀರವ
ಕ. ಕಠಾರಿ ವೀರ
ಡ. ವಿಜಯನಗರದ ವೀರಪುತ್ರ ●

○●○●○●○●○●○●○●○

29) 'ಹಚ್ಚೇವು ಕನ್ನಡದ ದೀಪ' ಈ ಸುಮಧುರ ಭಾವಗೀತೆಯನ್ನು ರಚಿಸಿದವರು ಯಾರು?

ಅ. ಕುವೆಂಪು
ಬ. ಕೆ.ಎಸ್.ನಿಸಾರ್ ಅಹಮದ್
ಕ. ಡಿ.ಎಸ್.ಕರ್ಕಿ ●
ಡ. ಜಿ.ಎಸ್.ಶಿವರುದ್ರಪ್ಪ

○●○●○●○●○●○●○●○
Posted by :
Dayanand.m.donagapure
At post :Gorta (B)

ಶನಿವಾರ, ಡಿಸೆಂಬರ್ 27, 2014

ಸಾಮಾನ್ಯ ಜ್ಞಾನ - ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ - ಪ್ರಶ್ನೋತ್ತರಗಳು

ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
IOA: ಭಾರತ ಒಲಂಪಿಕ್ ಸಂಸ್ಥೆ .
ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
BSNL:ಭಾರತ ಸಂಚಾರ್ ನಿಗಮ ನಿಯಮಿತ .
MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು.
Posted by:
Dayanand.m.donagapure
Gorta(B)

@ಭಾರತದಲ್ಲಿ_ಬ್ಯಾಂಕಿಂಗ್ ವ್ಯವಸ್ಥೆ@‬

‎ ‎ಭಾರತದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ‬

ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ.

• ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.

• ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.

• ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.

• HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.

• ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.

• BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ
ಬ್ಯಾಂಕ್.

• HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.

• CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.

• ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.

• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.

• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.

• ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.

• ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.

‪#‎ಕರ್ನಾಟಕದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ‬

• ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.

• ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.

• ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.

‪#‎ರಾಷ್ಟ್ರೀಕೃತಗೊಂಡ_ಕರ್ನಾಟಕದ_ಬ್ಯಾಂಕುಗಳು‬

1. ಕೆನರಾ ಬ್ಯಾಂಕ್

2. ಕಾರ್ಪೋರೇಷನ್ ಬ್ಯಾಂಕ್.

3. ಸಿಂಡಿಕೇಟ ಬ್ಯಾಂಕ್.

4. ವಿಜಯಾ ಬ್ಯಾಂಕ್.

5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್.

ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ.

• ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.

• ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.

• ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.

• HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.

• ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.

• BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ
ಬ್ಯಾಂಕ್.

• HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.

• CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.

• ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.

• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.

• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.

• ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.

• ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.

‪#‎ಕರ್ನಾಟಕದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ‬

• ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.

• ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.

• ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.

‪#‎ರಾಷ್ಟ್ರೀಕೃತಗೊಂಡ_ಕರ್ನಾಟಕದ_ಬ್ಯಾಂಕುಗಳು‬

1. ಕೆನರಾ ಬ್ಯಾಂಕ್

2. ಕಾರ್ಪೋರೇಷನ್ ಬ್ಯಾಂಕ್.

3. ಸಿಂಡಿಕೇಟ ಬ್ಯಾಂಕ್.

4. ವಿಜಯಾ ಬ್ಯಾಂಕ್.

5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್.
Posted by:
Dayanand.m.donagapure
Gorta(B)

ಮಂಗಳ ಗ್ರಹದ ಮೇಲೆ ಭಾರತದ ಗಗನನೌಕೆ ಹಾರಾಡಿದ ಸಂಭ್ರಮ ಹಸಿರಾಗಿರುವಾಗಲೇ ಅಮೆರಿಕ ಸಂಯುಕ್ತ ಸಂಸ್ಥಾನದ ನಾಸಾ ಸಂಸ್ಥೆಯು ಶುಕ್ರದೆಸೆಯನ್ನು ಕುರಿತು ಆಲೋಚನೆ ಮಾಡಲು ಪ್ರಾರಂಭಿಸಿದೆ.

ಆಕಾಶದಲ್ಲಿ ಅತ್ಯಂತ
ಪ್ರಖರವಾಗಿ ಹೊಳೆಯುವ ಶುಕ್ರ
ಗ್ರಹವನ್ನು ನಕ್ಷತ್ರವೆಂದು ತಿಳಿದ ಜನ, ಅದಕ್ಕೆ ಬೆಳಗಿನ
ತಾರೆ ಎಂದು ನಾಮಕರಣ ಮಾಡಿದರು. ರೋಮ್ ನಾಗರಿಕತೆಯಲ್ಲಿ
ಮಂಗಳ ಗ್ರಹವನ್ನು (ಮಾರ್ಸ್) ಯುದ್ಧದ ದೇವತೆ
ಎಂದೂ, ಶುಕ್ರ ಗ್ರಹವನ್ನು (ವೀನಸ್) ಪ್ರೇಮದ
ದೇವತೆ ಎಂದೂ ನಂಬಲಾಗುತ್ತಿತ್ತು.
ಮಂಗಳಗ್ರಹದಿಂದ ಭೂಮಿಗೆ ಬಂದ
ಜೀವಿಗಳು ಮಾನವನ ಮೇಲೆ ಯುದ್ಧ ಘೋಷಿಸುವ ಕಲ್ಪನೆ
ಅನೇಕ ವೈಜ್ಞಾನಿಕ ಕತೆಗಳಲ್ಲಿ ಸಿಗುತ್ತದೆ. ಹಿಂಸೆಯಿಂದ
ಬೇಸತ್ತುಹೋದ ಜಗತ್ತು, ಶುಕ್ರನ ಪ್ರೇಮದ ಬೆಳಕಿನ ಕಡೆಗೆ
ವಾಲುವುದು ಸಹಜವಾಗಿಯೇ ಇದೆ!
ಮಂಗಳ ಗ್ರಹದ ಮೇಲೆ ಹಿಂದೊಮ್ಮೆ
ಜೀವಸಂಕುಲ ಬದುಕಿರಬಹುದು ಎಂಬ ಅನುಮಾನ
ವಿಜ್ಞಾನಿಗಳಿಗಿದೆ. ಗುರು ಮತ್ತು ಶನಿ ಗ್ರಹಗಳನ್ನು ಸುತ್ತುವ
ಯೂರೋಪಾ ಮತ್ತು ಎನ್ಸಿಲೇಡಸ್ ಎಂಬ ಚಂದ್ರಕಾಯಗಳ
ಮೇಲೂ ಜೀವಜಂತುಗಳಿಗೆ ಬೇಕಾದ ನೀರು, ಗಾಳಿ,
ಮಣ್ಣು ಇದೆ. ಇವುಗಳಲ್ಲಿ ಅತ್ಯಂತ ಹತ್ತಿರದ
ಮಂಗಳ ಗ್ರಹವನ್ನು ಸುತ್ತುಹಾಕಿ, ಅದನ್ನು ಅಭ್ಯಾಸ
ಮಾಡುವ ಕೆಲಸವನ್ನು 1960ರ
ದಶಕದಲ್ಲೇ ರಷ್ಯಾ ಪ್ರಾರಂಭಿಸಿತು. ನಾಸಾ ಸಂಸ್ಥೆ
ಮಂಗಳ ಗ್ರಹಕ್ಕೆ ಕ್ಯೂರಿಯಾಸಿಟಿ ಎಂಬ ಚಲಿಸುವ
ರೋಬೊ ಕಳಿಸಿ, ಅಲ್ಲಿನ ನೆಲ, ಹವಾಮಾನ
ಮೊದಲಾದ ವಿಷಯಗಳನ್ನು ಸಂಗ್ರಹಿಸುತ್ತಿದೆ.
ಜೀವಸ್ಫುರಣಕ್ಕೆ ಬೇಕಾದ ಫಾಸ್ಫೇಟ್
ರಸಾಯನವು ಭೂಮಿಯ ಮೇಲೆ ಶಿಲೆಯ ರೂಪದಲ್ಲಿ
ಇದ್ದರೂ ಜೀವಜಂತುಗಳು ಹೇಗೆ
ಹುಟ್ಟಿಕೊಂಡವು ಎಂಬ ಪ್ರಶ್ನೆ
ವಿಜ್ಞಾನಿಗಳನ್ನು ಕಾಡಿದಾಗ ಅವರು ಉತ್ತರಕ್ಕಾಗಿ ಆಕಾಶದ ಕಡೆ
ನೋಡುತ್ತಾರೆ. ಮಂಗಳ ಗ್ರಹದಿಂದ ಬೇರಾದ
ಒಂದು ಚೂರು ಭೂಮಿಗೆ ಬಂದು ಬಿದ್ದಾಗ ಅಲ್ಲಿರುವ
ದ್ರವರೂಪದ ಫಾಸ್ಫೇಟ್, ಜೀವದ ಉಗಮಕ್ಕೆ
ಕಾರಣವಾಗಿರಬಹುದು ಎಂಬುದು ಸ್ಟೀವನ್ ಬೆನ್ನರ್
ಎಂಬ ಅಮೆರಿಕನ್ ವಿಜ್ಞಾನಿಯ ಊಹೆ (ಆಗಸ್ಟ್ 2013).
ಮಂಗಳ ಗ್ರಹದ ಮೇಲೆ ಒಂದು ಕಾಲದಲ್ಲಿ
ಜೀವಜಂತುಗಳು ಇದ್ದಿದ್ದೇ ಆದರೆ
ಅವು ನಶಿಸಲು ಏನು ಕಾರಣ? ಮಂಜಿನಗಡ್ಡೆಯ ರೂಪದಲ್ಲಿ
ನೀರು ಪತ್ತೆಯಾಗಿರುವ ಕಾರಣ ಅಲ್ಲಿ ಮತ್ತೆ
ಸಸ್ಯಗಳು ಬೆಳೆಯಬಲ್ಲವೇ?
ಪ್ರಾಣಿಗಳು ಜೀವಿಸಬಲ್ಲವೇ? ಮುಂದೆ
ಎಂದಾದರೂ ಅದು ಮನುಷ್ಯರು ಬದುಕಲು ಯೋಗ್ಯವಾದ
ಸ್ಥಳವಾಗಬಲ್ಲದೇ?ಮಾನವ ಮಂಗಳ
ಗ್ರಹವನ್ನು ಆಕ್ರಮಿಸಿಕೊಂಡು ಅದನ್ನು ತನ್ನ
ಮಂಗಳಗೃಹ ಮಾಡಿಕೊಳ್ಳಬಲ್ಲನೇ?
ಕೊಲಂಬಸ್ ಹೊಸ
ಜಗತ್ತನ್ನು ಹುಡುಕಿಕೊಂಡು ಹೊರಟಾಗ
ಅವನ ಮನಸ್ಸಿನಲ್ಲಿ ಇಂಥದ್ದೇ ಅನೇಕ
ಪ್ರಶ್ನೆಗಳು ಮೂಡಿರಬಹುದು.
ಜನಸಂಖ್ಯೆ ಹೆಚ್ಚುತ್ತಾ ಭೂಮಿಯ ಮೇಲಿರುವ ಕುಡಿಯುವ
ನೀರು, ಪಳೆಯುಳಿಕೆ ರೂಪದ ಇಂಧನ
ತೀರುತ್ತಾ ಬಂದಂತೆ ಇನ್ನಿತರ ಗ್ರಹಗಳ ಮೇಲೆ
ಮಾನವ ಕಣ್ಣು ಹಾಕುತ್ತಿದ್ದಾನೆ. ಕೆಲವರು ಇದನ್ನು ಲಾಭಕ್ಕಾಗಿ
ನಡೆಸುವ ವ್ಯಾಪಾರದಂತೆ ಕೂಡ ಭಾವಿಸುತ್ತಿದ್ದಾರೆ.
ಉದಾಹರಣೆಗೆ, ಮಾರ್ಸ್ ಒನ್ ಎಂಬ ಡಚ್ ಸಂಸ್ಥೆಯ
ವೆಬ್ತಾಣವನ್ನು ಗಮನಿಸಬಹುದು. ಗಗನನೌಕೆಗಳಲ್ಲಿ
ಕುಳಿತು ಬಾಹ್ಯಾಕಾಶದಲ್ಲಿ ಸಂಚರಿಸುವ ಅನುಭವಕ್ಕಾಗಿ ಜನ
ಹಣ ಸುರಿಯಲು ತಯಾರಾಗಿದ್ದಾರೆ. ಮಂಗಳ ಗ್ರಹದ ಮೇಲೆ
ಮನೆ
ಮಾಡಿಕೊಳ್ಳಬೇಕೇ ಎಂದು ಜನರನ್ನು ಹುರಿದುಂಬಿಸುತ್ತಿರುವ
ಕಂಪನಿಗಳು ಮಾರ್ಸ್ ಮಾರಲು ಸಿದ್ಧವಾಗಿವೆ! ಬಯ್ ಮಾರ್ಸ್
ಎಂಬ ಕಂಪನಿಯ ವೆಬ್ತಾಣ ಗಮನಿಸಿ, ಎರಡು ಸಾವಿರ
ರೂಪಾಯಿಗಳ ಬೆಲೆಗೆ ಮಂಗಳದ ಒಂದೆಕರೆ
ಜಮೀನಿನನ್ನು ನಿಮ್ಮದಾಗಿಸಿಕೊಳ್ಳಬಹುದು!
ಮದುವೆ ಉಡುಗೊರೆಯಾಗಿ ಗಾಜಿನ ಭರಣಿ
ಕೊಡುವ ಬದಲು ಒಂದೆಕರೆ
ಮಂಗಳವನ್ನೋ ಅಥವಾ ಚಂದ್ರನನ್ನೋ ಗಿಫ್ಟ್ ಆಗಿ
ಕೊಟ್ಟರೆ ವಧೂವರರ
ಮೊಮ್ಮಕ್ಕಳು ಸಂತೋಷವಾಗಿ ಜೀವನ
ಮಾಡಬಹುದು! ಮಂಗಳದ್ರವ್ಯ ಎಂಬುದಕ್ಕೆ ಈಗ
ಹೊಸ ಅರ್ಥವೇ ಬಂದಿದೆ!
ಮಾರ್ಸ್ ಒನ್ ಸಂಸ್ಥೆಯು ಇನ್ನು ಕೇವಲ
ಎಂಟು ವರ್ಷಗಳಲ್ಲಿ ಮಂಗಳ ಗ್ರಹಕ್ಕೆ
ಎರಡು ಗಂಡು ಮತ್ತು ಎರಡು ಹೆಣ್ಣುಗಳ
ತಂಡವನ್ನು ಕಳಿಸಿ, ಅವರ ಪ್ರಯಾಣವನ್ನು ಟಿ.ವಿ.ಯಲ್ಲಿ
ರಿಯಾಲಿಟಿ ಶೋ ಪ್ರದರ್ಶನವನ್ನಾಗಿ ಬಿತ್ತರಿಸುವ ಯೋಜನೆ
ಹಾಕಿಕೊಂಡಿದೆ. ಅವರದ್ದು ಒಮ್ಮುಖ ಪ್ರಯಾಣ.
ಅವರ ಗುರಿ ಮಂಗಳ ಗ್ರಹದ ಮೇಲೆ ವಿಜಯ ಸಾಧಿಸುವುದು.
ಸುಮಾರು ನಾಲ್ಕೂವರೆ ಬಿಲಿಯನ್ ಡಾಲರ್ ವೆಚ್ಚದ ಈ
ಯೋಜನೆಯನ್ನು ಘೋಷಿಸಿದಾಗ ಎರಡು ಲಕ್ಷ ಜನ ಅರ್ಜಿ
ಕಳಿಸಿದರಂತೆ. ಈಗ ಏಳುನೂರು ಜನ
ಉಳಿದುಕೊಂಡಿದ್ದಾರೆ. ಅವರಲ್ಲಿ ಆಯ್ಕೆ ಮಾಡಿ
ಹಲವು ತಂಡಗಳನ್ನು ಕಟ್ಟಿ ವ್ಯೋಮಯಾನಕ್ಕೆ ತರಬೇತಿ
ಪ್ರಾರಂಭಿಸಲಾಗಿದೆ. ಈ
ಯೋಜನೆಯನ್ನು ಪರಿಶೀಲಿಸಿದ ಎಮ್ಐಟಿ ಎಂಬ
ಅಮೆರಿಕನ್ ವಿಶ್ವವಿದ್ಯಾಲಯ,
ವ್ಯೋಮಯಾತ್ರಿಕರು ಒಂದೆರಡು ತಿಂಗಳಲ್ಲೇ ಸಾವನ್ನಪ್ಪುತ್ತಾರೆ
ಎಂದು ಎಚ್ಚರಿಕೆ ನೀಡಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ನಾಸಾ, ತನ್ನ
ದೃಷ್ಟಿಯನ್ನು ಮಂಗಳನ ಕಡೆಯಿಂದ ಶುಕ್ರ ಗ್ರಹದ
ಕಡೆಗೆ ತಿರುಗಿಸಿದ್ದು ಕುತೂಹಲ ಮೂಡಿಸುತ್ತಿದೆ. ವೀನಸ್,
ಭೂಮಿಗೆ ಅತ್ಯಂತ ಹತ್ತಿರದ ಗ್ರಹ. ನ್ಯಾಯವಾಗಿ
ಮಾನವನ ಕಣ್ಣು ಚಂದ್ರನ ನಂತರ ಶುಕ್ರನ ಕಡೆಗೆ
ಬೀಳಬೇಕಾಗಿತ್ತು. ಆದರೆ ಶುಕ್ರನ ಹವಾಮಾನ
ನರಕವನ್ನು ಹೋಲುತ್ತದೆ! ಐನೂರು ಡಿಗ್ರಿ ಸೆಲ್ಷಿಯಸ್ ತಾಪಮಾನ.
ಸಮುದ್ರದಲ್ಲಿ ಸಾವಿರ ಅಡಿಯಷ್ಟು ಆಳದಲ್ಲಿ
ಕಾಣಬರುವಷ್ಟು ಒತ್ತಡ. ಆದರೆ ಶುಕ್ರ ಗ್ರಹದಿಂದ
ಐವತ್ತು ಕಿಲೋಮೀಟರ್ ಮೇಲಿರುವ ಮೋಡಗಳಲ್ಲಿ 75
ಡಿಗ್ರಿ ಸೆಲ್ಷಿಯಸ್ ತಾಪಮಾನವಿದ್ದು, ಸಮುದ್ರ ತಟದಲ್ಲಿ
ಇರುವಷ್ಟು ಒತ್ತಡವಿದೆ. ಹೀಗಾಗಿ
ನಾಸಾ ವಿಜ್ಞಾನಿಗಳು ಶುಕ್ರನ ಮೋಡಗಳಲ್ಲಿ ಮನೆ ಕಟ್ಟುವ ಯೋಚನೆ
ಮಾಡುತ್ತಿದ್ದಾರೆ! ಬಾಹ್ಯಾಕಾಶದಲ್ಲಿ ಸಮಯ
ಕಳೆದು ಯಾವುದಾದರೂ ಗ್ರಹ
ನೋಡಿಕೊಂಡು ಬರಬೇಕು ಎನ್ನುವ ಖಯಾಲಿ ಇರುವ
ಮಂದಿಗೆ ಮಂಗಳನಿಗಿಂತ ಶುಕ್ರನ ದರ್ಶನ ವಾಸಿ
ಎಂಬುದು ವಿಜ್ಞಾನಿಗಳ ಅಭಿಮತ.
ವಿಜ್ಞಾನಿಗಳು ಶುಕ್ರನ ಕಡೆ ನೋಡಲು ಇನ್ನೂ ಕೆಲವು ಕಾರಣಗಳಿವೆ.
ನವಗ್ರಹಗಳು ಸದಾ ಚಲಿಸುತ್ತಲೇ ಇರುವುದರಿಂದ
ಯಾವುದೇ ಎರಡು ಗ್ರಹಗಳ ನಡುವಿನ ದೂರ ಹಿಗ್ಗುವುದೂ,
ಕುಗ್ಗುವುದೂ ನಡೆಯುತ್ತಲೇ ಇರುತ್ತದೆ. ಶುಕ್ರ
ಗ್ರಹಕ್ಕೂ ಭೂಮಿಗೂ ಕನಿಷ್ಠ ಅಂತರ 38 ಮಿಲಿಯನ್
ಕಿಲೋಮೀಟರ್, ಗರಿಷ್ಠ ಅಂತರ 261 ಮಿಲಿಯನ್
ಕಿಲೋಮೀಟರ್. ಇದಕ್ಕೆ ಹೋಲಿಸಿದರೆ ಮಂಗಳ
ಗ್ರಹಕ್ಕೂ ಭೂಮಿಗೂ ಇರುವ ಕನಿಷ್ಠ ಅಂತರ 56 ಮಿಲಿಯನ್
ಕಿಲೋಮೀಟರ್, ಗರಿಷ್ಠ ಅಂತರ 401 ಮಿಲಿಯನ್
ಕಿಲೋಮೀಟರ್. ಅತ್ಯಂತ ವೇಗದಲ್ಲಿ ಸಾಗುವ
ಗಗನನೌಕೆ ಗಂಟೆಗೆ 36,000 ಮೈಲಿ (ಅಥವಾ 58,000
ಕಿಲೋಮೀಟರ್) ದೂರ ಸಾಗಬಲ್ಲದು; ಹೀಗಾಗಿ
ಮಂಗಳವು ಅತ್ಯಂತ
ಹತ್ತಿರದಲ್ಲಿದ್ದಾಗಲೂ ಭೂಮಿಯಿಂದ ಅಲ್ಲಿಗೆ ಹೋಗಲು 40
ದಿನಗಳು ಬೇಕು. ಇನ್ನು ಅತ್ಯಂತ ದೂರದಲ್ಲಿದ್ದಾಗ 289
ದಿನಗಳು ಬೇಕು. ಇದಕ್ಕೆ ಹೋಲಿಸಿದರೆ ಕನಿಷ್ಠ ದೂರದಲ್ಲಿದ್ದಾಗ
ಶುಕ್ರ ಗ್ರಹವನ್ನು 27 ದಿನಗಳಲ್ಲಿ ತಲುಪಬಹುದು. ಗರಿಷ್ಠ
ದೂರದಲ್ಲಿದ್ದಾಗ ಪ್ರಯಾಣವನ್ನು 188 ದಿನಗಳಲ್ಲಿ
ಮುಗಿಸಬಹುದು. ಮಂಗಳ ಗ್ರಹದ ಮೇಲೆ ಸೂರ್ಯನಿಂದ
ತಲುಪುವ ವಿಕಿರಣವು ಭೂಮಿಗೆ ಹೋಲಿಸಿದರೆ
ನಲವತ್ತು ಪಟ್ಟು ಹೆಚ್ಚು. ಹೀಗಾಗಿ ಮಂಗಳ
ಗ್ರಹದ ಮೇಲೆ ನೆಲೆಯನ್ನು ನೆಲದ ಕೆಳಗೆ ನಿರ್ಮಿಸಬೇಕಾಗುತ್ತದೆ.
ಭೂಮಿಗೆ ಹೋಲಿಸಿದರೆ ಶುಕ್ರ ಗ್ರಹದಲ್ಲಿ ವಿಕಿರಣದ ಮಟ್ಟ
ಅಷ್ಟೇನೂ ಹೆಚ್ಚಿಲ್ಲ. ಶುಕ್ರನ ಮೋಡದಲ್ಲಿ ಹೆಚ್ಚೂ ಕಡಿಮೆ
ಭೂಮಿಯ ಮೇಲಿರುವ ಸ್ಥಿತಿಯೇ ಇದೆ
ಎಂದು ನಾಸಾ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.
ಶುಕ್ರ ಗ್ರಹ ಪ್ರವಾಸಕ್ಕೆ ಸುಮಾರು 440 ದಿನಗಳು ಬೇಕು.
ಹೋಗಲು 110 ದಿನಗಳು, ತಂಗಲು 30
ದಿನಗಳು ಮತ್ತು ವಾಪಸಾಗಲು 300 ದಿನಗಳು. ಮಂಗಳ ಗ್ರಹ
ಪ್ರವಾಸಕ್ಕೆ 500 ದಿನಗಳಿಗಿಂತ ಹೆಚ್ಚು ಕಾಲ ಬೇಕು. ಬೇರೆ
ಗ್ರಹಕ್ಕೆ ಹೋಗಿ ತಲುಪಿದಾಗ ಏನಾದರೂ ಪ್ರಮಾದವಾದರೆ ತಕ್ಷಣ
ಹೊರಟು ಬರುವಂತಿಲ್ಲ; ಭೂಮಿಗೆ
ವಾಪಸಾಗಲು ಪ್ರಶಸ್ತವಾದ ಕಾಲಕ್ಕಾಗಿ ಕಾಯಬೇಕು. ಶುಕ್ರ ಗ್ರಹದ
ಮೇಲೆ ವಿಜಯ ಸಾಧಿಸಲು ನಾಸಾ ಸಂಸ್ಥೆಯು ಹ್ಯಾವಾಕ್
ಎಂಬ ಯೋಜನೆ ಹಮ್ಮಿಕೊಂಡಿದೆ. ಇದರ
ಮೊದಲ ಘಟ್ಟದಲ್ಲಿ
ಒಂದು ರೋಬೊ ಶುಕ್ರ ಗ್ರಹದ ಮೋಡಗಳಲ್ಲಿ ಚಲಿಸಿ
ಸಮೀಕ್ಷೆ ನಡೆಸುತ್ತದೆ. ನಂತರ
ಮನುಷ್ಯರನ್ನು ಹೊತ್ತ ಗಗನನೌಕೆಯು ಮೋಡಗಳಲ್ಲಿ
30 ದಿನ ಸುತ್ತುತ್ತದೆ. ಮೂರನೇ ಘಟ್ಟದಲ್ಲಿ
ಗಗನಗಾಮಿಗಳು ಶುಕ್ರನ ಮೋಡಗಳಲ್ಲಿ ನಿರ್ಮಿಸಿದ ನೆಲೆಯಲ್ಲಿ
30 ದಿನ ವಾಸ ಮಾಡುತ್ತಾರೆ. ಇದು ಸಫಲವಾದ ನಂತರ
ಗಗನಗಾಮಿಗಳು ಒಂದು ವರ್ಷ ಅದೇ ನೆಲೆಯಲ್ಲಿ ವಾಸ
ಮಾಡುತ್ತಾರೆ. ಕೊನೆಯ ಘಟ್ಟದಲ್ಲಿ ಶುಕ್ರ ಗ್ರಹದ
ಮೇಘಾವರಣದಲ್ಲಿ ಮನುಷ್ಯನಿಗೆ
ಕಾಯಂ ನೆಲೆಯನ್ನು ನಿರ್ಮಿಸಲಾಗುತ್ತದೆ. ಮೋಡಗಳಲ್ಲಿ
ಗಗನನೌಕೆಯನ್ನು ಹೇಗೆ ಇಳಿಸುತ್ತಾರೆ ಎಂಬ ಪ್ರಶ್ನೆ ನಿಮ್ಮ
ಮನಸ್ಸಿನಲ್ಲಿ ಮೂಡಿರಬಹುದು. ಶುಕ್ರ ಗ್ರಹ
ಸಮೀಪಿಸಿದಾಗ ಗಗನನೌಕೆಯ ವೇಗವನ್ನು ಕಡಿಮೆ ಮಾಡಿ,
ಅದಕ್ಕೆ ಕಟ್ಟಿದ ಪ್ಯಾರಾಚೂಟ್ ಹಿಗ್ಗಿಸಲಾಗುತ್ತದೆ. ಇದರಿಂದ
ನೌಕೆಯ ವೇಗ ಕಡಿಮೆಯಾಗುತ್ತಾ ಹೋಗಿ, ಕೊನೆಗೆ
ಅದು ಮೋಡಗಳಲ್ಲಿ ತೇಲುವ ಸ್ಥಿತಿಯನ್ನು ತಲುಪುತ್ತದೆ.
ಅಂತೂ, 'ತಾರೆಗಳ ಮೀಟುವೆವು, ಚಂದಿರನ
ದಾಟುವೆವು' ಎಂಬ ಕೆ ಎಸ್ ನರಸಿಂಹಸ್ವಾಮಿ ಅವರ
ಕಾವ್ಯಕಲ್ಪನೆ ಮುಂದಿನ ದಶಕದಲ್ಲಿ
ನಿಜವೇ ಆಗಿಬಿಡಬಹುದು!
Posted by:
Dayanand.m.donagapure
Gorta (B)

ಬುಧವಾರ, ಡಿಸೆಂಬರ್ 24, 2014

1.ಕರ್ನಾಟಕ ಇತಿಹಾಸ

ಕರ್ನಾಟಕ ಇತಿಹಾಸ     ಕರ್ನಾಟಕದ ಇತಿಹಾಸದ ದಾಖಲೆ ಸುಮಾರು ಎರಡು ಸಾವಿರ ವರ್ಷಕ್ಕೂ ಹೆಚ್ಚಿನದ್ದಾಗಿದೆ. ಹಲವಾರು ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕದಲ್ಲಿ ಆಳಿ ಇದರ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಇತರೆ ಭಾಗಗಳಲ್ಲೂ ಕಂಡುಬರುತ್ತದೆ, ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒರಿಸ್ಸಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿಯ ಚಾಲುಕ್ಯರು, ದೇವಗಿರಿಯ ಯಾದವ ವಂಶದವರು ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದವರು ಎಂದು ಕಂಡುಬರುತ್ತದೆ.

ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳ ಪೈಕಿ ಒಂದಾಗಿದೆ. 1973 ಕ್ಕೂ ಮೊದಲು ಕರ್ನಾಟಕವನ್ನು  “ಮೈಸೂರು ರಾಜ್ಯ” ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದಾಗಿದೆ (1950 ರಲ್ಲಿ). 1956 ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಏಕೀಕರಣಗೊಳಿಸಲಾಯಿಯತು. ಕರ್ನಾಟಕ ಎಂಬುದು “ಕರು+ನಾಡು” ಎಂಬುದರಿಂದ ರೂಪುಗೊಂಡಿದೆ. ಕರುನಾಡು ಎಂದರೆ “ಎತ್ತರದ ಪ್ರದೇಶ” ಎಂದು ಅರ್ಥ. ಕರ್ನಾಟಕ ರಾಜ್ಯವು ಸಮುದ್ರ ಮಟ್ಟದಿಂದ ಸರಾಸರಿ ಎತ್ತರ 1500 ಅಡಿ ಇದ್ದು,  ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದಾಗಿದೆ.

ಕರ್ನಾಟಕ ರಾಜ್ಯಕ್ಕೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ವಾಯವ್ಯದಲ್ಲಿ ಗೋವ, ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರ ಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ರಾಜ್ಯವು ಸುತ್ತುವರಿಯಲ್ಪಟ್ಟಿದೆ. 2011 ರ ಜನಗಣತಿಯಂತೆ, 6 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಹತ್ತು ಭಾರತೀಯ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ 60 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರವಾಗಿದೆ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಲ್ಲಿ ಆಶ್ರಯ ಪಡೆದ ಅನೇಕ ತತ್ವಜ್ಞಾನಿಗಳಿಂದ ಮತ್ತು ಕವಿಗಳಿಂದ ಆರಂಭಿಸಲ್ಪಟ್ಟ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯ ಚಳವಳಿಗಳು ಇಂದಿಗೂ ಪ್ರಸ್ತುತವಾಗಿವೆ. ಕನ್ನಡ ಭಾಷೆ ಭಾರತದಲ್ಲೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ . ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.

ಚರಿತ್ರೆ

ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕೃತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವುದಾಗಿ ತಿಳಿದು ಬಂದಿದೆ ಆದ್ದರಿಂದ ವಿದ್ವಾಂಸರು ಕ್ರಿ.ಪೂ 3000 ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ.ಪೂ.300 ಕ್ಕಿಂತ ಮೊದಲು ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು, ನಂದ ಸಾಮ್ರಾಜ್ಯದ ಭಾಗವಾಗಿದ್ದಿತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮದ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗೂ ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು  ಗಂಗರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು.  ಹಲ್ಮಿಡಿ ಶಾಸನ ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ಈ ಸಾಮ್ರಾಜ್ಯಗಳ ನಂತರ ದಕ್ಷಿಣವನ್ನು ಬಹುಪಾಲು ಆಳಿದ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಇದು 12 ನೇ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು

ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಕರ್ನಾಟಕದಲ್ಲಿ ಹೊಯ್ಸಳರು ಪ್ರಬಲರಾಗಿದ್ದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯ ಸ್ಥಿತಿಯನ್ನು ತಲುಪಿದವು. ಇದು ಕನ್ನಡದ ವಿಶಿಷ್ಟ ಕಾವ್ಯ ಶೈಲಿಗಳ ಉಗಮಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇವಸ್ಥಾನಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡಿತ್ತು. 14 ನೇ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.
Posted by:
Dayanand.m.donagapure
Gorta(B)