ಮಂಗಳವಾರ, ಡಿಸೆಂಬರ್ 30, 2014

ಸಾಮಾನ್ಯ ಜ್ಞಾನ (31.12.2014)

1) ಕರ್ನಾಟಕ ರಾಜ್ಯ ಯಾವ ವರ್ಷ ಏಕೀಕರಣಗೊಂಡಿತು?

ಅ. ನವೆಂಬರ್ 01, 1953
ಬ. ನವೆಂಬರ್ 01, 1954
ಕ. ನವೆಂಬರ್ 01, 1955
ಡ. ನವೆಂಬರ್ 01, 1956 ●

○●○●○●○●○●○●○●○

2) 'ಕರ್ನಾಟಕ ಏಕೀಕರಣ ಚಳುವಳಿ'ಯನ್ನು ಮೊದಲು ಪ್ರಾರಂಭಿಸಿದವರು ಯಾರು?

ಅ. ಅಂದಾನಪ್ಪ ದೊಡ್ಡಮೇಟಿ
ಬ. ಆಲೂರು ವೆಂಕಟರಾವ್ ●
ಕ. ಅನ್ನದಾನಯ್ಯ ಪುರಾಣಿಕ
ಡ. ಹುಯಿಲಗೋಳ ನಾರಾಯಣರಾಯ

○●○●○●○●○●○●○●○

3) ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್'ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆತದ್ದು ಎಲ್ಲಿ?

ಅ. ಮೈಸೂರು
ಬ. ಬೆಳಗಾವಿ ●
ಕ. ಧಾರವಾಡ
ಡ. ಗುಲ್ಬರ್ಗ

○●○●○●○●○●○●○●○

4) ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡಿದ್ದು ಯಾವಾಗ?

ಅ. ನವೆಂಬರ್ 01, 1973 ●
ಬ. ನವೆಂಬರ್ 01, 1974
ಕ. ನವೆಂಬರ್ 01, 1975
ಡ. ನವೆಂಬರ್ 01, 1976

○●○●○●○●○●○●○●○

5) "ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದವರು ಯಾರು?

ಅ. ರಾ.ಹ.ದೇಶಪಾಂಡೆ
ಬ. ಆಲೂರು ವೆಂಕಟರಾವ್ ●
ಕ. ಸಿದ್ದಪ್ಪ ಕಂಬಳಿ
ಡ. ಹುಯಿಲಗೋಳ ನಾರಾಯಣರಾಯ

○●○●○●○●○●○●○●○

6) ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಹಾಡಿದ್ದು ಯಾವಾಗ?

ಅ. ನವೆಂಬರ್ 01, 1922
ಬ. ನವೆಂಬರ್ 25, 1922
ಕ. ಡಿಸೆಂಬರ್ 01, 1924
ಡ. ಡಿಸೆಂಬರ್ 25, 1924 ●

○●○●○●○●○●○●○●○

7) ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲು 'ಎಸ್.ನಿಜಲಿಂಗಪ್ಪ'ನವರ ನೇತೃತ್ವದಲ್ಲಿ ಎಲ್ಲಿ ಸಭೆ ಸೇರಲಾಗಿತ್ತು?

ಅ. ಹುಬ್ಬಳ್ಳಿ ●
ಬ. ಬೆಳಗಾವಿ
ಕ. ಬೆಂಗಳೂರು
ಡ. ಮೈಸೂರು

○●○●○●○●○●○●○●○

8) ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಯಾರು?

ಅ. ದೊಡ್ಡಮೇಟಿ ಅಂದಾನಪ್ಪ
ಬ. ರೊದ್ದ ಶ್ರೀನಿವಾಸರಾವ್
ಕ. ರಾ.ಹ.ದೇಶಪಾಂಡೆ
ಡ. ಅನ್ನದಾನಯ್ಯ ಪುರಾಣಿಕ ●

○●○●○●○●○●○●○●○

9) ಕರ್ನಾಟಕ ಏಕೀಕರಣ ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಅಮರಣಾಂತ ಉಪವಾಸ ಕೈಗೊಂಡಿದ್ದವರು ಯಾರು?

ಅ. ರಾ.ಹ.ದೇಶಪಾಂಡೆ
ಬ. ಅನ್ನದಾನಯ್ಯ ಪುರಾಣಿಕ
ಕ. ಅದರಗುಚ್ಚಿ ಶಂಕರಗೌಡ ●
ಡ. ರೊದ್ದ ಶ್ರೀನಿವಾಸರಾವ್

○●○●○●○●○●○●○●○

10) ಅಂದಾನಪ್ಪ ದೊಡ್ಡಮೇಟಿ ಅವರು ಕರ್ನಾಟಕ ರಚನೆಗೆ ಒತ್ತಾಯಿಸಿ ಏಪ್ರಿಲ್ 01, 1947ರಂದು ಖಾಸಗಿ ಗೊತ್ತುವಳಿ ಮಂಡಿಸಿದರು. ಅಂದಹಾಗೆ ಈ ಗೊತ್ತುವಳಿ ಎಷ್ಟು ಪರ ಹಾಗೂ ವಿರೋಧ ಮತಗಳನ್ನು ಪಡೆಯಿತು?

ಅ. 51 - 15
ಬ. 54 - 12
ಕ. 67 - 09
ಡ. 60 - 06 ●

○●○●○●○●○●○●○●○

11) 'ಹೊತ್ತಿತೋ ಹೊತ್ತಿತು ಕನ್ನಡದ ದೀಪ....' ಎಂಬ ಭಾವಗೀತೆಯ ಮೂಲಕ ಕನ್ನಡದ ಜ್ಯೋತಿಯನ್ನು ಬೆಳಗಿದ ಸಾಹಿತಿ ಯಾರು?

ಅ. ಕೆ.ಎಸ್.ನರಸಿಂಹ ಸ್ವಾಮಿ
ಬ. ಚಂದ್ರಶೇಖರ ಕಂಬಾರ್
ಕ. ಸಿದ್ದಯ್ಯ ಪುರಾಣಿಕ ●
ಡ. ಕುವೆಂಪು

○●○●○●○●○●○●○●○

12) ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಯಾವಾಗ?

ಅ. 1911
ಬ. 1913
ಕ. 1915 ●
ಡ. 1918

○●○●○●○●○●○●○●○

13) ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಯಾರು?

ಅ. ಮುಮ್ಮಡಿ ಕೃಷ್ಣರಾಜ ಒಡೆಯರ್
ಬ. ನಾಲ್ವಡಿ ಕೃಷ್ಣರಾಜ ಒಡೆಯರ್ ●
ಕ. ಚಾಮರಾಜ ಒಡೆಯರ್
ಡ. ಜಯಚಾಮರಾಜ. ಒಡೆಯರ್

○●○●○●○●○●○●○●○

14) 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ಕೊಡಲು ಪ್ರಾರಂಭಿಸಿದ್ದು ಯಾವಾಗ?

ಅ. 1960
ಬ. 1962
ಕ. 1964
ಡ. 1966 ●

○●○●○●○●○●○●○●○

15) ಹೈದರಾಬಾದ್ ಕರ್ನಾಟಕದಲ್ಲಿ 1856ಕ್ಕಿಂತ ಮೊದಲೇ 'ಕನ್ನಡ ಮಾಧ್ಯಮ' ಶಿಕ್ಷಣಕ್ಕಾಗಿ ಚಳುವಳಿ ಪ್ರಾರಂಭಿಸಿದವರು ಯಾರು?

ಅ. ಚನ್ನಬಸಪ್ಪ ●
ಬ. ಮಂಗಳವೇಡ ಶ್ರೀನಿವಾಸರಾಯರು
ಕ. ಸಿದ್ದಪ್ಪ ಕಂಬಳಿ
ಡ. ಆರ್.ಆರ್.ದಿವಾಕರ್

○●○●○●○●○●○●○●○

16) 'ಕನ್ನಡ ಧ್ವಜ'ವನ್ನು ವಿನ್ಯಾಸಗೊಳಿಸಿದವರು ಯಾರು?

ಅ. ತ.ರಾ.ಸುಬ್ಬರಾಯರು
ಬ. ರಂ.ಶ್ರೀ.ಮುಗಳಿ
ಕ. ಮ.ರಾಮಮೂರ್ತಿ ●
ಡ. ಆಲೂರು ವೆಂಕಟರಾಯರು

○●○●○●○●○●○●○●○

17) ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ಎಷ್ಟು ಜಿಲ್ಲೆಗಳಿದ್ದವು?

ಅ. 18
ಬ. 19 ●
ಕ. 21
ಡ. 22

○●○●○●○●○●○●○●○

18) 1886ರಲ್ಲಿ ಕೊಡಗಿನ ಶಿಲಾಶಾಸನಗಳನೆಲ್ಲ ಸಂಗ್ರಹಿಸಿ 'ಎಪಿಗ್ರಾಫಿಯ ಕರ್ನಾಟಕ' ಎಂಬ ಹೆಸರಿನಲ್ಲಿ ಶಿಲಾಶಾಸನಗಳ ಮಾಲಿಕೆಗೆ ನಾಂದಿ ಹಾಡಿದ ಇತಿಹಾಸಕಾರ ಯಾರು?

ಅ. ಥಾಮಸ್ ಕಾರ್ಲೈಲ್
ಬ. ಕಾರ್ಲ್ ಮಾರ್ಕ್ಸ
ಕ. ರೋಬೇರ್ತ್ ಬ್ರೂಸ್ ಫೂಟೇ
ಡ. ಬಿ.ಎಲ್.ರೈಸ್ ●

○●○●○●○●○●○●○●○

19) 'ಮುಳ್ಳಯ್ಯನಗಿರಿ ಬೆಟ್ಟ'ವು ಕರ್ನಾಟಕದ ಅತ್ಯಂತ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪರ್ವತದ ಎತ್ತರ ಎಷ್ಟು?

ಅ. 6307 ಅಡಿಗಳು
ಬ. 6312 ಅಡಿಗಳು
ಕ. 6317 ಅಡಿಗಳು
ಡ. 6330 ಅಡಿಗಳು ●

○●○●○●○●○●○●○●○

20) ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?

ಅ. ಬೆಂಗಳೂರು ವಿ.ವಿ
ಬ. ಕುವೆಂಪು ವಿ.ವಿ
ಕ. ಕರ್ನಾಟಕ ವಿ.ವಿ
ಡ. ಮೈಸೂರು ವಿ.ವಿ ●

○●○●○●○●○●○●○●○

21. ಮೈಸೂರು ಅರಸರು ಶೇ. 100% ಶುದ್ದ ರೇಷ್ಮೆ ಹಾಗೂ ಶುದ್ದ ಚಿನ್ನದ ಜರಿ ಒಳಗೊಂಡಿರುವ ರೇಷ್ಮೆ ಸೀರೆ ತಯಾರಿಸುವ ಗಿರಣಿಗಳನ್ನು ಸ್ಥಾಪಿಸಿದ್ದು ಯಾವಾಗ?

ಅ. 1912 ●
ಬ. 1915
ಕ. 1918
ಡ. 1921

○●○●○●○●○●○●○●○

22) ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಗಂಧದ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದು ಯಾವಾಗ?

ಅ. 1906
ಬ. 1910
ಕ. 1916 ●
ಡ. 1920

○●○●○●○●○●○●○●○

23) 'ಭಾರತ ರತ್ನ ಪ್ರಶಸ್ತಿ'ಯು ಭಾರತದ ನಾಗರೀಕರಿಗೆ ನೀಡಬಹುದಾದ ಅತ್ಯುನ್ನತ ಪ್ರಶಸ್ತಿ. ಎಷ್ಟು ಜನ ಕನ್ನಡಿಗರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ?

ಅ. 2 ಜನ
ಬ. 3 ಜನ ●
ಕ. 4 ಜನ
ಡ. 5 ಜನ

○●○●○●○●○

24) 14ನೇ ಶತಮಾನದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ 'ಬಿದ್ರಿ ಕಲೆ'ಯು ದೇಶ-ವಿದೇಶದಲ್ಲಿ ಬಹಳ ಹೆಸರುವಾಸಿಯಾಗಿದೆ. ಇಂತಹ ಬಿದ್ರಿ ಕಲೆಯ ಉಡುಗೊರೆಯನ್ನು ಯಾವ ಆಟದಲ್ಲಿ ಗಣ್ಯರಿಗೆ ನೀಡಲಾಗುತ್ತದೆ?

ಅ.ಒಲಂಪಿಕ್ ಗೇಮ್ಸ್
ಬ. ವಿಂಬಲ್ಡನ್ ಗೇಮ್ಸ್
ಕ. ಕಾಮನ್ವೆಲ್ತ್ ಗೇಮ್ಸ್ ●
ಡ. ಏಶಿಯನ್ ಗೇಮ್ಸ್

○●○●○●○●○●○●○●○

25)ಡಾ.ಜಿ.ಎಸ್.ಶಿವರುದ್ರಪ್ಪನವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿದ್ದು ಯಾವಾಗ?

ಅ. 01 ನವೆಂಬರ್ 2003
ಬ. 01 ನವೆಂಬರ್ 2004
ಕ. 01 ನವೆಂಬರ್ 2005
ಡ. 01 ನವೆಂಬರ್ 2006 ●

○●○●○●○●○●○●○●○

26) ಡಾ.ರಾಜ್ ಕುಮಾರ್ ಅವರಿಗೆ ಎಷ್ಟು ಬಾರಿ 'ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ' ಲಭಿಸಿದೆ?

ಅ. 8
ಬ. 9
ಕ. 10 ●
ಡ. 11

○●○●○●○●○●○●○●○

27)ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆಕಂಡ ಚಲನಚಿತ್ರ ಯಾವುದು?

ಅ. ಭಕ್ತದೃವ
ಬ. ಸದಾರಮೆ
ಕ. ಸತಿ ಸುಲೋಚನ ●
ಡ. ಸಂಸಾರ ನೌಕೆ.

○●○●○●○●○●○●○●○

28)'ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು......' ಈ ಸುಮಧುರ ಗೀತೆ ಯಾವ ಚಿತ್ರದ್ದು?

ಅ. ವೀರಕೇಸರಿ
ಬ. ರಣಧೀರ ಕಂಠೀರವ
ಕ. ಕಠಾರಿ ವೀರ
ಡ. ವಿಜಯನಗರದ ವೀರಪುತ್ರ ●

○●○●○●○●○●○●○●○

29) 'ಹಚ್ಚೇವು ಕನ್ನಡದ ದೀಪ' ಈ ಸುಮಧುರ ಭಾವಗೀತೆಯನ್ನು ರಚಿಸಿದವರು ಯಾರು?

ಅ. ಕುವೆಂಪು
ಬ. ಕೆ.ಎಸ್.ನಿಸಾರ್ ಅಹಮದ್
ಕ. ಡಿ.ಎಸ್.ಕರ್ಕಿ ●
ಡ. ಜಿ.ಎಸ್.ಶಿವರುದ್ರಪ್ಪ

○●○●○●○●○●○●○●○
Posted by :
Dayanand.m.donagapure
At post :Gorta (B)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ