ಈಶ್ವರನ ವರ
ಹಿಂದಿನ ಜನ್ಮದಲ್ಲಿ ದ್ರೌಪದಿಯು ಒಬ್ಬ
ತಪಸ್ವಿಯ ಮಗಳಾಗಿದ್ದಳು.
ಆಕೆಯು ಮದುವೆಯಾಗದೆ ಇದ್ದ ಕಾರಣದಿಂದ,
ಅಸಂತೋಷದಿಂದ ಕೂಡಿದ್ದಳು. ಇದರಿಂದ
ನಿರಾಶೆಗೊಂಡ
ಆಕೆಯು ಈಶ್ವರನನ್ನು ಮೆಚ್ಚಿಸುವ ಸಲುವಾಗಿ
ತಪಸ್ಸನ್ನು ಕೈಗೊಂಡಳು.
ಸುಮಾರು ವರ್ಷದ ತಪಸ್ಸಿನ ನಂತರ
ಆಕೆಯು ಪರಮೇಶ್ವರನನ್ನು ಮೆಚ್ಚಿಸಲು ಯಶಸ್
ಆಕೆಯ ಮುಂದೆ ಪ್ರತ್ಯಕ್ಷನಾದ
ಶಿವನು ವರವೇನು ಬೇಕೆಂದು ಕೇಳಿದನು.
ಆಗ ಆಕೆಯು ಐದು ಗುಣಗಳಿರುವ ಗಂಡ ತನಗೆ
ಬೇಕೆಂದು ಕೇಳಿದಳು.
ನಮಗೆಲ್ಲ ತಿಳಿದಿರುವಂತೆ ಮಹಾಭಾರತದಲ್ಲಿ
ದ್ರೌಪದಿಗೆ ಐದು ಜನ ಗಂಡಂದಿರು ಇರುತ್ತಾರೆ.
ಆದರೆ ಆಕೆ ಏಕೆ ಐದು ಜನ
ಗಂಡಂದಿರನ್ನು ಪಡೆದಳು ಎಂದು ನಿಮಗೆ
ಗೊತ್ತೇ? ತಿಳಿಯಲು ಮುಂದೆ ಓದಿ.
ಮಹಾಭಾರತದ ಕಥೆಯು ಕೌರವ
ಮತ್ತು ಪಾಂಡವರು ಎಂಬ ಮುಖ್ಯ ಪಾತ್ರಗಳ
ಸುತ್ತ ಸುತ್ತುತ್ತದೆ. ಈ
ಮಹಾಕಾವ್ಯವು ಮಹಾಭಾರತ ಯುದ್ಧದ
ಸುತ್ತ ಹರಡಿಕೊಳ್ಳುವ
ಹಲವಾರು ಘಟನೆಗಳನ್ನು ವಿವರಿಸುತ್ತ
ಸಾಗುತ್ತದೆ.
ಈ ಮಹಾಯುದ್ಧದಲ್ಲಿ ಹೋರಾಡಿದ ಪುರುಷ
ಪಾತ್ರಗಳು ಮತ್ತು ಅವರ ಶೌರ್ಯ,
ಸಾಹಸಗಳನ್ನು ಇದು ವಿವರಿಸುತ್ತ ಸಾಗುತ್ತದೆ.
ಅವರು ಉಳಿದರೆ ಅಥವಾ ಸತ್ತರೆ ಎಂಬುದು ಇದರ
ಕೊನೆಯ ಘಟ್ಟವಾಗಿದೆ. ಆದರೆ ಅದೇ ಸಮಯದಲ್ಲಿ
ಈ ಮಹಾಕಾವ್ಯವು ಈ ವಿನಾಶಕಾರಿ
ಮಹಾಯುದ್ಧಕ್ಕೆ ಕಾರಣವಾದ ಮಹಿಳೆಯ ಬಗ್ಗೆ
ಸಹ ಮಾತನಾಡುತ್ತದೆ. ಹೌದು,
ನಾವು ಮಾತನಾಡುತ್ತಿರುವುದು ಸಹ
ಅದೇ ಮಹಿಳೆಯ ಬಗ್ಗೆ, ಆಕೆಯೇ ದ್ರೌಪದಿ.
ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ
ಅಂತ್ಯವಾಗಿದ್ದು ಹೇಗೆ?
ದ್ರೌಪದಿ ಈ ಮಹಾಕಾವ್ಯದಲ್ಲಿ ಬರುವ ಅತ್ಯಂತ
ಪ್ರಧಾನ ಮತ್ತು ಅಷ್ಟೇ ಶಕ್ತಿಶಾಲಿಯಾದ
ಪಾತ್ರವಾಗಿದೆ. ಈಕೆಯು ಪಾಂಚಾಲ ದೇಶದ
ರಾಜಕುಮಾರಿ. ಪಂಚ ಪಾಂಡವರ ಪತ್ನಿ
ಮತ್ತು ಅಪರಿಮಿತ ಬುದ್ಧಿಶಕ್ತಿ ಮತ್ತು ತನ್ನ
ಐದು ಜನ ಪತಿಯರ ಕುರಿತು ಅದ್ಭುತವಾದ
ಪತಿವ್ರತಾ ಧರ್ಮವನ್ನು ಪಾಲಿಸುತ್ತಿದ್ದವಳು.
ದ್ರೌಪದಿದಿಯ ಕುರಿತಾದ
ಪ್ರತಿಯೊಂದು ಅಂಶವು ಕುತೂಹಲಕಾರಿಯಾಗಿರುತ್ತದೆ.
ಆಕೆಯ ಅದ್ಭುತವಾದ ಸೌಂದರ್ಯ, ಹಿರಿಮೆ,
ಪ್ರೀತಿಯೆಡೆಗೆ ಆಕೆಯ ಅರ್ಪಣಾ ಮನೋಭಾವ,
ಆಕೆಯು ಅನುಭವಿಸಿದ
ಅವಮಾನಗಳು ಮತ್ತು ಶ್ರೇಷ್ಠ ಪ್ರತಿಜ್ಞೆ ಹೀಗೆ
ಎಲ್ಲವು ನಮ್ಮನ್ನು ಮಂತ್ರ
ಮುಗ್ಧಗೊಳಿಸುತ್ತದೆ. ಬೆಚ್ಚಿಬೀಳಿಸುವ
ಸಂಗತಿ: ಗಾಂಧಾರಿಗೆ ನಿಜವಾಗಿಯೂ 101
ಮಕ್ಕಳು ಇದ್ದರೇ?
ಆದರೆ ಅದು ಹೇಗೆ ಆಕೆ ಅಣ್ಣ-
ತಮ್ಮಂದಿರಾದವರನ್ನೇ, ತನ್ನ ಪತಿಯರಾಗಿ
ಸ್ವೀಕರಿಸಿದಳು? ಇದು ನಮಗೆ ನಿಗೂಢವಾಗಿದೆ.
ಆದರೆ ಆ ರಹಸ್ಯವು ಬಯಲಾಗಿದೆ. ಈಕೆ ಐದು ಜನ
ಪತಿಯರನ್ನು ಪಡೆಯಲು ಮುಖ್ಯ ಕಾರಣ
ಹಿಂದಿನ ಜನ್ಮದಲ್ಲಿ ಆಕೆ ಪಡೆದಿದ್ದ ವರ. ಈ ವರದ
ಕಾರಣವಾಗಿಯೇ ಆಕೆ ಈ ಜನ್ಮದಲ್ಲಿ ಅಂದರೆ
ದ್ರೌಪದಿಯಾಗಿ ಜನಿಸಿದಾಗ ಐದು ಜನ
ಪತಿಯರನ್ನು ಪಡೆದಳು.
Posted by : Dayanand.M.Donagapure Gorta (B)
ಸ್ನೇಹಿತರೆ ನಾನು ಒಬ್ಬ ವಿದ್ಯಾರ್ಥಿಯಾಗಿದ್ದು,ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ದತೆಯಲ್ಲಿದ್ದೇನೆ. ಆ ನಿಟ್ಟಿನಲ್ಲಿ ನನಗೆ ತಿಳಿದಿರುವ ಹಾಗೂ ನಾನು ಪ್ರತಿದಿನ ಓದಿದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕ್ಕೊಳಲು ಬಯಸುತ್ತೇನೆ. ಆ ಭಾಗವಾಗಿ ನನ್ನದೊಂದು ಚಿಕ್ಕ ಪ್ರಯತ್ನ.
ಶನಿವಾರ, ಡಿಸೆಂಬರ್ 20, 2014
ದ್ರೌಪದಿ ಪಂಚ ಪಾಂಡವರನ್ನು ಪತಿಯಾಗಿ ಏಕೆ ಪಡೆದಳು?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ